ನೋಟು ರದ್ದತಿ ದೇಶದ ಆರ್ಥಿಕ ಬೆಳವಣಿಗೆ, ವಿತ್ತಿಯ ಕೊರತೆ, ಉದ್ಯೋಗ ಮತ್ತು ತೆರಿಗೆ ಮೇಲೆ ಭಾರಿ ಪರಿಣಾಮ ಬೀರಿದೆ. ಇಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಲಿರುವ 2017ರ ಬಜೆಟ್ ನಲ್ಲಿ ಈ 11 ಪ್ರಮುಖ ಅಂಶಗಳು ಇರಲಿವೆ.
ನೋಟು ರದ್ದತಿ ದೇಶದ ಆರ್ಥಿಕ ಬೆಳವಣಿಗೆ, ವಿತ್ತಿಯ ಕೊರತೆ, ಉದ್ಯೋಗ ಮತ್ತು ತೆರಿಗೆ ಮೇಲೆ ಭಾರಿ ಪರಿಣಾಮ ಬೀರಿದೆ. ಇಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಲಿರುವ 2017ರ ಬಜೆಟ್ ನಲ್ಲಿ ಈ 11 ಪ್ರಮುಖ ಅಂಶಗಳನ್ನು ನಿರೀಕ್ಷಿಸಬಹುದಾಗಿದೆ.

1. ನಗದು ವ್ಯವಹಾರಕ್ಕಾಗಿ ಜನರನ್ನು ಉತ್ತೇಜಿಸುವುದಕ್ಕಾಗಿ ಕಾರ್ಡ್ ಮತ್ತು ಡಿಜಿಟಲ್ ತೆರಿಗೆ ರಿಯಾಯಿತಿ, ಇನ್ಸೆಂಟಿವ್ಸ್ ಘೋಷಣೆ ಸಾಧ್ಯತೆ
2. ತೆರಿಗೆಯ ಕನಿಷ್ಟ ಮಿತಿಯಲ್ಲಿ ಹೆಚ್ಚಳ, ವಿನಾಯಿತಿ ಮಿತಿಯಲ್ಲಿ ಹೆಚ್ಚಳ, 80c ಅಡಿಯಲ್ಲಿ ತೆರಿಗೆ ವಿನಾಯಿತಿ, ಹಿರಿಯ ನಾಗರಿಕರಿಗೆ ವಿನಾಯಿತಿ ಮಿತಿ, EPF, PPF, NPS ಹೂಡಿಕೆಗೆ ಪ್ರೋತ್ಸಾಹ, ಇಎಂಐ ಮೇಲೆ ಕಡಿತ, ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ಇತ್ಯಾದಿ ಅಂಶಗಳಲ್ಲಿ ಹಲವು ಬದಲಾವಣೆಗಳು ಸಾಧ್ಯತೆ ಇದೆ.
3. ತೆರಿಗೆ ಹಂತಗಳ ಪುನರ್ ರಚನೆ ಜತೆಗೆ ಕಾರ್ಪೊರೇಟ್ ಆದಾಯ ತೆರಿಗೆ ದರಗಳನ್ನು ಕಡಿತ ಸಾಧ್ಯತೆ
4. ಸಂಬಳ ಪಡೆಯುವ ನೌಕರರು ಭತ್ಯೆ, ವೈದ್ಯಕೀಯ ವೆಚ್ಚ, ಮಕ್ಕಳ ಶಿಕ್ಷಣ, ಮನೆ ಬಾಡಿಗೆ, ರಜೆ ಪ್ರಯಾಣ ಹೀಗೆ ಹಲವಾರು ಅವಕಾಶ/ಪ್ರಯೋಜನಗಳ ಮೇಲೆ ತೆರಿಗೆ ವಿನಾಯಿತಿ ನಿರೀಕ್ಷೆ
5. ಆದಾಯ ತೆರಿಗೆ ಕಾಯಿದೆ ಪ್ರಕಾರ 80C ಅಡಿಯಲ್ಲಿ ವಿನಾಯಿತಿ ಹಾಗೂ ದೇಶದ ಹಿರಿಯ ನಾಗರಿಕರಿಗೆ ವಿನಾಯಿತಿ ಮಿತಿ
6. ಇಪಿಎಫ್, ಪಿಪಿಎಫ್, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ(ಎನ್ಪಿಎಸ್)ಯಲ್ಲಿ ಹೂಡಿಕೆ ಹೆಚ್ಚಳಕ್ಕೆ ಉತ್ತೇಜನ
7. ಪ್ರಸ್ತುತ ಬಜೆಟ್ ನಲ್ಲಿ ಹೆಚ್ಚು ಮೊತ್ತದ ಗೃಹಸಾಲದ ಮೇಲೆ ಕಡಿಮೆ ಬಡ್ಡಿದರ ವಿಧಿಸುವ ಸಾಧ್ಯತೆ
8. ದೇಶದಲ್ಲಿನ ನವೋದ್ಯಮಗಳ ಸಬಲೀಕರಣಕ್ಕಾಗಿ ಮೂರು ವರ್ಷಗಳ ತೆರಿಗೆ ಮುಕ್ತ ಅವಧಿಯನ್ನು ಏಳು ವರ್ಷಗಳಿಗೆ ಹೆಚ್ಚಿಸುವ ಸಾಧ್ಯತೆ
9. ವಿದೇಶಿ ನೇರ ಹೂಡಿಕೆ(FDI), ಉದ್ದಿಮೆ ಬಂಡವಾಳದಾರರು(VCs), ಖಾಸಗಿ ಇಕ್ವಿಟಿ (PE, ಸಣ್ಣ ಉದ್ಯಮಗಳು ಮತ್ತು ಏಂಜಲ್ ಹೂಡಿಕೆದಾರರಿಗೆ ಅನುಕೂಲಕರವಾದ ವಾತಾವರಣ ನಿರ್ಮಿಸುವ ದೃಷ್ಟಿಯಿಂದ ವಿದೇಶಿ ಒಳಹರಿವಿಗೆ ಪ್ರಾಮುಖ್ಯತೆ
10 .ಮೇಕ್ ಇನ್ ಇಂಡಿಯ ಯೋಜನೆಯನ್ನು ಉತ್ತೇಜನಗೊಳಿಸಲು ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ, ಉದ್ಯೋಗ ಹೆಚ್ಚಳ, ರಪ್ತು ಪುನಶ್ಚೇತನ, ವಜ್ರ-ಆಭರಣಗಳ ಕ್ಷೇತ್ರಗಳಿಗೆ ಪ್ರೋತ್ಸಾಹ
11. ರಾಷ್ಟ್ರಮಟ್ಟದ ಏಕರೂಪದ ತೆರಿಗೆ ವ್ಯವಸ್ಥೆಗಾಗಿ ಜಿಎಸ್ಟಿ ಮಸೂದೆ


Click it and Unblock the Notifications