ಕೇಂದ್ರ ಬಜೆಟ್ 2017-18 ಮಂಡನೆಯಾಗಲಿರುವ ಸಂದರ್ಭದಲ್ಲಿ ಕಳೆದ 2016-17ರಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿರುವ ಕೇಂದ್ರ ಬಜೆಟ್ ನ ಕುರಿತು ಅವಲೋಕನ ಮಾಡಲಾಗಿದೆ.
ಕೇಂದ್ರ ಬಜೆಟ್ 2017-18 ಮಂಡನೆಯಾಗಲಿರುವ ಸಂದರ್ಭದಲ್ಲಿ ಕಳೆದ 2016-17ರಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿರುವ ಕೇಂದ್ರ ಬಜೆಟ್ ನ ಕುರಿತು ಅವಲೋಕನ ಮಾಡಲಾಗಿದೆ.
2016-17ರ ಬಜೆಟ್ ನಲ್ಲಿರುವ ಆರ್ಥಿಕ ಪ್ರಗತಿಯ ಸ್ತಂಭಗಳು, ತುಟ್ಟಿ-ಅಗ್ಗವಾಗಿರುವ ಸರಕುಗಳು, ತೆರಿಗೆ ಮತ್ತು ರಿಯಾಯತಿ, ಏರಿಕೆ ಮತ್ತು ಇಳಿಕೆ ಇತ್ಯಾದಿ ಅಂಶಗಳ ಸಂಕ್ಷಿಪ್ತ ನೋಟ ಇಲ್ಲಿದೆ.
ವಿತ್ತ ಸಚಿವ ಅರುಣ್ ಜೇಟ್ಲಿ ಬಡವರು ಮತ್ತು ರೈತರನ್ನು ಗಮನದಲ್ಲಿಟ್ಟುಕೊಂಡು, ಮಧ್ಯಮ ವರ್ಗದವರಿಗೆ ಲಾಭವಿಲ್ಲದ , ಶ್ರೀಮಂತರಿಂದ ಹೆಚ್ಚು ತೆರಿಗೆ ಸಂಗ್ರಹಿಸುವ ಉದ್ದೇಶದಿಂದ 2016-17ರ ಕೇಂದ್ರ ಆಯವ್ಯಯವನ್ನು 2016 ಫೆಬ್ರವರಿ 29ರಂದು ಮಂಡಿಸಿದ್ದರು.
ಕೇಂದ್ರ ಬಜೆಟ್ 2016-17ರ ಆರ್ಥಿಕ ಪ್ರಗತಿಯ ಆಧಾರ ಸ್ತಂಭಗಳು
* ಕೃಷಿ, ಗ್ರಾಮೀಣ ಮೂಲಸೌಕರ್ಯ ವೃದ್ಧಿ, ಸಾಮಾಜಿಕ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿ, ಕೌಶಲ್ಯ ವೃದ್ಧಿ, ಉದ್ಯೋಗಾವಕಾಶ ಸೃಷ್ಟಿ, ಉದ್ಯಮ ಸ್ನೇಹಿ ನೀತಿ, ಆರ್ಥಿಕ ಶಿಸ್ತು, ತೆರಿಗೆ ಸುಧಾರಣೆ ಮತ್ತು ದೇಶವನ್ನು ಜ್ಞಾನದ ಕೇಂದ್ರವಾಗಿ ರೂಪಿಸುವುದು. ಇವು ಕಳೆದ ಬಾರಿಯ ಬಜೆಟ್ ಪ್ರಮುಖ ಅಂಶಗಳಾಗಿದ್ದವು.
ಕೇಂದ್ರ ಬಜೆಟ್ 2016-17 ನಲ್ಲಿ ತುಟ್ಟಿ-ಅಗ್ಗ
* ತುಟ್ಟಿ: ತಂಬಾಕು ಉತ್ಪನ್ನಗಳು, ಬ್ರಾಂಡೆಡ್ ಬಟ್ಟೆಗಳು, ಐಷಾರಾಮಿ ಕಾರುಗಳು, ಗುಟ್ಕಾ(ಅಡಿಕೆ ಉತ್ಪನ್ನಗಳು), ಚಿನ್ನಾಭರಣ, ವಜ್ರಾಭರಣ
ಅಗ್ಗ: ಬೀಡಿ, ಮದ್ಯ, ಬೆಳ್ಳಿ ಆಭರಣಗಳು, ಟಿವಿ, ಕಂಪ್ಯೂಟರ್, ರೆಫ್ರೀಜರೇಟರ್, ವಾಷಿಂಗ್‌ಮೆಷಿನ್, ಸೌಂದರ್ಯವರ್ಧಕಗಳು, ಮೊಬೈಲ್, ಟ್ಯಾಬ್ಲೆಟ್ ಗಳು, ಎ.ಸಿ, ಎಲ್.ಇ.ಡಿ.ಬಲ್ಬ್‌ಗಳು, ಪಾದರಕ್ಷೆಗಳು, ಡಯಾಲಿಸಿಸ್ ಯಂತ್ರಗಳ ಮೇಲಿನ ಸುಂಕ ಇಳಿಕೆ.
ತೆರಿಗೆ ಏರಿಕೆ
* ಸ್ಟಾರ್ಟ್ ಅಪ್ ಗಳಿಗೆ ಶೇ 100ರಷ್ಟು ತೆರಿಗೆ ವಿನಾಯಿತಿ ಘೋಷಣೆ. ಐಷಾರಾಮಿ ವಸ್ತುಗಳ ಮೇಲೆ ತೆರಿಗೆ ಹೆಚ್ಚಳ.
* ಐಷಾರಾಮಿ ಕಾರುಗಳ ಮೇಲೆ ಶೇ 4 ರಷ್ಟು ಪೆಟ್ರೋಲ್, ಡೀಸೆಲ್ ಸೆಸ್ ಹೆಚ್ಚಳ
* ಐಷಾರಾಮಿ ಸರಕು ಹಾಗೂ ಎಸ್ ಯುವಿ ಕಾರಿನ ಮೇಲೆ ಶೇ1ರಷ್ಟು ತೆರಿಗೆ.
* ಬೀಡಿ ಬಿಟ್ಟು ಎಲ್ಲಾ ತಂಬಾಕು ಉತ್ಪನ್ನಗಳ ಬೆಲೆ ಏರಿಕೆ.
* ತಂಬಾಕು ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಶೇ 10 ರಿಂದ 15ರಷ್ಟು ಏರಿಕೆ. ಅಂದರೆ, ಸಿಗರೇಟು, ಗುಟ್ಕಾ ಬೆಲೆ ಏರಿಕೆ.
* ಬ್ರ್ಯಾಂಡೆಡ್ ಬಟ್ಟೆಗಳು. ಶರ್ಟು, ಪ್ಯಾಂಟು, ಚೂಡಿದಾರು ಮತ್ತಿತ್ತರ ಡ್ರೆಸ್ ಮೆಟಿರಿಯಲ್ಸ್.
* ಚಿನ್ನಾಭರಣ, ವಜ್ರಗಳು ಮತ್ತಷ್ಟು ದುಬಾರಿ.
* ಜಿಮ್, ಹೊಟೇಲ್ ರೂಮ್, ರೇಡಿಯೋ ಟ್ಯಾಕ್ಸಿ, ಜೀವ ವಿಮೆ.
* ಏಕ್ಸ್ ಪ್ರೆಸ್ ರೈಲು ಹಾಗೂ ವಿಮಾನಯಾನ ಪ್ರಯಾಣ ದರ ಏರಿಕೆ
* ಮಿನರಲ್ ವಾಟರ್, ಸಕ್ಕರೆ ಅಂಶವುಳ್ಳ ಪಾನೀಯ ಬೆಲೆ ದುಬಾರಿ.
ರಿಯಾಯತಿ/ಇಳಿಕೆ
* 60 ಚದರ ಮೀಟರ್ ತನಕದ ಮನೆ ನಿರ್ಮಾಣದ ಮೇಲೆ ಸೇವಾ ತೆರಿಗೆ ವಿನಾಯಿತಿ.
* ಇಪಿಎಫ್ಒ ನೀಡುವ ಸೇವೆಗಳಿಗೆ ಸೇವಾ ತೆರಿಗೆ ಅನ್ವಯವಾಗುವುದಿಲ್ಲ.
* ಮದ್ಯದ ಮೇಲೆ ಯಾವುದೇ ಅಬಕಾರಿ ಸುಂಕ ಹೆಚ್ಚಳವಿಲ್ಲ.
* ಡಯಾಲಿಸೀಸ್ ಯಂತ್ರಗಳ ಮೇಲಿನ ತೆರಿಗೆ ಇಳಿಕೆ.
* ಸಣ್ಣ ತೆರಿಗೆದಾರರಿಗೆ: ಬಾಡಿಗೆ ಭತ್ಯೆ ಮಿತಿ ವಾರ್ಷಿಕ 24 ಸಾವಿರ ರೂ.ನಿಂದ 60,000ರೂ.ಗೆ ಹೆಚ್ಚಳ.
* 50 ಲಕ್ಷ ರು ಮೌಲ್ಯದ ತನಕ ಮನೆ ಖರೀದಿ ಮಾಡುವವರಿಗೆ 50 ರೂ. ವಿನಾಯಿತಿ
ಬಜೆಟ್ ಸಂಕ್ಷಿಪ್ತ ನೋಟ
ವರಮಾನ ಮತ್ತು ಕೊರತೆ - 2015-16 ರ ಹೋಲಿಕೆಯೊಂದಿಗೆ
2016-17ರ ಬಜೆಟ್ ಸಾರಾಂಶ(ಕೋಟಿ ರೂ.ಗಳಲ್ಲಿ)
| 2015-16 | 2015-16 | 2016-17 | |
|---|---|---|---|
| ವಿವರ | ಬಜೆಟ್ ಅಂದಾಜು | ಪರಿಷ್ಕೃತ ಅಂದಾಜು | ಬಜೆಟ್ ಅಂದಾಜು |
| ವರಮಾನ ಜಮೆ | 11,41,575 | 12,06,084 | 13,77,022 |
| ಬಂಡವಾಳ ಜಮೆ | 6,35,902 | 5,79,307 | 6,01,038 |
| ಒಟ್ಟು ಜಮೆ | 17,77,477 | 17,85,391 | 19,78,060 |
| ಯೋಜನೇತರ ವೆಚ್ಚ | 13,12,200 | 13,08,194 | 14,28,050 |
| ಯೋಜನಾ ವೆಚ್ಚ | 4,65,277 | 4,77,197 | 5,50,010 |
| ಒಟ್ಟು ವೆಚ್ಚ | 17,77,477 | 17,85,391 | 19,78,060 |
| ವರಮಾನ ಕೊರತೆ | 3,94,472 | 3,41,589 | 3,54,015 |
| ವಿತ್ತೀಯ ಕೊರತೆ | 5,55,649 | 5,35,090 | 5,33,904 |
| ಮೂಲ ಕೊರತೆ | 99,504 | 92,469 | 41,234 |
More From GoodReturns

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

LPG Cylinder Shortage Live Updates: ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ಪಿಎಂ ಮೋದಿ ಮಹತ್ವದ ಸಭೆ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications