ಜಿಯೋ ಮೂಲಕ ಕೇವಲ 6 ತಿಂಗಳಲ್ಲಿ 10 ಕೋಟಿ ಗ್ರಾಹಕರನ್ನು ಸಂಪಾದನೆ ಮಾಡಿರುವ ಜಿಯೋ ಇದೀಗ ತನ್ನ ಗ್ರಾಹಕರನ್ನು ದೀರ್ಘಕಾಲ ಉಳಿಸಿಕೊಳ್ಳುವ ಸಲುವಾಗಿ ಪ್ರೈಮ್ ಮೆಂಬರ್‌ಶಿಪ್ ಆಫರ್ ಉಚಿತವೆಂದು ಘೋಷಿಸಿದ್ದಾರೆ.!
ರಿಲಾಯನ್ಸ್ ಮುಖ್ಯಸ್ಥ ಅಂಬಾನಿ 'ಜಿಯೋ ವೆಲ್ ಕಂ ಆಫರ್' ಮೂಲಕ ಟೆಲಿಕಾಂ ರಂಗದಲ್ಲಿ ಸಂಚಲನ ಮೂಡಿಸಿ, ಕಡಿಮೆ ಅವಧಿಯಲ್ಲಿ ಅತ್ಯಧಿಕ ಗ್ರಾಹಕರನ್ನು ಆಕರ್ಷಿಸಿದ್ದರು.
ಕೇವಲ 6 ತಿಂಗಳಲ್ಲಿ 10 ಕೋಟಿ ಗ್ರಾಹಕರನ್ನು ಸಂಪಾದನೆ ಮಾಡಿರುವ ಜಿಯೋ ಇದೀಗ ತನ್ನ ಗ್ರಾಹಕರನ್ನು ದೀರ್ಘಕಾಲ ಉಳಿಸಿಕೊಳ್ಳುವ ಸಲುವಾಗಿ ಪ್ರೈಮ್ ಮೆಂಬರ್‌ಶಿಪ್ ಆಫರ್ ಕ್ಯಾಶ್ ಬ್ಯಾಕ್ ಸೌಲಭ್ಯದ ಮೂಲಕ ಉಚಿತವಾಗಿ ಸಿಗಲಿದೆ..! 'ಜಿಯೋ ಫ್ರೀ ಆಫರ್' ಮುಂದುವರೆಯುತ್ತೆ....
ಹ್ಯಾಪಿ ನ್ಯೂ ಇಯರ್ ಆಫರ್ ಕೊನೆ
ಅಂಬಾನಿ ಈ ಹಿಂದೆ ಘೋಷಿಸಿದ್ದ ವೆಲ್ ಕಂ ಮತ್ತು ಅದರ ಮುಂದುವರೆದ ಭಾಗವಾಗಿದ್ದ ಹ್ಯಾಪಿ ನ್ಯೂ ಇಯರ್ ಉಚಿತ ಕೊಡುಗೆಗಳು ಇದೇ ಮಾರ್ಚ್ 31ರಂದು ಕೊನೆಗೊಳ್ಳಲಿವೆ.
ಅಂಬಾನಿ ಫ್ರೈಮ್ ಆಫರ್ ಬಗ್ಗೆ ಹೇಳಿದ್ದೇನು?
ಮಾರ್ಚ್ 01 ರಿಂದ ಮಾರ್ಚ್ 31ರ ವರೆಗೆ ಪ್ರೈಮ್ ಸದಸ್ಯತ್ವ ಅಭಿಯಾನ ನಡೆಯಲಿದೆ. 99 ರೂ. ನೀಡಿ ಜಿಯೋ ಪ್ರೈಮ್ ಸದಸ್ಯರಾಗಬಹುದಾಗಿದ್ದು, ಈ ಮೂಲಕ ಒಂದು ವರ್ಷಗಳ ಕಾಲ ಹ್ಯಾಪಿ ನ್ಯೂ ಇಯರ್ ಆಫರ್ ಪಡೆಯಬಹುದಾಗಿದೆ. ಪ್ರಸ್ತುತ ರಿಲಯನ್ಸ್ ಜಿಯೋ ಗ್ರಾಹಕರು ಅನುಭವಿಸುತ್ತಿರುವ ಉಚಿತ ಕರೆ ಮತ್ತು ಡೇಟಾ ಸೇವೆಗಳನ್ನು ಬರುವ 12 ತಿಂಗಳುಗಳ ಕಾಲ ಕೇವಲ ರೂ. 99 ರಿಚಾರ್ಜ್ ಮಾಡುವುದರ ಮುಖೇನ ಮುಂದುವರಿಸಬಹುದು. ಇದಕ್ಕಾಗಿ ಪ್ರತಿ ತಿಂಗಳಿಗೆ ರೂ. 303 ಶುಲ್ಕ ಪಾವತಿಸಬೇಕು ಎಂದು ಹೇಳಿದ್ದರು.
ಫ್ರೈಮ್ ಮೆಂಬರ್‌ಶಿಪ್ ಆಫರ್ ಉಚಿತ ಹೇಗೆ?
ಕಳೆದ ಬಾರಿ ಫ್ರೈಮ್ ಆಫರ್ ಬಗ್ಗೆ ಮಾತನಾಡಿದ್ದ ಮುಕೇಶ್ ಅಂಬಾನಿ ಅವರು ಜಿಯೋ ಪ್ರೈಮ್ ಮೆಂಬರ್‌ಶಿಪ್ ಪಡೆಯಲು ಪಾವತಿಸಬೇಕಾಗಿರುವ 99 ರೂ. ಗಳನ್ನು ರಿಲಯನ್ಸ್ ಜಿಯೋದಲ್ಲಿನ ಜಿಯೊ ಮನಿ ಆಪ್ ಮೂಲಕ ಪಾವತಿಸಿದರೆ ರೂ. 50 ಕ್ಯಾಶ್ ಬ್ಯಾಕ್ ಆಫರ್ ಪಡೆಯಬಹುದೆಂದು ಹೇಳಿದ್ದಾರೆ. ಜತೆಗೆ ಪ್ರತಿ ತಿಂಗಳ ರೀಚಾರ್ಜ್ ಶುಲ್ಕ 303 ರೂ.ಗಳನ್ನು ಜಿಯೋ ಮನಿ ಆಪ್ ಮೂಲಕ ಪಾವತಿಸಿದರೆ ಮತ್ತೆ ಪುನಃ ರೂ. 50 ಕ್ಯಾಶ್ ಬ್ಯಾಕ್ ಆಫರ್ ಸಿಗುತ್ತದೆ ಎಂದಿದ್ದಾರೆ.
ಪ್ರೈಮ್ ಮೆಂಬರ್‌ಶಿಪ್ ಶುಲ್ಕ ಈಗ ಪೂರ್ತಿ ಉಚಿತ
ಒಟ್ಟಾರೆಯಾಗಿ ಈ ಎರಡು ರೀಚಾರ್ಜ್ ಗಳಿಂದ 50 + 50= 100 ರೂ. ಗಳ ಕ್ಯಾಶ್ ಬ್ಯಾಕ್ ಸಿಗುವುದರಿಂದ ಗ್ರಾಹಕರು ಪಾವತಿಸುವ 99 ರೂ.ಗಳ ಜಿಯೋ ಪ್ರೈಮ್ ಮೆಂಬರ್‌ಶಿಪ್ ಶುಲ್ಕ ಸಂಪೂರ್ಣವಾಗಿ ಉಚಿತವಾದಂತಾಗುತ್ತದೆ. ಹೀಗಾಗಿ ಜಿಯೋ ಬಳಕೆದಾರರು ಪ್ರೈಮ್ ಸೇವೆಗೆ ಕಟ್ಟಿದ ಹಣ ಸಂಪೂರ್ಣ ವಾಪಸ್!!
ಅಂಬಾನಿ ಪ್ಲಾನ್ ಏನು?
ರಿಲಯನ್ಸ್ ಜಿಯೋ ಬಳಕೆದಾರರನ್ನು ಸಂಪೂರ್ಣವಾಗಿ ತಮ್ಮ ಜಾಲದಲ್ಲಿ ಉಳಿಸಿಕೊಳ್ಳಲು ಅಂಬಾನಿ ಈ ಪ್ಲಾನ್ ಮಾಡಿದ್ದಾರೆ. ಅಂಬಾನಿ ಅವರ ಈ ಡಬಲ್ ಕ್ಯಾಶ್ ಬ್ಯಾಕ್ ಆಫರ್ ಬಳಕೆದಾರರಿಗೂ ಜಿಯೋ ಕಂಪೆನಿಗೂ ಡಬಲ್ ಧಮಾಕಾ ಆಗಿದ್ದು, ಜಿಯೋ ಬಳಕೆದಾರರನ್ನು ಪೂರ್ತಿಯಾಗಿ ತಮ್ಮ ಜಾಲದಲ್ಲಿ ಉಳಿಸಿಕೊಳ್ಳಲು ಸಾಧ್ಯ ಎಂದು ಅಂಬಾನಿ ಭಾವಿಸಿದ್ದಾರೆ.
ದರ ಸಮರ ಪ್ರಭಾವ
ಟೆಲಿಕಾಂ ರಂಗದಲ್ಲಿ ಈಗಾಗಲೇ ಏರ್‌ಟೆಲ್, BSNL, ಐಡಿಯಾ ಸೇರಿದಂತೆ ಎಲ್ಲಾ ಟೆಲಿಕಾಂ ಕಂಪೆನಿಗಳು ಜಿಯೋ ಪ್ರೈಮ್ ಆಫರ್‌ಗೆ ವಿರುದ್ದವಾಗಿ ಹಲವಾರು ಆಫರ್ ಗಳನ್ನು ಘೋಷಿಸುತ್ತಿವೆ. ಅಲ್ಲದೆ ವೋಡಾಫೋನ್ ಮತ್ತು ಐಡಿಯಾ ಕೂಡ ವಿಲೀನವಾಗಿ ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಹೊರಹೊಮ್ಮಿದೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ತಳಮಳಗೊಂಡಿರುವ ಅಂಬಾನಿ, ಫ್ರೈಮ್ ಕ್ಯಾಶ್ ಬ್ಯಾಕ್ ಮೂಲಕ ಜಿಯೋ ಗ್ರಾಹಕರನ್ನು ಆಕರ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಜಿಯೋ ಧಮಾಕಾ..! 'ಫ್ರೈಮ್ ಆಫರ್' ಮೂಲಕ ಹೊಸ ಕೊಡುಗೆ ಘೋಷಣೆ
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications