ಜಗತ್ತಿನ ಡೈನಾಮಿಕ್ ನಗರಗಳಲ್ಲಿ ನಮ್ಮ ಬೆಂಗಳೂರಿಗೆ ಪ್ರಥಮ ಹಾಗೂ ಹೈದರಾಬಾದ್ ಗೆ ಐದನೇ ಗರಿ. ಇದು ಭಾರತೀಯರ ಚಲನಶೀಲತೆ, ಕ್ರಿಯಾಶಿಲತೆಗೆ ದಕ್ಕಿದ ವಿಶ್ವ ಕೀರಿಟ.
ಜಗತ್ತಿನ ಡೈನಾಮಿಕ್ ನಗರಗಳಲ್ಲಿ ನಮ್ಮ ಬೆಂಗಳೂರಿಗೆ ಪ್ರಥಮ ಹಾಗೂ ಹೈದರಾಬಾದ್ ಗೆ ಐದನೇ ಗರಿ. ಇದು ಭಾರತೀಯರ ಚಲನಶೀಲತೆ, ಕ್ರಿಯಾಶಿಲತೆಗೆ ದಕ್ಕಿದ ವಿಶ್ವ ಕೀರಿಟ.
ವಿಶ್ವದ ಡೈನಾಮಿಕ್ ನಗರಗಳ ಪಟ್ಟಿಯನ್ನು JLL(Jones Lang LaSalle's) ಸಿಟಿ ಮೊಮೆಂಟಮ್ ಇಂಡೆಕ್ಸ್(CMI) 2017 ತನ್ನ ನಾಲ್ಕನೇ ವಾರ್ಷಿಕ ವರದಿಯಲ್ಲಿ ಮಂಡಿಸಿದೆ. ಡೈನಾಮಿಕ್ ಟಾಪ್ 10 ನಗರಗಳ ಸಂಕ್ಷೀಪ್ತ ನೋಟ ಇಲ್ಲಿದೆ.
ಮಾನದಂಡ ಏನು?
ಅನ್ವೇಷಣೆ, ತಂತ್ರಜ್ಞಾನ, ನಗರಗಳ ಆರ್ಥಿಕ ಬದಲಾವಣೆಯ ವೇಗ, ಜಾಗತಿಕ ಸಂಪರ್ಕದಲ್ಲಿ ಬಲಶಾಲಿ, ವಾಣಿಜ್ಯಾತ್ಮಕ ರಿಯಲ್ ಎಸ್ಟೇಟ್ ಮಾರುಕಟ್ಟೆ ಮಾನದಂಡಗಳ ಆಧಾರದ ಮೇಲೆ ವಿಶ್ವದ ಡೈನಾಮಿಕ್ ನಗರಗಳನ್ನು ನಿರ್ಧರಿಸಲಾಗುತ್ತದೆ.
ಉದಯೋನ್ಮುಖ ವ್ಯಾಪಾರ ಕೇಂದ್ರಗಳು, ಸಣ್ಣ ಮತ್ತು ದಿರ್ಘಾವಧಿಗೆ ಚಲನಶೀಲತೆಯನ್ನು ನಿರ್ವಹಿಸುವ ಸಾಮರ್ಥ್ಯವಿರುವ ನಗರಗಳನ್ನು ಗುರುತಿಸಲಾಗುತ್ತದೆ.
ಬೆಂಗಳೂರು
ವಿಶ್ವದ ಅಗ್ರ ಹತ್ತು ಡೈನಾಮಿಕ್ ನಗರಗಳ ಸಾಲಿನಲ್ಲಿ ಸಿಲಿಕಾನ್ ಖ್ಯಾತಿಯ ನಮ್ಮ ಬೆಂಗಳೂರಿಗೆ ಅಗ್ರಗಣ್ಯ ಮುಕುಟ. ಭಾರತದ ಪ್ರಸಿದ್ದ ಟೆಕ್ ಮತ್ತು ನವೋದ್ಯಮಗಳ ನೆಚ್ಚಿನ ಕೇಂದ್ರ ಬೆಂಗಳೂರು ಸ್ಟಾರ್ಟ್ಅಪ್ಸ್ ಗಳಿಗೂ ಮುಂಚೂಣಿಯಲ್ಲಿರುವ ನಗರ.
ಹೈದರಾಬಾದ್
ವಿಶ್ವದ ಡೈನಾಮಿಕ್ ನಗರಗಳಲ್ಲಿ 5ನೇ ಸ್ಥಾನದಲ್ಲಿರುವ ಹೈದರಾಬಾದ್ ಭಾರತದಲ್ಲಿ ಹೆಚ್ಚಿನ ವಿಶೇಷ ಆರ್ಥಿಕ ವಲಯಗಳನ್ನು ಹೊಂದಿದೆ. ಲನಲಿ ಪ್ಲಾನೇಟ್ ದರ್ಜೆಯ ಪ್ರಕಾರ ಹೈದರಾಬಾದ್ ಪ್ರವಾಸೋದ್ಯಮಲ್ಲಿ ವಿಶ್ಚದಲ್ಲೆ 3ನೇ ಅತ್ಯುತ್ತಮ ನಗರ ಎಂಬ ದರ್ಜೆ ಪಡೆದಿದೆ. ಭಾರತದ ಜಿನೋಮ್ ವ್ಯಾಲಿ ಎಂದು ಪರಿಚಿತವಾಗಿದ್ದು, ಹೊಸದಾಗಿ ರೂಪಗೊಂಡ ತೆಲಂಗಾಣ ರಾಜಧಾನಿ ವಿಶ್ವದ ಔಷದಿಯ ಉದ್ಯಮ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ.
ಇನ್ನಿತರ ನಗರಗಳು
ಎರಡನೇ ಸ್ಥಾನದಲ್ಲಿ ಹೊ ಚಿ ಮಿನ್ಹ್(ವಿಯಟ್ನಾಂ), ಮೂರನೇ ಸ್ಥಾನದಲ್ಲಿ ಸಿಲಿಕಾನ್ ವ್ಯಾಲಿ(ಯುಎಸ್ಎ), ನಾಲ್ಕನೇ ಸ್ಥಾನದಲ್ಲಿ ಶಾಂಘೈ(ಚೀನಾ), ಆರನೇ ಸ್ಥಾನದಲ್ಲಿ ಲಂಡನ್(ಯುಕೆ), ಏಳನೇ ಸ್ಥಾನದಲ್ಲಿ ಆಸ್ಟಿನ್(ಯುಎಸ್ಎ), ಎಂಟನೇ ಸ್ಥಾನದಲ್ಲಿ ಹನೋಯಿ(ವಿಯಟ್ನಾಂ), ಒಂಬತ್ತನೇ ಸ್ಥಾನದಲ್ಲಿ ಬಾಸ್ಟನ್(ಯುಎಸ್ಎ) ಮತ್ತು ಹತ್ತನೇ ಸ್ಥಾನದಲ್ಲಿ ನೈರೋಬಿ(ಕೀನ್ಯಾ) ಇದೆ. ಇವು ಜಗತ್ತಿನ ಇನ್ನಿತರ ಡೈನಾಮಿಕ್ ನಗರಗಳು ಎಂಬ ಗರಿಮೆಯನ್ನು ಪಡೆದಿವೆ.
More From GoodReturns

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

ಏಪ್ರಿಲ್ 1ರಿಂದ ಈ ರಾಜ್ಯದ ಸರ್ಕಾರಿ ಜನರಿಗೆ ಹೊಸ ಪಿಂಚಣಿ...ಕೊನೆಯ ಸಂಬಳದ 50%ನಷ್ಟು ಖಚಿತ! ಈ ಗುಡ್ನ್ಯೂಸ್ ಯಾರಿಗೆ?

Silver Rate Today: ಬೆಳ್ಳಿ ದರಕ್ಕೂ ತಟ್ಟಿದ ಇಸ್ರೇಲ್-ಇರಾನ್ ವಾರ್ ಬಿಸಿ! ಬೆಲೆ ಭಾರೀ ಏರಿಕೆ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ

ಶೀಘ್ರ ನಿವೃತ್ತಿ ಮತ್ತು ಆರ್ಥಿಕ ಸ್ವಾತಂತ್ರ್ಯ...ಭಾರತೀಯ ಯುವಕರಿಗಾಗಿ FIRE ಚಳುವಳಿ ರಹಸ್ಯಗಳು!



Click it and Unblock the Notifications