For Quick Alerts
ALLOW NOTIFICATIONS  
For Daily Alerts

ಎಟಿಎಂಗಳಿಂದ ಹಣ ಪಡೆಯುವ ಮಿತಿ ಮೇಲೆ ನಿರ್ಬಂಧ ಇಲ್ಲ

ನೋಟು ರದ್ದತಿ ನಂತರದಲ್ಲಿ ಎಟಿಎಂಗಳಿಂದ ಪ್ರತಿ ದಿನ ಹಣ ತೆಗೆಯುವುದರ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯ(ಆರ್‌ಬಿಐ) ತೆರವುಗೊಳಿಸಿದೆ.

By Siddu
|

ನೋಟು ರದ್ದತಿ ನಂತರದಲ್ಲಿ ಎಟಿಎಂಗಳಿಂದ ಪ್ರತಿ ದಿನ ಹಣ ತೆಗೆಯುವುದರ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯ(ಆರ್‌ಬಿಐ) ತೆರವುಗೊಳಿಸಿದೆ.

ಎಟಿಎಂಗಳಿಂದ ಹಣ ವಿತ್ ಡ್ರಾ ಮಾಡುವ ಹೊಸ ನಿಯಮ ಫೆಬ್ರವರಿ 1ರಿಂದ ಜಾರಿಗೆ ಬರಲಿದೆ.

ವಾರದ ಮಿತಿ 24 ಸಾವಿರ

ವಾರದ ಮಿತಿ 24 ಸಾವಿರ

ಆದರೆ ಒಂದು ವಾರದ ಅವಧಿಯಲ್ಲಿ ಉಳಿತಾಯ ಖಾತೆಯಿಂದ ವಿತ್ ಡ್ರಾ ಮಾಡಬಹುದಾದ ರೂ. 24 ಸಾವಿರ ಮೊತ್ತದ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ ಉಳಿತಾಯ ಖಾತೆದಾರರು ಎಟಿಎಂನಿಂದ ಒಂದು ವಾರಕ್ಕೆ ಗರಿಷ್ಠ ರೂ. 24 ಸಾವಿರ ಮಾತ್ರ ಪಡೆಯಬಹುದಾಗಿದೆ.

ಆರ್‌ಬಿಐ ಭರವಸೆ

ಆರ್‌ಬಿಐ ಭರವಸೆ

ಹೊಸ 500, 2000 ನೋಟುಗಳ ಮರು ಪೂರೈಕೆಯ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಒಂದು ವಾರದ ಮಿತಿಯನ್ನು ಶೀಘ್ರದಲ್ಲಿ ಪರಿಷ್ಕರಿಸಲಾಗುವುದು ಎಂದು ಆರ್‌ಬಿಐ ಭರವಸೆ ನೀಡಿದೆ. ಈಗಾಗಲೇ ನಿಗದಿಪಡಿಸಲಾಗಿರುವ ವಾರದ ಮಿತಿಯ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಪ್ರಸ್ತುತ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ಬ್ಯಾಂಕುಗಳಿಗೆ ಸ್ವಾತಂತ್ರ್ಯ

ಬ್ಯಾಂಕುಗಳಿಗೆ ಸ್ವಾತಂತ್ರ್ಯ

ನೋಟು ರದ್ದತಿ ಪೂರ್ವದಲ್ಲಿ (ನವೆಂಬರ್‌ 8) ಇದ್ದಂತೆ ತಮ್ಮ ಎಟಿಎಂಗಳಿಂದ ದಿನವೊಂದಕ್ಕೆ ಗ್ರಾಹಕರು ವಿತ್ ಡ್ರಾ ಮಾಡಬಹುದಾದ ಹಣಕ್ಕೆ ಮಿತಿ ನಿಗದಿಪಡಿಸಲು ಬ್ಯಾಂಕುಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಇದೆ ಎಂದು ಆರ್‌ಬಿಐ ಹೇಳಿದೆ.

ನಗದು ಕೊರತೆಗೆ ಕಾರಣ

ನಗದು ಕೊರತೆಗೆ ಕಾರಣ

ಪ್ರಧಾನಿ ಮೋದಿಯವರು ನವೆಂಬರ್ 8ರಂದು ನೋಟುಗಳ ಚಲಾವಣೆಯನ್ನು ರದ್ದು ಪಡಿಸಿದ ನಂತರ ದೇಶದಲ್ಲಿ ನೋಟುಗಳ ಕೊರತೆ ಉಂಟಾಗಿ ಆರ್ಥಿಕ ಬಿಕ್ಕಟ್ಟು ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಎಟಿಎಂಗಳಿಂದ ಹಣ ಪಡೆಯುವುದರ ಮೇಲೆ ಆರ್‌ಬಿಐ ಮಿತಿ ಹೇರಿತ್ತು.

ಗಮನಿಸಬೇಕಾದ ಅಂಶಗಳು

ಗಮನಿಸಬೇಕಾದ ಅಂಶಗಳು

* ಎಟಿಎಂನಿಂದ ಹಣ ವಿತ್ ಡ್ರಾ ಮಾಡುವ ಮಿತಿ ಫೆಬ್ರವರಿ 1ರಿಂದ ರದ್ದು
* ಹಿಂದಿನಂತೆ ವಾರಕ್ಕೆ ರೂ. 24 ಸಾವಿರ ವಿತ್ ಡ್ರಾ ಮಿತಿಯಲ್ಲಿ ಬದಲಾವಣೆ ಇಲ್ಲ
* ಚಾಲ್ತಿ ಖಾತೆ, ಓವರ್‌ ಡ್ರಾಫ್ಟ್‌ ಖಾತೆ, ತುರ್ತು ಸಾಲ ಖಾತೆಯಿಂದ ಹಣ ಪಡೆಯುವ ಮಿತಿ ರದ್ದು

Read more about: rbi atm ಆರ್‌ಬಿಐ
English summary

RBI Removes Cash withdrawal limits from ATMs

Reserve Bank of India (RBI) removed the limits on withdrawals from current accounts, but kept the overall limit at Rs 24,000 a week for savings bank account.
Story first published: Tuesday, January 31, 2017, 11:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X