ಮಾಹಿತಿ ತಂತ್ರಜ್ಞಾನ(ಐಟಿ) ಕ್ಷೇತ್ರದ ಉದ್ಯೋಗಿಗಳಿಗೆ ಮೇಲಿಂದ ಮೇಲೆ ಅಘಾತಕಾರಿ ಸುದ್ದಿಗಳು ನಡುಕ ಹುಟ್ಟಿಸುತ್ತಿದ್ದು, ಇದೀಗ ಹೆಡ್ ಹಂಟರ್ಸ್ ಇಂಡಿಯಾ ಸಂಸ್ಥೆಯ ವರದಿ ಗಾಯದ ಮೇಲೆ ಬರೆ ಎಳೆದಂತಾಗಿದೆ!
ಮಾಹಿತಿ ತಂತ್ರಜ್ಞಾನ(ಐಟಿ) ಕ್ಷೇತ್ರದ ಉದ್ಯೋಗಿಗಳಿಗೆ ಮೇಲಿಂದ ಮೇಲೆ ಅಘಾತಕಾರಿ ಸುದ್ದಿಗಳು ನಡುಕ ಹುಟ್ಟಿಸುತ್ತಿದ್ದು, ಇದೀಗ ಹೆಡ್ ಹಂಟರ್ಸ್ ಇಂಡಿಯಾ ಸಂಸ್ಥೆಯ ವರದಿ ಗಾಯದ ಮೇಲೆ ಬರೆ ಎಳೆದಂತಾಗಿದೆ!
ಕಳೆದ 2016ನೇ ಸಾಲಿನಲ್ಲಿ ಹಲವು ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ತೆಗೆದು ಹಾಕಿವೆ. ಉದ್ಯೋಗ ಕಡಿತ ಪ್ರಕ್ರಿಯೆ ಭಾರತೀಯ ಐಟಿ ಮತ್ತು ನಾನ್ ಐಟಿ ಉದ್ಯೋಗಿಗಳ ಪಾಲಿಗಂತು ನುಂಗಲಾಗದ ತುತ್ತಾಗಿದೆ. ದೇಶದ ಈ 10 ಕಂಪನಿಗಳು ಉದ್ಯೋಗ ಕಡಿತ(Job Cut) ಮಾಡುತ್ತಿವೆ...?
2 ಲಕ್ಷ ಉದ್ಯೋಗ ಕಡಿತ
ಮುಂದಿನ ಮೂರು ವರ್ಷಗಳಲ್ಲಿ 1.75 ಲಕ್ಷದಿಂದ 2 ಲಕ್ಷದವರೆಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಹೆಡ್ ಹಂಟರ್ಸ್ ಇಂಡಿಯಾ ಸಂಸ್ಥೆ ಹೇಳಿದೆ. ಈ ಹೇಳಿಕೆ ಐಟಿ ಉದ್ಯೋಗಿಗಳ ಪಾಲಿಗೆ ನುಂಗಲಾಗದ ತುತ್ತೆ ಸರಿ. ಅಲ್ಲದೇ ಈಗಾಗಲೇ ಇನ್ಫೋಸಿಸ್, ವಿಪ್ರೋ., ಕಾಗ್ನಿಜಂಟ್, ಸ್ನ್ಯಾಪ್ಡೀಲ್, ಟಾಟಾ ಟೆಲಿಸರ್ವಿಸಸ್, ಏರಸೆಲ್ ನಂತಹ ಹಲವು ಕಂಪನಿಗಳು ಉದ್ಯೋಗ ಕಡಿತದ ಬಗ್ಗೆ ಅಧಿಕೃತವಾಗಿ ಹೇಳಿವೆ.
ಕೆಲಸ ಕಳೆದುಕೊಳ್ಳಲು ಕಾರಣ
ಈಗಂತೂ ತಂತ್ರಜ್ಞಾನ ತುಂಬಾ ಮುಂದುವರೆಯುತ್ತಿದೆ. ಹೀಗಾಗಿ ಕ್ಲೌಡ್‌ನಂತಹ ಹೊಸ ತಂತ್ರಜ್ಞಾನಗಳಿಗೆ 35 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಸಿಬ್ಬಂದಿಗಳಿಗೆ ಕ್ಲೌಡ್‌ನಂತಹ ಹೊಸ ತಂತ್ರಜ್ಞಾನ ಹೊಂದಿಕೊಳ್ಳಲು ಸಾಧ್ಯವಾಗದ ಕಾರಣ ಅಂತಹ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ. ಲಕ್ಷ್ಮೀಕಾಂತ್ ತಿಳಿಸಿದ್ದಾರೆ.
ಈ ವರ್ಷ ಎಷ್ಟು?
ಸುಮಾರು 56,000 ಐಟಿ ಉದ್ಯೋಗಿಗಳು ಈ ವರ್ಷ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ವಿಶ್ಲೇಷಕರು ಮತ್ತು ಮಾದ್ಯಮಗಳು ವರದಿ ಮಾಡಿದ್ದವು. ಆದರೆ ವಾಸ್ತವದಲ್ಲಿ ಪ್ರತಿ ವರ್ಷ 1.75-2 ಲಕ್ಷ ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೆಡ್ ಹಂಟರ್ಸ್ ಇಂಡಿಯಾ ಹೇಳಿದೆ.
ಮ್ಯಾಕ್ ಕಿನ್ಸ್ ಆಂಡ್ ಕಂಪೆನಿ ವರದಿ
ಮುಂಬರುವ 3-4 ವರ್ಷಗಳಲ್ಲಿ ಭಾರತದ ಐಟಿ ಕ್ಷೇತ್ರದ ಅರ್ಧಕ್ಕಿಂತ ಹೆಚ್ಚು ಉದ್ಯೋಗಿಗಳು ಅಪ್ರಸ್ತುತವಾಗಲಿದ್ದು, ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಜಾಗತಿಕ ಸಮೀಕ್ಷಾ ಸಂಸ್ಥೆ ಮ್ಯಾಕ್ ಕಿನ್ಸ್ ಆಂಡ್ ಕಂಪೆನಿ ಫೆಬ್ರುವರಿಯಲ್ಲಿ ಸಾಫ್ಟ್‌ವೇರ್ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟದ (ನಾಸ್ಕಾಂ) ಲೀಡರ್‌ಶಿಪ್ ಫೋರಂಗೆ ಸಲ್ಲಿಸಿದ ತನ್ನ ವರದಿಯಲ್ಲಿ ತಿಳಿಸಿದೆ.
39 ಲಕ್ಷ ಉದ್ಯೋಗಿಗಳಿದ್ದಾರೆ!
ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಅಂದಾಜು 39 ಲಕ್ಷ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರಿಗೆ ನೂತನ ತಂತ್ರಜ್ಞಾನಗಳ ತರಬೇತಿ ಅಗತ್ಯವಿದೆ. ಅದಾಗ್ಯೂ, ಶೇ 30-40ರಷ್ಟು ಉದ್ಯೋಗಿಗಳನ್ನು ಮುಂದುವರಿಸುವುದು ಅಸಾಧ್ಯವಾಗಲಿದೆ. ಬೆಂಗಳೂರು, ಕೊಯಮಂತ್ತೂರ್ ಮತ್ತು ಮುಂಬೈನಂತಹ ಮಹಾನಗರಗಳ ಉದ್ಯೋಗಿಗಳಿಗಿಂತ ಕೊಯಮತ್ತೂರು ಹಾಗೂ ಕೆಲ ದೂರದ ನಗರಗಳಲ್ಲಿನ ನೌಕರರು ಉದ್ಯೋಗ ಕಳೆದುಕೊಳ್ಳಬಹುದು ಎಂದು ಕೆ. ಲಕ್ಷ್ಮೀಕಾಂತ್ ತಿಳಿಸಿದ್ದಾರೆ. ಉದ್ಯೋಗ ಕಳೆದುಕೊಳ್ಳುವ ಭಯವೆ? ಹಾಗಿದ್ದರೆ ಈ 'ಜಾಬ್ ಲಾಸ್ ವಿಮೆ' ನಿಮಗಾಗಿ!
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications