For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಖಾತೆಗಳನ್ನು ಆನ್‌ಲೈನ್‌ ಮೂಲಕ ಪರಿಶೀಲನೆಗೆ ಐ.ಟಿ ಇಲಾಖೆ ಸೂಚನೆ

ನೋಟು ರದ್ದತಿ ನಂತರ ಆದಾಯ ತೆರಿಗೆ ಪಾವತಿದಾರರು ಬ್ಯಾಂಕ್‌ ಖಾತೆಗಳಲ್ಲಿ ಮಾಡಿರುವ ನಗದು ಜಮಾ ವಿವರಗಳನ್ನು ಆನ್‌ಲೈನ್‌ ಮೂಲಕವೇ ಪರಿಶೀಲಿಸಿ, ಸೂಕ್ತ ಮಾಹಿತಿ ನೀಡುವಂತೆ ಆದಾಯ ತೆರಿಗೆ ಇಲಾಖೆ ಸೂಚಿಸಿದೆ.

|

ನೋಟು ರದ್ದತಿ ನಂತರ ಆದಾಯ ತೆರಿಗೆ ಪಾವತಿದಾರರು ಬ್ಯಾಂಕ್‌ ಖಾತೆಗಳಲ್ಲಿ ಮಾಡಿರುವ ನಗದು ಜಮಾ ವಿವರಗಳನ್ನು ಆನ್‌ಲೈನ್‌ ಮೂಲಕವೇ ಪರಿಶೀಲಿಸಿ, ಸೂಕ್ತ ಮಾಹಿತಿ ನೀಡುವಂತೆ ಆದಾಯ ತೆರಿಗೆ ಇಲಾಖೆ ಸೂಚಿಸಿದೆ.

ನೋಟು ರದ್ದತಿ ಹಲವು ಹೊಸ ನಿಯಮಗಳಿಗೆ ಕಾರಣವಾಗಿದ್ದು, ಬ್ಯಾಂಕ್ ಖಾತೆಗಳನ್ನು ಆನ್‌ಲೈನ್‌ ಮೂಲಕ ಪರಿಶೀಲನೆಗೆ ಐ.ಟಿ ಇಲಾಖೆ ಮುಂದಾಗಿದೆ.

ತೆರಿಗೆ ಪಾವತಿಸುವವರಲ್ಲಿ ಯಾರಾದರೂ ಅನುಮಾನಾಸ್ಪದವಾಗಿ ಹಣ ಜಮೆ ಮಾಡಿದ್ದಾರೆಯೇ ಎಂಬುದನ್ನು ತೆರಿಗೆ ಇಲಾಖೆ ದತ್ತಾಂಶ ವಿಶ್ಲೇಷಣೆ ಮೂಲಕ ಪರಿಶೀಲನೆ ಮಾಡುತ್ತಿದೆ.

ವೆಬ್‌ಸೈಟ್‌ಗೆ ಲಾಗಿನ್‌ ಆಗಿ

ವೆಬ್‌ಸೈಟ್‌ಗೆ ಲಾಗಿನ್‌ ಆಗಿ

ನಗದು ಜಮಾವನ್ನು ಆನ್‌ಲೈನ್‌ ಮೂಲಕ ಪರಿಶೀಲಿಸಬಹುದಾಗಿದ್ದು, ತೆರಿಗೆ ಪಾವತಿದಾರರು ಇಲಾಖೆಯ https://incometaxindiaefiling.gov.in ವೆಬ್‌ಸೈಟ್‌ಗೆ ಲಾಗಿನ್‌ ಆಗಬೇಕು. ಅಲ್ಲಿ ‘compliance' (ಪಾಲನೆ) ವಿಭಾಗದಲ್ಲಿ, ‘2016ರಲ್ಲಿನ ನಗದು ವಹಿವಾಟುಗಳು' ಎಂಬ ಕೊಂಡಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ನವೆಂಬರ್‌ 9ರಿಂದ ಡಿಸೆಂಬರ್‌ 30ರವರೆಗೆ ನಡೆಸಿದ ನಗದು ವಹಿವಾಟಿನ ವಿವರಗಳು ಲಭ್ಯ ಆಗಲಿವೆ ಎಂದು ಇಲಾಖೆ ಹೇಳಿದೆ.

ನಿಮ್ಮ ಖಾತೆ ಖಾತರಿಪಡಿಸಿ

ನಿಮ್ಮ ಖಾತೆ ಖಾತರಿಪಡಿಸಿ

ತೆರಿಗೆದಾರರು ಬ್ಯಾಂಕ್‌ ಖಾತೆ ತಮ್ಮ ಪ್ಯಾನ್‌ ಸಂಖ್ಯೆಗೆ ಸಂಬಂಧಿಸಿದೆಯೇ ಎಂಬುದನ್ನು ಖಾತರಿಪಡಿಸಬೇಕು. ತಮಗೆ ಸಂಬಂಧಿಸಿರದ ಖಾತೆಯದ್ದಾಗಿದ್ದರೆ, ಅದಕ್ಕೆ ಸೂಕ್ತವಾದ ಆಯ್ಕೆಯನ್ನು ಕ್ಲಿಕ್‌ ಮಾಡಬೇಕು. ಆ ಮಾಹಿತಿ ತೆರಿಗೆ ಇಲಾಖೆಗೆ ರವಾನೆಯಾಗುತ್ತದೆ.

ವಿವರ ತಪ್ಪಾಗಿದ್ದರೆ ಆನ್‌ಲೈನ್‌ ಮೂಲಕ ಸರಿಪಡಿಸಿ

ವಿವರ ತಪ್ಪಾಗಿದ್ದರೆ ಆನ್‌ಲೈನ್‌ ಮೂಲಕ ಸರಿಪಡಿಸಿ

ಬ್ಯಾಂಕ್‌ ಖಾತೆ ನಿಮ್ಮದೇ ಆಗಿದ್ದು, ಅಲ್ಲಿನ ಹಣಕಾಸು ವ್ಯವಹಾರದ ವಿವರಗಳು ತಪ್ಪಾಗಿದ್ದರೆ, ಸರಿಯಾದ ವಿವರವನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬಹುದು. ನಗದು ಮೊತ್ತ ಎಲ್ಲಿಂದ ಬಂತು ಎಂಬುದನ್ನು ತೆರಿಗೆ ಪಾವತಿದಾರ ಆನ್‌ಲೈನ್‌ ಮೂಲಕವೇ ವಿವರಿಸಬಹುದು ಎಂದು ಇಲಾಖೆ ಹೇಳಿದೆ.

English summary

Through Online Bank Accounts Verification: IT Department

Income tax department noticed Through Online Bank Accounts Verification.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X