Englishहिन्दी മലയാളം தமிழ் తెలుగు

'ಜಿಯೋ ಫ್ರೀ ಆಫರ್' ಮುಂದುವರೆಯುತ್ತೆ....

Written By: Siddu
Subscribe to GoodReturns Kannada

ಟೆಲಿಕಾಂ ನಿಯಮಾವಳಿಗಳನ್ನು ರಿಲಯನ್ಸ್ ಜಿಯೋ ಉಲ್ಲಂಘನೆ ಮಾಡುತ್ತಿದ್ದು, ಜಿಯೋ ಒದಗಿಸುವ ಉಚಿತ ಕೊಡುಗೆಗಳಿಗೆ ತಡೆಯಾಜ್ಞೆ ನೀಡಬೇಕೆಂದು ಏರ್ಟೆಲ್, ಐಡಿಯಾ ಹಾಗೂ ಇತರೆ ಕಂಪನಿಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ದೂರಸಂಪರ್ಕ ವಿವಾದ ಇತ್ಯರ್ಥ ಮತ್ತು ಮೇಲ್ಮನವಿ ನ್ಯಾಯಮಂಡಳಿ(TDSAT) ತಿರಸ್ಕರಿಸಿದೆ.

ರಿಲಾಯನ್ಸ್ ಜಿಯೋ ಟೆಲಿಕಾಂ ರಂಗ ಪ್ರವೇಶ ಮಾಡಿದ ನಂತರ ಟೆಲಿಕಾಂ ಕಂಪನಿಗಳು ದರ ಸಮರದಲ್ಲಿ ಸ್ಪರ್ಧೆಯಲ್ಲಿ ತೊಡಗಿದ್ದಲ್ಲದೆ, ಈ ಹಿಂದೆ ಜಿಯೋ ವಿರುದ್ಧ ಟ್ರಾಯ್ ಗೆ ದೂರನ್ನು ಸಲ್ಲಿಸಿದ್ದವು.

ಪ್ರಾರಂಭದಲ್ಲಿ ಜಿಯೋ ಮೂರು ತಿಂಗಳ ಕಾಲ(91ದಿನ) ಫ್ರೀ ಕೊಡುಗೆಗಳನ್ನು ಘೋಷಿಸಿತ್ತು. ನಂತರದಲ್ಲಿ ಉಚಿತ ಸೌಲಭ್ಯಗಳನ್ನು ಮುಂದುವರೆಸಿತ್ತು. ಹೀಗಾಗಿ ಟೆಲಿಕಾಂ ಕಂಪನಿಗಳು ಟ್ರಾಯ್ ಗೆ ಜಿಯೋ ವಿರುದ್ಧ ದೂರನ್ನು ನೀಡಿದ್ದವು. ಜಿಯೋ ಧಮಾಕಾ..! 'ಫ್ರೈಮ್ ಆಫರ್' ಮೂಲಕ ಹೊಸ ಕೊಡುಗೆ ಘೋಷಣೆ

ಟ್ರಾಯ್ ಅನುಮತಿ

ರಿಲಯನ್ಸ್ ಜಿಯೋ ಉಚಿತ ಧ್ವನಿ ಕರೆ ಮತ್ತು ಡೇಟಾ ಪ್ಲಾನ್ ಯಾವುದೇ ರೀತಿಯ ದೂರಸಂಪರ್ಕ ನಿಯಮಾವಳಿಗಳನ್ನು ಉಲ್ಲಂಘಿಸಿಲ್ಲ ಎಂದು ಜನವರಿ 31ರಂದು ಟ್ರಾಯ್(TRAI) ತಿಳಿಸಿತ್ತು. ಅಲ್ಲದೇ ಜಿಯೋ ಉಚಿತ ಕೊಡುಗೆಗಳನ್ನು ಮುಂದುವರೆಸುವಂತೆ ಅನುಮತಿ ನೀಡಿತ್ತು.

TDSAT ಸ್ಪಷ್ಟನೆ

'ವೆಲ್ ಕಂ ಆಫರ್ ಮತ್ತು ಹ್ಯಾಪಿ ನ್ಯೂ ಇಯರ್ ಆಫರ್' ಇವೆರಡೂ ಬೇರೆಯಾಗಿದ್ದು, ಜಿಯೋ ಯಾವುದೇ ರೀತಿಯಲ್ಲೂ ಟೆಲಿಕಾಂ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿಲ್ಲ ಎಂದು TDSAT ಸ್ಪಷ್ಟನೆ ನೀಡಿದ್ದು, ಉಚಿತ ಕೊಡುಗೆಗಳನ್ನು ನಿರಾತಂಕವಾಗಿ ಮುಂದುವರೆಸಬಹುದು ಎಂದು ಹೇಳಿದೆ.

ಮಾರ್ಚ್ 31ರ ವರೆಗೆ ವಿಸ್ತಾರ

ಕಳೆದ ವರ್ಷ ಸೆಪ್ಟಂಬರ್ 5 ರಿಂದ ಡಿಸೆಂಬರ್ 31ರ ವರೆಗೆ ರಿಲಾಯನ್ಸ್ ಜಿಯೊ ವೆಲ್ ಕಮ್ ಆಫರ್ ಎಲ್ಲರಿಗೂ ಉಚಿತವಾಗಿ ನೀಡುವುದಾಗಿ ಹೇಳಿತ್ತು. ತದನಂತರ ಡಿಸೆಂಬರ್ 4, 2016ರಂದು ಹ್ಯಾಪಿ ನ್ಯೂ ಇಯರ್ ಆಫರ್ ಘೋಷಣೆ ಮಾಡಿತ್ತು. ಉಚಿತ ಕರೆ ಮತ್ತು ಡೇಟಾ ಪ್ಲಾನ್ ಅವಧಿಯನ್ನು ಮಾರ್ಚ್ 31ರ ವರೆಗೆ ವಿಸ್ತರಿಸಿದೆ.

ಪ್ರೈಮ್ ಸದಸ್ಯತ್ವ ಅಭಿಯಾನ

ರಿಲಯನ್ಸ್ ಮಾಲೀಕತ್ವದ ಜಿಯೋ ಮಾರ್ಚ್ 1ರಿಂದ ಜಿಯೋ ಪ್ರೈಮ್ ಮೆಂಬರ್ ಶಿಪ್ ಆರಂಭವಾಗಿದೆ. ಪ್ರಸ್ತುತ ಜಿಯೋ ಸಿಮ್ ಬಳಸುತ್ತಿರುವವರು ಜಿಯೋ ಪ್ರೈಮ್ ಸದಸ್ಯರಾಗಬಹುದಾಗಿದೆ. ಮಾರ್ಚ್ 01 ರಿಂದ ಮಾರ್ಚ್ 31ರ ವರೆಗೆ ಪ್ರೈಮ್ ಸದಸ್ಯತ್ವ ಅಭಿಯಾನ ನಡೆಯಲಿದೆ.
ಪ್ರೈಮ್ ಸದಸ್ಯತ್ವ ಪಡೆಯಲು ಗ್ರಾಹಕರು ಒಂದು ಬಾರಿ 99 ರೂ.ಗಳನ್ನು ಪಾವತಿ ಮಾಡಬೇಕು. ಜತೆಗೆ ಒಂದು ವರ್ಷಗಳ ಕಾಲ ಹ್ಯಾಪಿ ನ್ಯೂ ಇಯರ್ ಸೇವೆಯನ್ನು ಪಡೆಯಲು ಪ್ರತಿ ತಿಂಗಳು ರೂ. 303 ಪಾವತಿ ಮಾಡಬೇಕಾಗಿದೆ. ಇದರಂತೆ ಪ್ರತಿ ದಿನಕ್ಕೆ 10 ರೂ. ಪಾವತಿ ಮಾಡಿದಂತಾಗುತ್ತದೆ. ಏರ್‌ಟೆಲ್ ಸರ್ಪ್ರೈಸ್ ಆಫರ್..! ಗ್ರಾಹಕರಿಗೆ ಉಚಿತ ಕೊಡುಗೆ

English summary

No stay on Reliance Jio free offer: TDSAT

The telecom tribunal today did not stay Reliance Jio's free promotional offer, but asked regulator Trai to "re-examine" issues relating to the approval granted to the operator to continue with the freebies.
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC