ರಿಲಾಯನ್ಸ್ ಜಿಯೊಗೆ ಪ್ರತಿಸ್ಪರ್ಧಿಯಾಗಿ ಟೆಲಿಕಾಂ ಕಂಪನಿಗಳು ಸೆಡ್ಡು ಹೊಡೆಯಲು ಮುಂದಾಗಿದ್ದು, ಇದೀಗ ಏರ್‌ಟೆಲ್ ತನ್ನ ಗ್ರಾಹಕರಿಗೆ ಆಫರ್ ನೀಡಲು ಮುಂದಾಗಿದೆ.
ರಿಲಾಯನ್ಸ್ ಜಿಯೊಗೆ ಪ್ರತಿಸ್ಪರ್ಧಿಯಾಗಿ ಟೆಲಿಕಾಂ ಕಂಪನಿಗಳು ಸೆಡ್ಡು ಹೊಡೆಯಲು ಮುಂದಾಗಿದ್ದು, ಇದೀಗ ಏರ್‌ಟೆಲ್ ತನ್ನ ಗ್ರಾಹಕರಿಗೆ ಆಫರ್ ನೀಡಲು ಮುಂದಾಗಿದೆ.
ಜಿಯೊ ದರ ಸಮರಕ್ಕೆ ಸೆಡ್ಡು ಹೊಡೆದು ನಿಂತಿರುವ ಏರ್‌ಟೆಲ್ ರೋಮಿಂಗ್ ಶುಲ್ಕ ರದ್ದುಗೊಳಿಸಿದೆ. ರೋಮಿಂಗ್ ವಿರುದ್ಧ ಏರ್‌ಟೆಲ್ ಘೋಷಿಸಿರುವ ಆಫರ್ ಶೀಘ್ರದಲ್ಲೇ ಆರಂಭವಾಗಲಿದೆ. ಏರ್‌ಟೆಲ್ ಸರ್ಪ್ರೈಸ್ ಆಫರ್..! ಗ್ರಾಹಕರಿಗೆ ಉಚಿತ ಕೊಡುಗೆ
ಏಪ್ರಿಲ್ 1ರಿಂದ ರದ್ದು
ಏರ್‌ಟೆಲ್ ನ ಎಲ್ಲ ರೋಮಿಂಗ್ ದರಗಳು ಏಪ್ರಿಲ್ 1ರಿಂದ ರದ್ದಾಗಲಿದೆ ಎಂದು ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆ ಏರ್‌ಟೆಲ್ ಹೇಳಿದೆ.
ದೇಶದಾದ್ಯಂತ ಉಚಿತ
ಗ್ರಾಹಕರು ಏಪ್ರಿಲ್ 1ರಿಂದ ಒಳ ಬರುವ ಮತ್ತು ಹೊರ ಹೋಗುವ ಕರೆ, ಎಸ್ಎಂಎಸ್ ಮತ್ತು ಡೇಟಾ ಸೇವೆಗಳನ್ನು ಉಚಿತವಾಗಿ ಪಡೆಯಲಿದ್ದಾರೆ ಎಂದು ಘೋಷಣೆ ಮಾಡಿದೆ.
ಅಂತರರಾಷ್ಟ್ರೀಯ ಆಫರ್!
ಏರ್‌ಟೆಲ್ ಇಂಟರ್ನ್ಯಾಷನಲ್ ರೋಮಿಂಗ್ ಪ್ಯಾಕ್ ಬಳಸುವ ಗ್ರಾಹಕರಿಗೂ ಆಕರ್ಷಕ ಆಫರ್ ಘೋಷಿಸಿದ್ದು, ಇಂಟರ್ನ್ಯಾಷನಲ್ ಕರೆಗಳ ದರಗಳಲ್ಲಿ ಶೇ. 90ರಷ್ಟು ಕಡಿತಗೊಳಿಸಿದ್ದು, ನಿಮಿಷಕ್ಕೆ ಕೇವಲ ರೂ. 3 ನಿಗದಿ ಮಾಡಿದೆ.
ಡೇಟಾ ಶುಲ್ಕ ಕಡಿತ
ರೋಮಿಂಗ್ ಹಾಗೂ ಕರೆ ದರಗಳಂತೆ ಶೇ. 99ರಷ್ಟು ಡೇಟಾ ಶುಲ್ಕವನ್ನು ಕಡಿತಗೊಳಿಸಿದೆ. ಈಗ ಪ್ರತಿ MB ಡೇಟಾ ಕೇವಲ ರೂ. 3 ಶುಲ್ಕ ವಿಧಿಸುವುದಾಗಿ ತಿಳಿಸಿದೆ.
ಹೆಚ್ಚುವರಿ ಡೇಟಾ ಶುಲ್ಕ ರದ್ದು
ಪ್ರಸ್ತುತ ವಿಧಿಸಲಾಗುತ್ತಿರುವ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರೋಮಿಂಗ್ ಶುಲ್ಕಗಳು ರದ್ದಾಗಲಿವೆ. ಜತೆಗೆ ಹೆಚ್ಚುವರಿ ಡೇಟಾ ಶುಲ್ಕ ಕೂಡ ರದ್ದು ಪಡಿಸುವುದಾಗಿ ಏರ್‌ಟೆಲ್ ಹೇಳಿದೆ.
ಸಿಇಒ ಗೋಪಾಲ್ ವಿಠ್ಠಲ್
ಇನ್ನುಮುಂದೆ ಏರ್‌ಟೆಲ್ ಗ್ರಾಹಕರು ಭಾರಿ ಮೊತ್ತದ ಬಿಲ್ ನೋಡಿ ಆಘಾತಗೊಳ್ಳುವ ಅಗತ್ಯವಿರುವುದಿಲ್ಲ. ರೋಮಿಂಗ್ ಶುಲ್ಕವಿಲ್ಲದೆ ಕರೆ, ಎಸ್ಎಂಎಸ್ ಮತ್ತು ಡೇಟಾ ಸೌಲಭ್ಯಗಳನ್ನು ಆನಂದಿಸಬಹುದು ಎಂದು ಸಿಇಒ ಗೋಪಾಲ್ ವಿಠ್ಠಲ್ ಹೇಳಿದ್ದಾರೆ. ಏರ್‌ಟೆಲ್ ನಿಂದ ಒಂದು ವರ್ಷ ಉಚಿತ 4G ಡೇಟಾ ಆಫರ್ !


Click it and Unblock the Notifications