ದೇಶದ ಪ್ರಮುಖ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ ಆರು ತಿಂಗಳ ಉಚಿತ 'ವೆಲ್ ಕಂ ಹಾಗೂ ಹ್ಯಾಪಿ ನ್ಯೂ ಇಯರ್ ಆಫರ್' ಗಳನ್ನು ಮಾರ್ಚ್ 31ಕ್ಕೆ ಕೊನೆಗೊಳಿಸದೆ ಮುಂದುವರಿಸಲು ನಿರ್ಧರಿಸಿದೆ.
ದೇಶದ ಪ್ರಮುಖ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ ಆರು ತಿಂಗಳ ಉಚಿತ 'ವೆಲ್ ಕಂ ಹಾಗೂ ಹ್ಯಾಪಿ ನ್ಯೂ ಇಯರ್ ಆಫರ್' ಗಳನ್ನು ಮಾರ್ಚ್ 31ಕ್ಕೆ ಕೊನೆಗೊಳಿಸದೆ ಮುಂದುವರಿಸಲು ನಿರ್ಧರಿಸಿದೆ.
ಜಿಯೋ ಫ್ರೀ ಆಫರ್ ಗಳು ಇನ್ನೊಂದು ತಿಂಗಳು ಮುಂದುವರಿಯಲಿದ್ದು, ಈಗಾಗಲೇ ಪ್ರೈಮ್ ಮೆಂಬರ್‌ಶಿಪ್ ಗಾಗಿ ರೂ. 99 ಪಾವತಿಸಿದವರಿಗೆ ಹಣವನ್ನು(50+50 ಕ್ಯಾಶ್ ಬ್ಯಾಕ್) ಬ್ಯಾಲೆನ್ಸ್ ಅಕೌಂಟ್ ಗೆ ಮರುಪಾವತಿಸುವುದಾಗಿ ಘೋಷಿಸಿದೆ.
ಏಪ್ರಿಲ್ 30ರವರೆಗೆ ಆಫರ್!
ಜಿಯೋ ಉಚಿತ ಕೊಡುಗೆಗಳ ಮೂಲಕ ಕಳೆದ ಸೆಪ್ಷಟಂಬರ್ ನಿಂದ ಪಡೆಯುತ್ತಿರುವ ಉಚಿತ ಕರೆ, ಎಸ್ಎಂಎಸ್ ಮತ್ತು ಡೇಟಾ ಸೌಲಭ್ಯ ಪಡೆಯುತ್ತಿರುವ ಗ್ರಾಹಕರು ಮತ್ತೊಂದು ಹೆಚ್ಚುವರಿ ತಿಂಗಳು ಈ ಆಫರ್ ಆನಂದಿಸಬಹುದು. ಅಂದರೆ ಏಪ್ರಿಲ್ 30ರ ವರೆಗೆ ಜಿಯೋ ಆಫರ್ ಬಳಸಿಕೊಳ್ಳಬಹುದು.
ಹಿಂದೆ ಅಂಬಾನಿ ಹೇಳಿದ್ದೇನು?
ಒಂದು ತಿಂಗಳ ಹಿಂದೆ ಮುಖೇಶ್ ಆಂಬಾನಿ ಮಾರ್ಚ್ 01 ರಿಂದ ಮಾರ್ಚ್ 31ರ ವರೆಗೆ ಪ್ರೈಮ್ ಸದಸ್ಯತ್ವ ಅಭಿಯಾನ ನಡೆಯಲಿದ್ದು, 99 ರೂ. ನೀಡಿ ಜಿಯೋ ಪ್ರೈಮ್ ಸದಸ್ಯರಾಗಬೇಕು ಎಂದು ಹೇಳಿದ್ದರು. ಈ ಮೂಲಕ ಒಂದು ವರ್ಷಗಳ ಕಾಲ ಹ್ಯಾಪಿ ನ್ಯೂ ಇಯರ್ ಆಫರ್(ಉಚಿತ ಕರೆ ಮತ್ತು ಡೇಟಾ ಸೇವೆ) ಬರುವ 12 ತಿಂಗಳುಗಳ ಕಾಲ ಕೇವಲ ರೂ. 99 ರಿಚಾರ್ಜ್ ಮಾಡುವುದರ ಮುಖೇನ ಮುಂದುವರಿಸಬಹುದು. ಇದಕ್ಕಾಗಿ ಪ್ರತಿ ತಿಂಗಳಿಗೆ ರೂ. 303 ಶುಲ್ಕ ಪಾವತಿಸಬೇಕು ಎಂದು ಹೇಳಿದ್ದರು.
ಹೆಚ್ಚು ತಿಂಗಳು ವಿಸ್ತರಿಸುವ ಸಾಧ್ಯತೆ
ರಿಲಾಯನ್ಸ್ ಜಿಯೋ ಅತ್ಯಂತ ಕಡಿಮೆ ಅವಧಿಯಲ್ಲಿ 10 ಕೋಟಿಗೂ ಹೆಚ್ಚು ಗ್ರಾಹಕರನ್ನು ಪಡೆದ ಖ್ಯಾತಿ ಹೊಂದಿದೆ. ಇದೀಗ ಜಿಯೋ ಸಿಮ್ ಉಪಯೋಗಿಸುತ್ತಿರುವ ಶೇ. 80 ರಷ್ಟು ಗ್ರಾಹಕರನ್ನು ದೀರ್ಘಕಾಲ ಉಳಿಸಿಕೊಳ್ಳುವ ಸಲುವಾಗಿ ಅಂಬಾನಿ ಮುಂದಾಗಿದ್ದಾರೆ. ಕೆಲ ಮೂಲಗಳ ಪ್ರಕಾರ ಫ್ರೀ ಆಫರ್ ಕೇವಲ ಒಂದು ತಿಂಗಳಿಗೆ ಮಾತ್ರ ವಿಸ್ತರಿಸದೆ ಮತ್ತಷ್ಟು ದಿನಗಳ ಕಾಲ ವಿಸ್ತರಿಸುವ ಸಾಧ್ಯತೆಯಿದೆ.
ಪ್ರೈಮ್ ಮೆಂಬರ್‌ಶಿಪ್ ಸಂಪೂರ್ಣ ಉಚಿತ
ಜಿಯೋ ಪ್ರೈಮ್ ಮೆಂಬರ್‌ಶಿಪ್ ಪಡೆಯಲು ಪಾವತಿಸಬೇಕಾಗಿರುವ 99 ರೂ. ಗಳನ್ನು ರಿಲಯನ್ಸ್ ಜಿಯೋದಲ್ಲಿನ ಜಿಯೊ ಮನಿ ಆಪ್ ಮೂಲಕ ಪಾವತಿಸಿದರೆ ರೂ. 50 ಕ್ಯಾಶ್ ಬ್ಯಾಕ್ ಆಫರ್ ಪಡೆಯಬಹುದು. ಜತೆಗೆ ಪ್ರತಿ ತಿಂಗಳ ರೀಚಾರ್ಜ್ ಶುಲ್ಕ 303 ರೂ.ಗಳನ್ನು ಜಿಯೋ ಮನಿ ಆಪ್ ಮೂಲಕ ಪಾವತಿಸಿದರೆ ಮತ್ತೆ ಪುನಃ ರೂ. 50 ಕ್ಯಾಶ್ ಬ್ಯಾಕ್ ಆಫರ್ ಸಿಗುತ್ತದೆ ಎಂದಿದ್ದಾರೆ. ಈ ಎರಡು ರೀಚಾರ್ಜ್ ಗಳಿಂದ 50 + 50= 100 ರೂ. ಗಳ ಕ್ಯಾಶ್ ಬ್ಯಾಕ್ ಸಿಗುವುದರಿಂದ ಗ್ರಾಹಕರು ಪಾವತಿಸುವ 99 ರೂ.ಗಳ ಜಿಯೋ ಪ್ರೈಮ್ ಮೆಂಬರ್‌ಶಿಪ್ ಶುಲ್ಕ ಸಂಪೂರ್ಣವಾಗಿ ಉಚಿತವಾದಂತಾಗುತ್ತದೆ. ಜಿಯೋ 'ಫ್ರೈಮ್ ಮೆಂಬರ್‌ಶಿಪ್ ಆಫರ್' ಈಗ ಉಚಿತ!!
ಜಿಯೋ ಎಫೆಕ್ಟ್
ಜಿಯೋ ಸೇರಿದಂತೆ ಹಲವು ಟೆಲಿಕಾಂ ಸಂಸ್ಥೆಗಳು ಗ್ರಾಹಕರಿಗೆ ಬರಪೂರವಾಗಿ ಉಚಿತ ಕೊಡುಗೆಗಳನ್ನು ನೀಡುತ್ತಿವೆ. ಇದರಲ್ಲಿ ಏರ್‌ಟೆಲ್, BSNL, ಐಡಿಯಾ ಸೇರಿದಂತೆ ಎಲ್ಲಾ ಟೆಲಿಕಾಂ ಕಂಪೆನಿಗಳು ಜಿಯೋ ಪ್ರೈಮ್ ಆಫರ್‌ಗೆ ವಿರುದ್ದವಾಗಿ ಹಲವಾರು ಆಫರ್ ಗಳನ್ನು ಘೋಷಿಸುತ್ತಿವೆ. ಅಲ್ಲದೆ ವೋಡಾಫೋನ್ ಮತ್ತು ಐಡಿಯಾ ಕೂಡ ವಿಲೀನವಾಗಿ ಗ್ರಾಹಕರನ್ನು ಆಕರ್ಷಿಸುವಲ್ಲಿ ಯೋಜನೆ ರೂಪಿಸಬಹುದು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications