ಎರಡು ಮಿಲಿಯನ್ ಗ್ರಾಹಕರನ್ನು ಹೊಂದಿರುವ ಸಂದರ್ಭದಲ್ಲಿ ಉಚಿತ ಡೇಟಾದೊಂದಿಗೆ ಭಾರ್ತಿ ಏರ್‌ಟೆಲ್ ತನ್ನ ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ 'ಏರ್‌ಟೆಲ್ ಸರ್ಪ್ರೈಸ್' ಆಫರ್ ಘೋಷಿಸಿದೆ.
ಜಿಯೋ ಪ್ರವೇಶದ ನಂತರ ಟೆಲಿಕಾಂ ವಲಯದಲ್ಲಿ ದರ ಸಮರ ಜೋರಾಗಿಯೇ ನಡೆದಿದೆ. ಒಂದು ಕಡೆ ಗ್ರಾಹಕರನ್ನು ಕಳೆದುಕೊಳ್ಳುವ ಭೀತಿ, ಇನ್ನೊಂದೆಡೆ ಜಿಯೋ ಜತೆ ಪೈಪೋಟಿ.! ಹೀಗಾಗಿ ಪ್ರಮುಖ ಕಂಪನಿಗಳು ಅನೇಕಾನೇಕ ಆಫರ್ ಗಳನ್ನು ಘೋಷಿಸಿ ಗ್ರಾಹಕರನ್ನು ಸೆಳೆಯುವ ಹಾಗೂ ಉಳಿಸುವ ಪ್ರಯತ್ನದಲ್ಲಿ ತೊಡಗಿವೆ.
ಎರಡು ಮಿಲಿಯನ್ ಗ್ರಾಹಕರನ್ನು ಹೊಂದಿರುವ ಸಂದರ್ಭದಲ್ಲಿ ಉಚಿತ ಡೇಟಾದೊಂದಿಗೆ ಭಾರ್ತಿ ಏರ್‌ಟೆಲ್ ತನ್ನ ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ 'ಏರ್‌ಟೆಲ್ ಸರ್ಪ್ರೈಸ್' ಆಫರ್ ಘೋಷಿಸಿದೆ. ಬಿಎಸ್‍ಎನ್‍ಎಲ್ ಭರ್ಜರಿ ಆಫರ್: ರೂ. 36ಕ್ಕೆ 1GB ಡೇಟಾ!
2 ಮಿಲಿಯನ್ ಗ್ರಾಹಕರು!
ಪ್ರಸ್ತುತ ಎರಡು ಮಿಲಿಯನ್ ಹೊಮ್ ಬ್ರಾಡ್‌ಬ್ಯಾಂಡ್ ಗ್ರಾಹಕರ ಗಡಿ ತಲುಪಿರುವ ಖುಷಿಯಲ್ಲಿ ಏರ್‌ಟೆಲ್ ಗ್ರಾಹಕರಿಗೆ ಹೊಸ ಹೊಸ ಆಫರ್ ನೀಡಲು ಮುಂದಾಗಿದೆ. ಈ ಮೈಲುಗಲ್ಲು ಸಾಧಿಸಿರುವ ಘಳಿಗೆಯಲ್ಲಿ 'ಏರ್‌ಟೆಲ್ ಸರ್ಪ್ರೈಸ್' ಎಂಬ ಹೊಸ ಆಫರ್ ಮೂಲಕ ತನ್ನ ಗ್ರಾಹಕರಿಗೆ ಹೆಚ್ಚಿನ ಡೇಟಾ ನೀಡಲಿದೆ. ಇದರಿಂದ ತನ್ನ ಗ್ರಾಹಕರನ್ನು ಸಂತೋಷ ಪಡೆಸುವ ಯೋಜನೆ ಏರ್‌ಟೆಲ್ ಹೊಂದಿದೆ.
ಏರ್‌ಟೆಲ್ ಸರ್ಪ್ರೈಸ್
ಏರ್‌ಟೆಲ್ ಸರ್ಪ್ರೈಸ್' ಆಫರ್ ಅನ್ವಯ ಗ್ರಾಹಕರು ಉಚಿತ ಏರ್‌ಟೆಲ್ ಸಿನಿಮಾಗಳನ್ನು ಪಡೆಯಬಹುದಾಗಿದೆ. 10,000ಕ್ಕೂ ಹೆಚ್ಚು ಸಿನಿಮಾಗಳು, ಹಾಗೂ ಎಲ್ಲ ಭಾಷೆಗಳಲ್ಲಿ ಪ್ರಿಮಿಯಮ್ ಟಿವಿ ಷೋಗಳು ಸೇರಿದಂತೆ ಹಲವು ಸೇವೆಗಳನ್ನು ಏರ್‌ಟೆಲ್ ಸರ್ಪ್ರೈಸ್ ಮೂಲಕ ಪಡೆಯಬಹುದಾಗಿದೆ. ಜಿಯೊ ಎಫೆಕ್ಟ್: ಏರ್‌ಟೆಲ್ ಅನ್‍ಲಿಮಿಟೆಡ್ 4ಜಿ ಫ್ರೀ ಆಫರ್ ಘೋಷಣೆ
ಜಿಯೋ ವೇಗ್ ಎಫೆಕ್ಟ್
ಈಗಾಗಲೇ ರಿಲಾಯನ್ಸ್ ಜಿಯೋ ವೇಗ್ ಬ್ರಾಡ್‌ಬ್ಯಾಂಡ್ ಸೇವೆಯನ್ನು ನೀಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಏರ್‌ಟೆಲ್ ತನ್ನ ಗ್ರಾಹಕರಿಗೆ ಭರ್ಜರಿ ಸರ್ಪ್ರೈಸ್ ಆಫರ್‌ಗಳನ್ನು ನೀಡಲು ಮುಂದಾಗಿದೆ. ಒಟ್ಟು ಟೆಲಿಕಾಂ ರಂಗದಲ್ಲಿ ಹೊಸ ಹೊಸ ಆಫರ್ ಘೋಷಣೆ ಆಗುತ್ತಲೇ ಇವೆ. ರಿಲಾಯನ್ಸ್ ಜಿಯೊ 4ಜಿ ಫ್ರೀ ವೆಲ್‌ಕಮ್ ಆಫರ್ ಸ್ಟಾರ್ಟ್
ಉಚಿತ ಕೊಡುಗೆ
ಟ್ರಾಯ್ ನೀಡಿರುವ ಅಂಕಿ-ಅಂಶಗಳ ಪ್ರಕಾರ ಕಳೆದ ನವೆಂಬರ್ ನಲ್ಲಿಯೇ ಏರ್‌ಟೆಲ್ 2 ಮಿಲಿಯನ್ ಬ್ರಾಡ್‌ಬ್ಯಾಂಡ್ ಸಂಪರ್ಕ ಹೊಂದಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಗ್ರಾಹಕರು 'ಏರ್‌ಟೆಲ್ ಸರ್ಪ್ರೈಸ್' ಆಫರ್ ಅನ್ವಯ ಹೆಚ್ಚಿನ ದರವನ್ನು ನೀಡದೆ ಉಚಿತ ಕೊಡುಗೆಗಳ ಲಾಭ ಪಡೆಯಬಹುದಾಗಿದೆ. ಏರ್‌ಟೆಲ್ - ಜಿಯೋ ನಡುವೆ ಮತ್ತೆ ದರ ಸಮರ!
ಮೊದಲ ಸ್ಥಾನದಲ್ಲಿ BSNL
ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಅಂಕಿ-ಅಂಶದ ಪ್ರಕಾರ ಬಿಎಸ್‌ಎನ್ಎಲ್ ಅತಿ ಹೆಚ್ಚು ಅಂದರೆ 9.95 ಮಿಲಿಯನ್ ಬ್ರಾಡ್‌ಬ್ಯಾಂಡ್ ಗ್ರಾಹಕರನ್ನು ಹೊಂದಿದೆ. ಏರ್‌ಟೆಲ್ ಎರಡನೇ ಸ್ಥಾನದಲ್ಲಿದ್ದು, 2.03 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ರಿಲಾಯನ್ಸ್ ಜಿಯೊ 4ಜಿ ಮತ್ತು 'ಫ್ರೀ ಹೈಪ್' ಬಗ್ಗೆ ನಿಮಗೆ ಗೊತ್ತಿರದ ಕೆಲ ಅಂಶಗಳು
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications