ಬಜೆಟ್ ಮಂಡನೆ: ಪಂಚರಾಜ್ಯಗಳಿಗೆ ಯೋಜನೆ ಘೋಷಿಸುವಂತಿಲ್ಲ

ದೇಶದ ಪಂಚರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವುದರಿಂದ 2017ನೇ ಸಾಲಿನ ಬಜೆಟ್ ನಲ್ಲಿ ಐದು ರಾಜ್ಯಗಳಲ್ಲಿ ಯಾವುದೇ ಘೋಷಣೆ ಮಾಡುವಂತೆ ಇಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.

ದೇಶದ ಪಂಚರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವುದರಿಂದ 2017ನೇ ಸಾಲಿನ ಬಜೆಟ್ ನಲ್ಲಿ ಐದು ರಾಜ್ಯಗಳಲ್ಲಿ ಯಾವುದೇ ಘೋಷಣೆ ಮಾಡುವಂತೆ ಇಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.

ಬಜೆಟ್ ಮಂಡನೆ: ಪಂಚರಾಜ್ಯಗಳಿಗೆ ಯೋಜನೆ ಘೋಷಿಸುವಂತಿಲ್ಲ

ಚುನಾವಣಾ ಆಯೋಗವು ಫೆಬ್ರವರಿ 1ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್ ಗೆ ಷರತ್ತು ಬದ್ಧ ಅನುಮತಿ ನೀಡಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಚುನಾವಣಾ ಆಯೋಗ ಸೋಮವಾರ ಸೂಚನೆ ನೀಡಿದ್ದು, ಚುನಾವಣೆ ನಡೆಯಲಿರುವ ಪಂಚರಾಜ್ಯಗಳಿಗೆ ಸಂಬಂಧಿಸಿದ ಅಭಿವೃದ್ಧಿ ಕೆಲಸಗಳನ್ನಾಗಲಿ ಅಥವಾ ವಿಶೇಷ ಯೋಜನೆಗಳನ್ನಾಗಲಿ ಈ ಬಜೆಟ್ ನಲ್ಲಿ ಘೋಷಣೆ ಮಾಡುವಂತಿಲ್ಲ ಎಂದು ತಿಳಿಸಿದೆ.

ಚುನಾವಣಾ ಆಯೋಗವು ನ್ಯಾಯಯುತ ಮತ್ತು ಮುಕ್ತ ಚುನಾವಣಾ ಪ್ರಕ್ರಿಯೆಗಾಗಿ ಕೇಂದ್ರ ಸರ್ಕಾರಕ್ಕೆ ಕೆಲ ಪ್ರಮುಖ ಸೂಚನೆಗಳನ್ನು ನೀಡುತ್ತಿದೆ. ಚುನಾವಣೆ ನಡೆಯುತ್ತಿರುವ ಪಂಚರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಂಡ ರಾಜ್ಯಗಳಿಗೆ ಸಂಬಂಧಿಸಿದಂತೆ ಯಾವುದೇ ಯೋಜನೆಗಳನ್ನು ಘೋಷಣೆ ಮಾಡದಂತೆ ಮತ್ತು ಬಜೆಟ್ ಮಂಡನೆಯಲ್ಲಿ ಆಯಾ ರಾಜ್ಯಗಳ ಕುರಿತು ಮಾಹಿತಿಯನ್ನು ಪ್ರಸ್ತಾಪ ಮಾಡದಂತೆ ಸೂಚನೆ ನೀಡಿದೆ.

ಫೆಬ್ರವರಿ 4 ರಿಂದ ಮಾರ್ಚ್‌ 8ರ ವರೆಗೆ ಚುನಾವಣೆ ನಡೆಯಲಿರುವುದರಿಂದ ಈ ಪಂಚರಾಜ್ಯಗಳಿಗೆ ಸಂಬಂಧಿಸಿದ ಯಾವುದೇ ಘೋಷಣೆಗಳು ಮತದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಕೇಂದ್ರ ಚುನವಣಾ ಆಯೋಗದ ಹೇಳಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+