ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಸಂಚಲನವನ್ನುಂಟು ಮಾಡಿ ಎಲ್ಲ ಟೆಲಿಕಾಂ ಕಂಪನಿಗಳಿಗೆ ಸೆಡ್ಡು ಹೊಡೆದಿರುವ ರಿಲಯನ್ಸ್ ಜಿಯೋ ಈಗಾಗಲೇ ಇರುವ ಉಚಿತ ಸೇವೆಯನ್ನು ಮುಂದಿನ 12 ತಿಂಗಳುಗಳ ಕಾಲ ಮುಂದುವರಿಸಿದೆ.
ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಸಂಚಲನವನ್ನುಂಟು ಮಾಡಿ ಎಲ್ಲ ಟೆಲಿಕಾಂ ಕಂಪನಿಗಳಿಗೆ ಸೆಡ್ಡು ಹೊಡೆದಿರುವ ರಿಲಯನ್ಸ್ ಜಿಯೋ ಈಗಾಗಲೇ ಇರುವ ಉಚಿತ ಸೇವೆಯನ್ನು ಮುಂದಿನ 12 ತಿಂಗಳುಗಳ ಕಾಲ ಮುಂದುವರಿಸಿದೆ. ಏರ್‌ಟೆಲ್ ಸರ್ಪ್ರೈಸ್ ಆಫರ್..! ಗ್ರಾಹಕರಿಗೆ ಉಚಿತ ಕೊಡುಗೆ
2017ರ ಅಂತ್ಯದೊಳಗೆ 99% ಗುರಿ ಜಿಯೋ ಹೊಂದಿದ್ದು, ಭಾರತ ಮೊಬೈಲ್ ಇಂಟರ್ನೆಂಟ್ ಬಳಕೆಯಲ್ಲಿ ವಿಶ್ವದಲ್ಲೇ ನಂ. 1 ಆಗಲಿದೆ.
ಮುಖೇಶ್ ಅಂಬಾನಿ ಘೋಷಣೆ
ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ 99 ರೂ. ಪಾವತಿಸಿದರೆ ಜಿಯೋ ಉಚಿತ ಕರೆ ಸೌಲಭ್ಯ ಸಿಗಲಿದ್ದು, ಮಾ.31ರೊಳಗೆ ಕೇವಲ ರೂ. 99 ರಿಚಾರ್ಜ್ ಮಾಡಿಸಿದರೆ ಉಚಿತ ಸೇವೆಗಳು ಮುಂದುವರಿಯಲಿವೆ ಎಂದು ಮುಂಬೈನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ
ಒಂದು ವರ್ಷ ಉಚಿತ
ಪ್ರಸ್ತುತ ರಿಲಯನ್ಸ್ ಜಿಯೋ ಗ್ರಾಹಕರು ಅನುಭವಿಸುತ್ತಿರುವ ಉಚಿತ ಕರೆ ಮತ್ತು ಡೇಟಾ ಸೇವೆಗಳನ್ನು ಬರುವ 12 ತಿಂಗಳುಗಳ ಕಾಲ ಕೇವಲ ರೂ. 99 ರಿಚಾರ್ಜ್ ಮಾಡುವುದರ ಮುಖೇನ ಮುಂದುವರಿಸಬಹುದು.
100 ಮಿಲಿಯನ್ ಗ್ರಾಹಕರು
ಸೆಪ್ಟಂಬರ್ ತಿಂಗಳಲ್ಲಿ ಜಿಯೋ ಲಾಂಚ್ ಆದ ನಂತರದ ಕೇವಲ 170 ದಿನಗಳಲ್ಲಿ ಜಿಯೋ ಗ್ರಾಹಕರ ಸಂಖ್ಯೆ 100 ಮಿಲಿಯನ್ ದಾಟಿದೆ. ಅತಿ ಕಡಿಮೆ ಅವಧಿಯಲ್ಲಿ 10 ಕೋಟಿ ಗ್ರಾಹಕರನ್ನು ಮೀರಿದೆ. ಜಿಯೋ ಆರಂಭದ ಮೊದಲ 83 ದಿನಗಳಲ್ಲಿ 5 ಕೋಟಿ ಗ್ರಾಹಕರನ್ನು ಜಿಯೋ ಸಂಪಾದಿಸಿದ್ದು, ಪ್ರತಿ ದಿನ 6 ಲಕ್ಷ ಹೊಸ ಗ್ರಾಹಕರು ಸೇರ್ಪಡೆಯಾಗುತ್ತಿದ್ದಾರೆ.
100 ಕೋಟಿ GB ಖತಮ್
ಜಿಯೋ ಲಾಂಚ್ ಆದ ನಂತರದ ದಿನಗಳಲ್ಲಿ ಜಿಯೋ ಗ್ರಾಹಕರು ಒಟ್ಟು 100 ಕೋಟಿ GBಯನ್ನು ಬಳಸಿದ್ದಾರೆ.
20% ಹೆಚ್ಚುವರಿ ಡೇಟಾ
ಈ ಯೋಜನೆ ಅಡಿಯಲ್ಲಿ ಜಿಯೋ ಕೇವಲ ಟ್ಯಾರಿಪ್ ಗಳನ್ನು ಮಾತ್ರ ಅಲ್ಲ 20% ಹೆಚ್ಚುವರಿ ಡೇಟಾ ಕೂಡ ಒದಗಿಸಲಿದೆ ಎಂದು ಅಂಬಾನಿ ಹೇಳಿದ್ದಾರೆ.
ಜಿಯೋ ಫ್ರೈಮ್ ಮೆಂಬರ್ಷಿಪ್ ಪ್ರೋಗ್ರಾಂ
ಪ್ರಸ್ತುತ ಜಿಯೋ ಗ್ರಾಹಕರಿಗೆ ಹಾಗೂ ಮಾರ್ಚ್ 31ರ ಒಳಗಾಗಿ ಜಿಯೋ ವ್ಯಾಪ್ತಿಗೆ ಒಳಬರುವವರು ಮಾತ್ರ ಜಿಯೋ ಫ್ರೈಮ್ ಮೆಂಬರ್ಷಿಪ್ ಪ್ರೋಗ್ರಾಂ ಲಭ್ಯ ಆಗಲಿದೆ. ಒಂದು ವರ್ಷ ಸಂಪೂರ್ಣ ಸೌಲಭ್ಯ ಆನಂದಿಸಲು ರೂ. 99 ಒಂದು ಬಾರಿ ಶುಲ್ಕ ಪಾವತಿಸಿದರೆ ಸಾಕು.
ರೋಮಿಂಗ್ ಚಾರ್ಜ್ ಇಲ್ಲ
2017ರ ಅಂತ್ಯದೊಳಗೆ 99% ಗುರಿ
2017ರ ಅಂತ್ಯದ ಒಳಗಾಗಿ ದೇಶದ ಶೇಕಡಾ 99 ಜನರನ್ನು ತಲುಪುವ ಗುರಿಯನ್ನು ರಿಲಾಯನ್ಸ್ ಜಿಯೋ ಹೊಂದಿದೆ. ಈಗಾಗಲೇ ಇನ್ನಿತರ ಟೆಲಿಕಾಂ ಕಂಪನಿಗಳಿಗಿಂತ ಎರಡು ಪಟ್ಟು ಹೆಚ್ಚು ಟವರುಗಳನ್ನು ಜಿಯೋ ಹೊಂದಿದ್ದು ವರ್ಷಾಂತ್ಯದ ವೇಳೆಗೆ ಈ ಸಂಖ್ಯೆಯನ್ನು ದುಪ್ಪಟ್ಟು ಮಾಡುವ ಗುರಿ ಇದೆ ಎಂದು ಅಂಬಾನಿ ತಿಳಿಸಿದ್ದಾರೆ.
ಜಿಯೋ ಆಗಲಿದೆ ವಿಶ್ವದಲ್ಲೇ ನಂ. 1
ಮೊಬೈಲ್ ಇಂಟರ್ನೆಂಟ್ ಬಳಕೆಯಲ್ಲಿ ಭಾರತ ವಿಶ್ವದಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಿದೆ. ಇಲ್ಲಿಯವರಗೆ ಜಿಯೋ ಬಳಕೆದಾರರು 100 ಕೋಟಿ GB ಹೆಚ್ಚು ಡೇಟಾ ಬಳಕೆ ಮಾಡಿಕೊಂಡಿದ್ದಾರೆ ಎಂದು ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಹೇಳಿದ್ದಾರೆ.
ಜಿಯೋ ಮುನ್ನ 150ನೇ ಸ್ಥಾನ
ರಿಲಾಯನ್ಸ್ ಜಿಯೋ ಬರುವುದಕ್ಕೆ ಮುಂಚೆ ಭಾರತ ಮೊಬೈಲ್ ಇಂಟರ್ನೆಂಟ್ ಬಳಕೆಯಲ್ಲಿ 150 ನೇ ಸ್ಥಾನದಲ್ಲಿತ್ತು. ಆದರೆ ಈಗ ಜಗತ್ತಿನಲ್ಲಿ ಮೊದಲ ಸ್ಥಾನಕ್ಕೆ ಬಂದಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications