For Quick Alerts
ALLOW NOTIFICATIONS  
For Daily Alerts

ಜಿಯೊ ಎಫೆಕ್ಟ್: ಏರ್‌ಟೆಲ್ ನಿಂದ ಒಂದು ವರ್ಷ ಉಚಿತ 4G ಡೇಟಾ ಆಫರ್ !

ದೇಶದ ಪ್ರತಿಷ್ಠಿತ ಟೆಲಿಕಾಂ ಸಂಸ್ಥೆಯಾದ ಏರ್‌ಟೆಲ್‌ ತನ್ನ 4G ನೆಟ್‌ವರ್ಕ್ ಗ್ರಾಹಕರು, 4G ಮೊಬೈಲ್ ಗ್ರಾಹಕರು ಹಾಗೂ 3G ಏರ್‌ಟೆಲ್ ಗ್ರಾಹಕರನ್ನು ಆಕರ್ಷಿಸಿಸಲು ಈ ಆಫರ್ ನೀಡಿದೆ.

By Siddu
|

ಟೆಲಿಕಾಂ ರಂಗದ ಬೃಹತ್ ಕಂಪನಿಯಾಗಿರುವ ಭಾರ್ತಿ ಏರ್‌ಟೆಲ್ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದೆ.

ರಿಲಯನ್ಸ್ ಜಿಯೊ ನ್ಯೂ ಇಯರ್ ಆಫರ್ ಗೆ ಪ್ರತಿಸ್ಪರ್ಧಿಯಾಗಿ ಏರ್‌ಟೆಲ್‌ ಒಂದು ವರ್ಷ ಉಚಿತ ಡೇಟಾ ಆಫರ್ ನೀಡುತ್ತಿದೆ. ಏರ್‌ಟೆಲ್‌ ಕಂಪನಿಯ 4G ನೆಟ್‌ವರ್ಕ್‌ ಗ್ರಾಹಕರು ಈ ಲಾಭ ಪಡೆದುಕೊಳ್ಳಲಿದ್ದಾರೆ.

ದೇಶದ ಪ್ರತಿಷ್ಠಿತ ಟೆಲಿಕಾಂ ಸಂಸ್ಥೆಯಾದ ಏರ್‌ಟೆಲ್‌ ತನ್ನ 4G ನೆಟ್‌ವರ್ಕ್ ಗ್ರಾಹಕರು, 4G ಮೊಬೈಲ್ ಗ್ರಾಹಕರು ಹಾಗೂ 3G ಏರ್‌ಟೆಲ್ ಗ್ರಾಹಕರನ್ನು ಆಕರ್ಷಿಸಿಸಲು ಈ ಆಫರ್ ನೀಡಿದೆ.

ಡಿಸೆಂಬರ್ 31, 2017ರವರೆಗೆ ಆಫರ್

ಡಿಸೆಂಬರ್ 31, 2017ರವರೆಗೆ ಆಫರ್

ಬುಧವಾರ(ಜನೆವರಿ, 4) ದೇಶದಾದ್ಯಂತ ಉಚಿತ 4G ಸೇವೆ ಆರಂಭವಾಗಲಿದ್ದು, ಫೆ.28ರವರೆಗೆ ಜಾರಿಯಲ್ಲಿ ಇರಲಿದೆ. ಗ್ರಾಹಕರು ಪ್ರತಿ ತಿಂಗಳು ಉಚಿತ ಡೇಟಾ ಆಫರ್ನಲ್ಲಿ 3GB ಉಚಿತ ಡೇಟಾ ಪಡೆಯಲಿದ್ದು, ಈ ಆಫರ್ ಡಿಸೆಂಬರ್ 31, 2017ರವರೆಗೆ ಜಾರಿ ಇರಲಿದೆ. ಪೋಸ್ಟ್ ಪೇಯ್ಡ್ ಹಾಗೂ ಪ್ರೀಪೇಯ್ಡ್ ಗ್ರಾಹಕರಿಗೆ ಪ್ರತ್ಯೇಕ ನಿಯಮಗಳಡಿಯಲ್ಲಿ ಆಫರ್ ಲಭ್ಯವಿದೆ.

ಜಿಯೊಗೆ ಸೆಡ್ಡು ಹೊಡೆದ ಏರ್‌ಟೆಲ್‌

ಜಿಯೊಗೆ ಸೆಡ್ಡು ಹೊಡೆದ ಏರ್‌ಟೆಲ್‌

ಜಿಯೊ ವೆಲ್ ಕಮ್ ಆಫರ್ ಆರಂಭವಾದ ನಂತರ ದಿನಗಳಲ್ಲಿ ಟೆಲಿಕಾಂ ರಂಗದ ಹಲವು ಕಂಪನಿಗಳು ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಹರಸಾಹಸ ಪಡೆಯುತ್ತಿವೆ. ಇದೀಗ ಏರ್‌ಟೆಲ್ ತನ್ನ ಗ್ರಾಹಕರನ್ನು ಸೆಳೆಯಲುಹೊಸ ಸಾಹಸಕ್ಕೆ ಕೈ ಹಾಕಿದೆ. ಏರ್‌ಟೆಲ್ ಈ ಹೊಸ ಕೊಡುಗೆಯಲ್ಲಿ ಉಚಿತ ಕರೆ, ಉಚಿತ ಇಂಟರ್‌ನೆಟ್ ಮತ್ತು ಉಚಿತ ಸಂದೇಶ ಸೇವೆಗಳನ್ನು ಒದಗಿಸಲಿದೆ.

ರೂ.9000 ಮೌಲ್ಯದವರೆಗೆ ಉಚಿತ ಸೇವೆ
 

ರೂ.9000 ಮೌಲ್ಯದವರೆಗೆ ಉಚಿತ ಸೇವೆ

 ಪ್ರಸ್ತುತ ಏರ್‌ಟೆಲ್ ಒದಗಿಸುತ್ತಿರುವ ಆಫರ್ ಗಳಿಂದ ಪ್ರತಿ ಗ್ರಾಹಕರಿಗೆ ರೂ.9000 ಮೌಲ್ಯದವರೆಗೆ ಉಚಿತ ಸೇವೆ ದೊರೆಯಲಿದೆ. ಈ ಆಫರ್ ಅನ್ವಯ ಏರ್‌ಟೆಲ್ ಗ್ರಾಹಕರು ಪ್ರತಿ ತಿಂಗಳು ಉಚಿತವಾಗಿ 3GB, 4G ಸೇವೆಯನ್ನು ಪಡೆಯಲಿದ್ದಾರೆ, ಈ ಆಫರ್ ಡಿಸೆಂಬರ್ 31 2017ರ ವರೆಗೂ ಜಾರಿಯಲ್ಲಿರುತ್ತದೆ. ಪೋಸ್ಟ್ ಪೇಯ್ಡ್ ಗ್ರಾಹಕರು ಮೈ ಪ್ಲಾನ್ ಅಡಿಯಲ್ಲಿ ಪ್ರತಿ ತಿಂಗಳು 3gb ಉಚಿತ ಡೇಟಾ ಪಡೆಯಲಿದ್ದಾರೆ.

Read more about: airtel reliance jio telecom
English summary

Airtel offers free 4G data for 12 months

Airtel has announced a special offer today under which it will be offering free data (worth Rs 9,000) for 12 months to customers who switch to Airtel 4G. The 12 months offer is available to any customer with a 4G mobile handset, and who is currently not on the Airtel network.
Story first published: Wednesday, January 4, 2017, 14:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X