ಅತಿಹೆಚ್ಚು ಸಂಬಳ ಪಡೆಯಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇದ್ದೆ ಇರುತ್ತದೆ. ಜಗತ್ತಿನ ಉನ್ನತ ಕಂಪನಿಗಳಲ್ಲಿ ಉದ್ಯೋಗಕ್ಕೆ ಸೇರುವುದೇ ಕೆಲವರಿಗೆ ಒಂದು ಪ್ರತಿಷ್ಠೆಯ ವಿಷಯ.
ಅತಿಹೆಚ್ಚು ಸಂಬಳ ಪಡೆಯಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇದ್ದೆ ಇರುತ್ತದೆ. ಜಗತ್ತಿನ ಉನ್ನತ ಕಂಪನಿಗಳಲ್ಲಿ ಉದ್ಯೋಗಕ್ಕೆ ಸೇರುವುದೇ ಕೆಲವರಿಗೆ ಒಂದು ಪ್ರತಿಷ್ಠೆಯ ವಿಷಯ. ಅಂತಹ ಬ್ರ್ಯಾಂಡೆಡ್ ಕಂಪನಿಗಳಲ್ಲಿ ಕೆಲಸ ಮಾಡುವುದರಿಂದ ಸಮಾಜದಲ್ಲಿ ಉನ್ನತ ಸ್ಥಾನಮಾನ, ಗೌರವ ಕೂಡ ಸಿಗುತ್ತದೆ ಎನ್ನುವುದು ಹೆಚ್ಚಿನವರ ಅಭಿಮತ.
ವಿವಿಧ ಕಂಪನಿಗಳು ಅರ್ಹ ಜನರಿಗೆ ಅತ್ಯಂತ ಉನ್ನತ ಸಂಬಳ ಪಾವತಿ ಮಾಡುತ್ತವೆ. ಲಾಭದಾಯಕ ಕೆಲಸ ಪಡೆಯುವುದು ಪ್ರತಿಯೊಬ್ಬ ವ್ಯಕ್ತಿಯ ಇಚ್ಛೆಯಾಗಿರುತ್ತದೆ. ಅರ್ಹತೆ, ಜ್ಞಾನ, ಕೌಶಲ್ಯ, ಕಂಪನಿ ಮತ್ತು ಅಭ್ಯರ್ಥಿಯ ನಡವಳಿಕೆ ಇತ್ಯಾದಿಗಳೆಲ್ಲವೂ ಹೆಚ್ಚು ಸಂಬಳ ಪಡೆಯುವ ಮಾನದಂಡಗಳಾಗಿವೆ.
ಆದರಿಂದ ಜಾಗತಿಕವಾಗಿ ಅತಿಹೆಚ್ಚು ಸಂಬಳ ಕೊಡುವ ಉನ್ನತ ಕಂಪನಿಗಳು ಯಾವುವು ಎಂಬುದನ್ನು ನೋಡೋಣ...
1. ವಿಎಂವೆರ್(VMware)
ವಿಎಂವೆರ್(VMware) ಸಂಸ್ಥೆ ಕಂಪ್ಯೂಟರ್ ಸರ್ವ್ ಗಳು ತುಂಬಾ ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಿರ್ವಹಿಸುವಂತೆ ಮಾಡುತ್ತದೆ. ಜತೆಗೆ ಕಂಪ್ಯೂಟರ್ ನೆಟ್ವರ್ಕಿಂಗ್ ಸಾಪ್ಟ್ವೇರ್ ಮತ್ತು ಮೊಬೈಲ್ ಸಾಧನಗಳನ್ನು ನಿರ್ವಹಣೆ ಮಾಡುತ್ತದೆ.
ಸರಾಸರಿ ಒಟ್ಟು ವೇತನ: 167,050 ಡಾಲರ್
ಸರಾಸರಿ ಕನಿಷ್ಠ ವೇತನ: 136,750 ಡಾಲರ್
2. ಸ್ಪ್ಲಂಕ್(Splunk)
ಸ್ಪ್ಲಂಕ್(Splunk) ದೊಡ್ಡ ಡೇಟಾ ಸಾಪ್ಟ್ವೇರ್ ಮತ್ತು ಹಾರ್ಡ್ವೇರ್ ಕಾರ್ಯನಿರ್ವಹಣಾ ಸಂಸ್ಥೆ. ಇದು ಆಪ್ಸ್, ಲಾಗ್ಸ್ ಮತ್ತು ತಾಂತ್ರಿಕತೆಗೆ ಸಂಬಂಧಿಸಿದ ವಿಷಯಗಳನ್ನು ಐಟಿ ಇನ್ಫ್ರಾಸ್ಟ್ರಕ್ಚರ್ ಮೂಲಕ ನೋಡಿಕೊಳ್ಳುತ್ತದೆ.
ಸರಾಸರಿ ಒಟ್ಟು ವೇತನ: 161,010 ಡಾಲರ್
ಸರಾಸರಿ ಕನಿಷ್ಠ ವೇತನ: 132,500 ಡಾಲರ್
3. ಕ್ಯಾಡೆನ್ಸ್(Cadence)
ಕ್ಯಾಡೆನ್ಸ್(Cadence) ಕೈಗಾರಿಕಾ ವಿನ್ಯಾಸಗಾರರಿಗೆ ಸಂಬಂಧಿಸಿದ ತಂತ್ರಾಂಶ ಮತ್ತು ಸಾಧನಗಳನ್ನು ಪೂರೈಸುತ್ತದೆ.
ಸರಾಸರಿ ಒಟ್ಟು ವೇತನ: 156,702 ಡಾಲರ್
ಸರಾಸರಿ ಕನಿಷ್ಠ ವೇತನ: 141,202 ಡಾಲರ್
4. ಗೂಗಲ್(Google)
ಗೂಗಲ್ ತನ್ನ ಉತ್ತಮ ಅಂತರ್ಜಾಲ ಹುಡುಕಾಟ, ಇಂಟರ್ನೆಟ್ ಜಾಹೀರಾತು, ಆಂಡ್ರಾಯ್ಡ್ ಫೋನ್ ಮತ್ತು ಇಮೇಲ್ ಕ್ಲೌಡ್ ಸಾಫ್ಟ್ವೇರ್ ಮೂಲಕ ಹೆಸರುವಾಸಿಯಾಗಿದೆ.
ಸರಾಸರಿ ಒಟ್ಟು ವೇತನ: 155,250 ಡಾಲರ್
ಸರಾಸರಿ ಕನಿಷ್ಠ ವೇತನ: 120,000 ಡಾಲರ್
5. ಫೆಸ್ಬುಕ್(Facebook)
ಫೆಸ್ಬುಕ್ ಆನ್ಲೈನ್ ಸೋಷಿಯಲ್ ಮಿಡಿಯಾ ಮತ್ತು ಸೋಷಿಯಲ್ ನೆಟ್ವರ್ಕಿಂಗ್ ಸೇವೆಗಳನ್ನು ಒದಗಿಸುವ ಪ್ರಸಿದ್ದ ಸಂಸ್ಥೆ. ಮಾರ್ಕ್ ಜುಗರ್ ಬರ್ಗ್ ಇದರ ಸಂಸ್ಥಾಪಕ.
ಸರಾಸರಿ ಒಟ್ಟು ವೇತನ: 155,000 ಡಾಲರ್
ಸರಾಸರಿ ಕನಿಷ್ಠ ವೇತನ: 130,000 ಡಾಲರ್
6. ಎನ್ವಿಡಿಯಾ(NVIDIA)
ಎನ್ವಿಡಿಯಾ(NVIDIA) ಗ್ರಾಫಿಕ್ಸ್ ಪ್ರೊಸೆಸರ್ ತಂತ್ರಜ್ಞಾನಗಳನ್ನು ಉತ್ಪಾದಿಸುವ ಸಂಸ್ಥೆ.
ಸರಾಸರಿ ಒಟ್ಟು ವೇತನ: 154,000 ಡಾಲರ್
ಸರಾಸರಿ ಕನಿಷ್ಠ ವೇತನ: 150,000 ಡಾಲರ್
7. ಅಮೆಜಾನ್ ಲ್ಯಾಬ್126
ಅಮೆಜಾನ್ ಇ-ಕಾಮರ್ಸ್, ಕ್ಲೌಡ್ ಕಂಪ್ಯೂಟಿಂಗ್ ಕಂಪನಿ. ಅಮೆಜಾನ್ ಲ್ಯಾಬ್ 126 ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯಾಗಿದೆ.
ಸರಾಸರಿ ಒಟ್ಟು ವೇತನ: 152,800 ಡಾಲರ್
ಸರಾಸರಿ ಕನಿಷ್ಠ ವೇತನ: 130,400 ಡಾಲರ್
8. ಜುನಿಫರ್ ನೆಟ್ವರ್ಕ್ಸ್(Juniper networks)
ಬಿಲ್ಡಿಂಗ್ ಕಾರ್ಪೋರೇಟ್ ನೆಟ್ವರ್ಕ್ಸ್ ಮತ್ತು ಸರ್ವಿಸ್ ಪ್ರೊವೈಡರ್ ನೆಟ್ವರ್ಕ್ಸ್ ಉಪಕರಣಗಳನ್ನು ಜುನಿಫರ್ ನೆಟ್ವರ್ಕ್ಸ್ ಒದಗಿಸುತ್ತದೆ.
ಸರಾಸರಿ ಒಟ್ಟು ವೇತನ: 150,000 ಡಾಲರ್
ಸರಾಸರಿ ಕನಿಷ್ಠ ವೇತನ: 138,500 ಡಾಲರ್
9. ಲಿಂಕಡ್ಇನ್(LinkedIn)
ಲಿಂಕಡ್ಇನ್ ವೃತ್ತಿಪರ ಸೋಷಿಯಲ್ ನೆಟ್ವರ್ಕ್ ಸಂಸ್ಥೆಯಾಗಿದೆ. ಕೆಲಸ ಹುಡುಕುವವರಿಗೆ ಮತ್ತು ನೇಮಕಾತಿಗೆ ಅತ್ಯುತ್ತಮ ಸಂಸ್ಥೆ ಎಂದು ಹೆಸರುವಾಸಿಯಾಗಿದೆ.
ಸರಾಸರಿ ಒಟ್ಟು ವೇತನ: 150,000 ಡಾಲರ್
ಸರಾಸರಿ ಕನಿಷ್ಠ ವೇತನ: 127,000 ಡಾಲರ್
10. ಸೆಲ್ಸ್ ಫೊರ್ಸ್(Salesforce)
ಸೆಲ್ಸ್ ಫೊರ್ಸ್ ಕ್ಲೌಡ್ ಕಂಪ್ಯೂಟಿಂಗ್ ಸೇವೆಗಳನ್ನು ಒದಗಿಸುವ ಪ್ರಮುಖ ಕಂಪನಿ.
ಸರಾಸರಿ ಒಟ್ಟು ವೇತನ: 150,000 ಡಾಲರ್
ಸರಾಸರಿ ಕನಿಷ್ಠ ವೇತನ: 120,000 ಡಾಲರ್
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications