ವಿದೇಶದ ವೀಸಾ ನಿಯಮಗಳು ಭಾರತವನ್ನು ಬೆಂಬಿಡದ ಭೂತವಾಗಿ ಕಾಡುತ್ತಿವೆ.! ಇದಕ್ಕೆ ಎಚ್1ಬಿ ವೀಸಾ ನೀತಿ, ಆಸ್ಟ್ರೇಲಿಯಾ 457 ವೀಸಾ, ಬ್ರಿಟನ್ ನಲ್ಲಿ ವೀಸಾ ಉಲ್ಲಂಘನೆಯಡಿ ಭಾರತೀಯರ ಬಂಧನ ಹೀಗೆ ಕಾರಣಗಳನ್ನು ಪಟ್ಟಿ ಮಾಡಬಹುದು.
ವಿದೇಶದ ವೀಸಾ ನಿಯಮಗಳು ಭಾರತವನ್ನು ಬೆಂಬಿಡದ ಭೂತವಾಗಿ ಕಾಡುತ್ತಿವೆ.! ಇದಕ್ಕೆ ಎಚ್1ಬಿ ವೀಸಾ ನೀತಿ, ಆಸ್ಟ್ರೇಲಿಯಾ 457 ವೀಸಾ, ಬ್ರಿಟನ್ ನಲ್ಲಿ ವೀಸಾ ಉಲ್ಲಂಘನೆಯಡಿ ಭಾರತೀಯರ ಬಂಧನ ಹೀಗೆ ಕಾರಣಗಳನ್ನು ಪಟ್ಟಿ ಮಾಡಬಹುದು. ಆದರೆ ಇದೀಗ ಟಿಸಿಎಸ್ ಮತ್ತು ಇನ್ಫೊಸಿಸ್ ಕಂಪನಿಗಳು ಲಾಭಕ್ಕಾಗಿ ವೀಸಾ ನಿಯಮ ಉಲ್ಲಂಘನೆ ಮಾಡಿವೆ ಎಂಬುದು ಅಮೆರಿಕಾದ ಆರೋಪ!!
ದೇಶದ ಪ್ರತಿಷ್ಠಿತ ಮಾಹಿತಿ ತಂತ್ರಜ್ಙಾನ ಕಂಪೆನಿಗಳಾದ ಟಿಸಿಎಸ್ ಮತ್ತು ಇನ್ಫೊಸಿಸ್‌ಗಳು ತಮ್ಮ ಲಾಭಕ್ಕಾಗಿ h-1b(ಎಚ್1ಬಿ) ವೀಸಾ ಷರತ್ತು ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿವೆ ಎಂದು ಅಮೆರಿಕ ಆರೋಪ ಮಾಡಿದೆ. H1-B ಹೊಸ ಬಿಲ್: ದೇಶದ 10 ಐಟಿ ಕಂಪನಿಗಳಿಗೆ ಎದುರಾಗಿದೆ ಭೀತಿ
ಹೆಚ್ಚು ವೀಸಾಕ್ಕಾಗಿ ಅರ್ಜಿ
ಟಿಸಿಎಸ್, ಇನ್ಫೊಸಿಸ್ ಮತ್ತು ಕಾಗ್ನಿಜೆಂಟ್ ಮುಂತಾದ ಕಂಪನಿಗಳು ಹೆಚ್ಚು ಎಚ್1ಬಿ ವೀಸಾ ಪಡೆಯುವ ಪ್ರಮುಖ ಫಲಾನುಭವಿ ಕಂಪೆನಿಗಳಾಗಿವೆ. ಈ ಕಂಪನಿಗಳು ವೀಸಾಗಳು ಪಡೆದುಕೊಳ್ಳಲು ಅವಕಾಶವಿರುವ ಪ್ರಮಾಣಕ್ಕಿಂತ ಹೆಚ್ಚಿನ ವೀಸಾಗಳಿಗಾಗಿ ಅರ್ಜಿಗಳನ್ನು ಸಲ್ಲಿಸುತ್ತವೆ ಶ್ವೇತ ಭವನ ಆರೋಪಿಸಿದೆ.
ಲಾಟರಿ ವ್ಯವಸ್ಥೆ
ಎಚ್1ಬಿ ವೀಸಾ ಪಡೆಯುವ ಲಾಟರಿ ವ್ಯವಸ್ಥೆಯಲ್ಲಿ ಹೆಚ್ಚುವರಿ ಟಿಕೆಟ್‌ಗಳನ್ನು ಹಾಕುವ ಮೂಲಕ ವೀಸಾ ಹಂಚಿಕೆಯಲ್ಲಿನ ಸಿಂಹಪಾಲನ್ನು ಟಿಸಿಎಸ್, ಇನ್ಫೊಸಿಸ್ ಮತ್ತು ಕಾಗ್ನಿಜೆಂಟ್ ಪಡೆದುಕೊಳ್ಳುತ್ತವೆ ಎಂದು ಹಿರಿಯ ಅಧಿಕಾರಿಯೊಬ್ಬರು ಆರೋಪ ಮಾಡಿದ್ದಾರೆ.
ಆರೋಪ ಸಮರ್ಥನೆ
ಭಾರತದ ಪ್ರಮುಖ ಕಂಪೆನಿಗಳ ಹೆಸರನ್ನು ಮಾತ್ರ ಉಲ್ಲೇಖಿಸಿದ್ದಿರಿ ಏಕೆ ಎಂಬ ಪ್ರಶ್ನೆಗೆ ಅತಿ ಹೆಚ್ಚು ಎಚ್-1ಬಿ ವೀಸಾ ಪಡೆದುಕೊಳ್ಳುವುದರಲ್ಲಿ ಟಿಸಿಎಸ್, ಇನ್ಫೊಸಿಸ್ ಮತ್ತು ಕಾಗ್ನಿಜೆಂಟ್ ಮೊದಲ ಮೂರು ಸ್ಥಾನದಲ್ಲಿವೆ ಎಂದು ಪ್ರತಿಕ್ರಿಯಿಸಿದರು.
ವೇತನ ಕೂಡ ಕಡಿಮೆ!
ಎಚ್1ಬಿ ವೀಸಾ ಅಡಿಯಲ್ಲಿ ಈ ಮೂರು ಕಂಪೆನಿಗಳು ನೀಡುವ ಸರಾಸರಿ ವೇತನ ಕೂಡ ಕಡಿಮೆಯಾಗಿದ್ದು, ಕೇವಲ ರೂ. 38.79 ಲಕ್ಷದಿಂದ ರೂ. 42 ಲಕ್ಷ ನಡುವೆ ಇರುತ್ತದೆ. ಆದರೆ ಸಿಲಿಕಾನ್ ವ್ಯಾಲಿಯ ಸಾಮಾನ್ಯ ಸಾಫ್ಟ್‌ವೇರ್ ಎಂಜಿನಿಯರ್ ಅಂದಾಜು ರೂ. 96 ಲಕ್ಷ ವೇತನ ಪಡೆಯುತ್ತಾರೆ ಎಂದು ಹೇಳಿದರು.
ಶೇ. 80ರಷ್ಟು ಉದ್ಯೋಗಿಗಳ ವೇತನ ಕಡಿಮೆ
ಪ್ರಸ್ತುತ ಲಾಟರಿ ಪ್ರಕ್ರಿಯೆ ಮೂಲಕ ಎಎಚ್-1ಬಿ ವೀಸಾ ನೀಡಲಾಗುತ್ತಿದ್ದು, ಶೇ. 80ರಷ್ಟು ಎಚ್-1ಬಿ ವೀಸಾ ಉದ್ಯೋಗಿಗಳು ಮಾರುಕಟ್ಟೆ ವೇತನದ ಮಟ್ಟಕ್ಕಿಂತಲೂ ಕಡಿಮೆ ವೇತನ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೆಳಹಂತದ ಕೆಲಸಗಳಿಗೆ ಬಳಕೆ
ಶ್ವೇತ ಭವನದ ಹಿರಿಯ ಅಧಿಕಾರಿಯ ಪ್ರಕಾರ ಟಿಸಿಎಸ್, ಇನ್ಫೊಸಿಸ್ ಮತ್ತು ಕಾಗ್ನಿಜೆಂಟ್ ಕಂಪೆನಿಗಳು ನೌಕರರ ಕೌಶಲ್ಯವನ್ನು ಬಳಸಿಕೊಳ್ಳುವುದಿಲ್ಲ. ಬದಲಾಗಿ ಉದ್ಯೋಗಿಗಳನ್ನು ಕೆಳಹಂತದ ಕೆಲಸಗಳಿಗೆ ಬಳಸಿಕೊಳ್ಳುತ್ತವೆ ಎಂದು ಆರೋಪಿಸಿದ್ದಾರೆ.
ಶೇ. 5-6ರಷ್ಟು ಉದ್ಯೋಗಿಗಳಿಗೆ ಅತ್ಯಧಿಕ ವೇತನ
ಕಾರ್ಮಿಕ ಇಲಾಖೆಯ ನಿಯಮಕ್ಕನುಗುಣವಾಗಿ ಕೇವಲ ಶೇ. 5-6ರಷ್ಟು ಎಚ್-1ಬಿ ಉದ್ಯೋಗಿಗಳು ಮಾತ್ರ ಪ್ರತಿ ವರ್ಷ ಅಧಿಕ ವೇತನ ಪಡೆದುಕೊಳ್ಳುತ್ತಿದ್ದಾರೆ. ಶೇ. 5ರಷ್ಟು ಎಚ್1ಬಿ ವೀಸಾ ಉದ್ಯೋಗಿಗಳು ಮಾತ್ರ 2015ರಲ್ಲಿ ಅಧಿಕ ಸಂಬಳ ಪಡೆದುಕೊಂಡಿದ್ದರು ಎಂದು ಹೇಳಲಾಗಿದೆ.
ವೀಸಾ ನಿಯಮ ಉಲ್ಲಂಘನೆ!
ಕಡಿಮೆ ಸಂಬಳಕ್ಕೆ ದುಡಿಯುವ ಉದ್ಯೋಗಿಗಳನ್ನು ಅಮೆರಿಕದ ಉದ್ಯೋಗಿಗಳ ಜಾಗಕ್ಕೆ ನೇಮಕ ಮಾಡಲಾಗುತ್ತಿದೆ. ಇದು ಕೌಶಲ್ಯಭರಿತ ನೌಕರರನ್ನು ನೇಮಿಸಲು ರೂಪಿಸಿರುವ ಯೋಜನೆಯಾಗಿದೆ. ಆದರೆ ಇಲ್ಲಿ ಕೂಡ ಎಚ್-1ಬಿ ವೀಸಾ ಷರತ್ತು ನಿಯಮಗಳನ್ನು ಉಲ್ಲಂಘನೆ ಮಾಡಲಾಗುತ್ತಿದೆ ಎಂದು ದೂರಿದರು.
ಅಧಿಕ ದುಡಿಮೆ ಕಡಿಮೆ ವೇತನ
ಕಡಿಮೆ ಕೌಶಲ್ಯ ಇರುವ ಹಾಗೂ ಹೆಚ್ಚು ದುಡಿಯುವ ಅಧಿಕ ಕೆಲಸಗಾರರನ್ನು ಕರೆತಂದು, ಇಂತಹ ಕೆಲಸಗಾರರನ್ನು ಹೆಚ್ಚು ವೇತನ ಪಡೆಯುವವರ ಜಾಗಕ್ಕೆ ಕಡಿಮೆ ಸಂಬಳ ನೀಡಲಾತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಅರುಣ್ ಜೇಟ್ಲಿ ಏನಂತಾರೆ?
ಅಮೆರಿಕದ ಆರ್ಥಿಕತೆಯಲ್ಲಿ ಭಾರತದ ಮಾಹಿತಿ ತಂತ್ರಜ್ಞಾನ ಕಂಪೆನಿಗಳ ಕೊಡುಗೆಯನ್ನು ಅರುಣ್ ಜೇಟ್ಲಿ ವಿವರಿಸಿದ್ದಾರೆ. ಎಚ್-1ಬಿ ವೀಸಾ ನೀತಿಯ ನಿಯಮಾವಳಿಗಳನ್ನು ಕಠಿಣಗೊಳಿಸಿರುವ ಬಗ್ಗೆ ಅಮೆರಿಕ ಹಣಕಾಸು ಸಚಿವ ಸ್ಟೀವನ್ ಮುಚಿನ್ ಅವರ ಜತೆಗಿನ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಭಾರತ ಮತ್ತು ಯುಎಸ್ ಸಂಬಂಧಗಳ ಮೂಲಕ ಗಮನಾರ್ಹ ಪ್ರಗತಿಯನ್ನು ಸಾಧಿಸಿವೆ ಎಂದರು. ಭಯೋತ್ಪಾದಕ ಹಣಕಾಸು ಸಮಸ್ಯೆ ನಿವಾರಣೆ ಬಗ್ಗೆ ಕೂಡ ಚರ್ಚೆ ಮಾಡಿದರು.
ಲಂಡನ್ ನಲ್ಲಿ 38 ಭಾರತೀಯರ ಬಂಧನ
ವೀಸಾ ಅವಧಿ ಮುಗಿದರೂ ಕಾನೂನು ಬಾಹಿರವಾಗಿ ಕೆಲಸದಲ್ಲಿದ್ದ ಆರೋಪದ ಮೇಲೆ ಲಂಡನ್ ನಲ್ಲಿ 9 ಮಹಿಳೆಯರು ಸೇರಿದಂತೆ 38 ಭಾರತೀಯರನ್ನು ಬ್ರಿಟನ್ ನ ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ. ಲೀಸೆಸ್ಟರ್ ನಲ್ಲಿರುವ ಎರಡು ಬಟ್ಟೆ ಪ್ಯಾಕ್ಟರಿಗಳ ಮೇಲೆ ವಲಸೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ಮಾಡಿದರು. ಆ ಸಂದರ್ಭದಲ್ಲಿ 9 ಮಹಿಳೆಯರು ಸೇರಿದಂತೆ ಒಟ್ಟು 38 ಭಾರತೀಯರನ್ನು ವಶಪಡಿಸಿಕೊಂಡರು. ವೀಸಾ ಉಲ್ಲಂಘನೆ 38 ಭಾರತೀಯರು ಅರೆಸ್ಟ್!


Click it and Unblock the Notifications