7 ಬೆಸ್ಟ್ ಎಸ್ಬಿಐ(SBI) ಮ್ಯೂಚುವಲ್ ಫಂಡ್ ಯೋಜನೆಗಳು

Written By: Siddu
Subscribe to GoodReturns Kannada

ಕಳೆದ ಒಂದು ವರ್ಷದಲ್ಲಿ ಎಸ್ಬಿಐ(SBI) ಸಂಸ್ಥೆಯ ಕೆಲ ಮ್ಯೂಚುವಲ್ ಫಂಡ್ ಯೋಜನೆಗಳು(mutual funds schemes) ಶೇ. 38ರವರೆಗೆ ರಿಟರ್ನ್ಸ್ ಕೊಟ್ಟಿವೆ. ಇನ್ನೂ ಹೆಚ್ಚಿನವು ತೃಪ್ತಿಕರವಾದ ಆಧಾಯವನ್ನು ನೀಡಿದ್ದು, ಬ್ಯಾಂಕ್ ಠೇವಣಿಗಳನ್ನು ಮೀರಿಸಿವೆ.

ಉತ್ತಮ ಆದಾಯ ಕೊಡುವ ಕಡಿಮೆ ಮೊತ್ತದ(ರೂ. 500, 1000) ಎಸ್ಬಿಐ(SBI) ಕೆಲ ಮ್ಯೂಚುವಲ್ ಫಂಡ್ ಯೋಜನೆಗಳಿವೆ. ಇಂತಹ ಸ್ಕೀಮ್ ಗಳಲ್ಲಿ ಹೂಡಿಕೆ ಮಾಡಿದರೆ ನೀವು ಉತ್ತಮ ಆದಾಯ ನಿಮ್ಮದಾಗಿಸಬಹುದು. ಅಂತಹ ಪ್ರಮುಖ ಸಿಪ್ಸ್(SIPs)ಗಳ ಮಾಹಿತಿ ಇಲ್ಲಿದೆ. ಮ್ಯೂಚುವಲ್ ಫಂಡ್ಸ್ ವಿಧಗಳು ಯಾವುವು?

1. ಎಸ್ಬಿಐ ಬ್ಯಾಂಕಿಂಗ್ & ಫೈನಾನ್ಸಿಯಲ್ ಸರ್ವಿಸಸ್ ಫಂಡ್- ರೆಗ್ಯುಲರ್

ಕಳೆದ ಒಂದು ವರ್ಷದಲ್ಲಿ ಎಸ್ಬಿಐ ಬ್ಯಾಂಕಿಂಗ್ & ಫೈನಾನ್ಸಿಯಲ್ ಸರ್ವಿಸಸ್ ಶೇ. 38ರಷ್ಟು ಆದಾಯ ನೀಡಿದೆ. ಎಸ್ಬಿಐ ಸಿಪ್ಸ್ ಗಳಲ್ಲಿ ಹೂಡಿಕೆ ಮಾಡಲಿಚ್ಚಿಸುವವರಿಗೆ ಇದು ಉತ್ತಮ ಆಯ್ಕೆ. ಈ ಯೋಜನೆಯಲ್ಲಿ ಕಡಿಮೆ ಮೊತ್ತ ರೂ. 500ರಿಂದ ಹೂಡಿಕೆ ಮಾಡಬಹುದು.

2. ಎಸ್ಬಿಐ ಕಾಂಟ್ರಾ ಫಂಡ್

ಹಿಂದಿನ ಸಾಲಿನಲ್ಲಿ ಉತ್ತಮ ಪ್ರದರ್ಶನ ಮಾಡಿದವುಗಳಲ್ಲಿ ಎಸ್ಬಿಐ ಕಾಂಟ್ರಾ ಫಂಡ್ ಕೂಡ ಒಂದು. ಈ ಸಿಪ್ಸ್ ಯೋಜನೆ ಶೇ. 25ರಷ್ಟು ರಿಟರ್ನ್ಸ್ ಗಳಿಸಿದೆ. ಈ ಫಂಡ್ ತುಂಬಾ ವೈವಿದ್ಯಮಯವಾಗಿದ್ದು, ಕಾಗ್ನಿಜಂಟ್, ಎಚ್ಡಿಎಫ್ಸಿ, ಎಸ್ಬಿಐ, ಎಚ್ಸಿಎಲ್ ಇದರ ಪ್ರಮುಖ ಹೋಲ್ಡಿಂಗ್ ಸಂಸ್ಥೆಗಳಾಗಿವೆ. ಪ್ರತಿ ತಿಂಗಳು ಕನಿಷ್ಟ ರೂ. 500ರ ಮೂಲಕ ಹೂಡಿಕೆ ಮಾಡಬಹುದು.

3. ಎಸ್ಬಿಐ ಮ್ಯಾಗ್ನಮ್ ಮಿಡ್ ಕ್ಯಾಪ್ ಫಂಡ್

ಎಸ್ಬಿಐ ನಲ್ಲಿ ದೀರ್ಘಾವದಿಯಿಂದ ಉತ್ತಮ ಇಳುವರಿ ನೀಡುವ ಸಿಪ್ ಆಗಿದೆ. ಈ ಫಂಡ್ ಐದು ವರ್ಷಗಳ ಅವಧಿಗೆ ಶೇ. 30ರಷ್ಟು ರಿಟರ್ನ್ ಒದಗಿಸುತ್ತದೆ. ಕಳೆದ ವರ್ಷ ಶೇ. 23ರಷ್ಟು ರಿಟರ್ನ್ ನೀಡಿದೆ.

4. ಎಸ್ಬಿಐ ಪಿಎಸ್ಯು(PSU) ಫಂಡ್

ಸರ್ಕಾರ ಒಡೆತನದ ಕಂಪನಿಗಳಲ್ಲಿ ಹೂಡಿಕೆ ಮಾಡಲು ಈ ನಿಧಿಯನ್ನು ಕಡ್ಡಾಯಗೊಳಿಸಲಾಗಿದೆ. ಸಾರ್ವಜನಿಕ ವಲಯದ ಯೋಜನೆಗಳು ಉತ್ತಮವಾಗಿರುತ್ತವೆ ಎಂದು ನೀವು ಬಾವಿಸಿದಲ್ಲಿ ಇದನ್ನು ಆಯ್ಕೆ ಮಾಡಬಹುದು. ಕನಿಷ್ಟ ರೂ. 500ರ ಗಳಂತೆ ಹೂಡಿಕೆ ಮಾಡಬಹುದು. ಕಳೆದ ಸಾಲಿನಲ್ಲಿ ಇದು ಶೇ. 15ರಷ್ಟು ಇಳುವರಿ ನೀಡಿದೆ.

5. ಎಸ್ಬಿಐ ನಿಪ್ಟಿ ಇಂಡೆಕ್ಸ್ ಫಂಡ್

ಹೆಸರೆ ಸೂಚಿಸುವಂತೆ ಇವು ಷೇರು ಸೂಚ್ಯಂಕಗಳಲ್ಲಿ ಹೂಡಿಕೆ ಮಾಡುತ್ತದೆ. ಕಳೆದ ಒಂದು ವರ್ಷದಲ್ಲಿ ಹೆಚ್ಚುಕಡಿಮೆ ಶೇ. 21ರಷ್ಟು ಆದಾಯವನ್ನು ಗಳಿಸಿದೆ. ಎಸ್ಬಿಐ ನಿಪ್ಟಿ ಇಂಡೆಕ್ಸ್ ಫಂಡ್ ಎಚ್ಡಿಎಫ್ಸಿ ಬ್ಯಾಂಕ್, ಎಚ್ಡಿಎಫ್ಸಿ, ಐಟಿಸಿ ರಿಲಯನ್ಸ್ ಇಂಡಸ್ಟ್ರಿಸ್ ಮತ್ತು ಇನ್ಫೋಸಿಸ್ ಹೋಲ್ಡಿಂಗ್ ಹೊಂದಿದೆ.

6. ಎಸ್ಬಿಐ ಶಾರ್ಟ್ ಟರ್ಮ್ ಡೆಬ್ಟ್ ಫಂಡ್

ಡೆಬ್ಟ್ ಯೋಜನೆಗಳನ್ನು ಇಷ್ಟಪಡುವವರು ಎಸ್ಬಿಐ ಶಾರ್ಟ್ ಟರ್ಮ್ ಡೆಬ್ಟ್ ಫಂಡ್ ಆಯ್ಕೆ ಮಾಡಬಹುದು. ಇಕ್ವಿಟಿಗಳಲ್ಲಿ ಹೂಡಿಕೆ ಮಾಡುವ ಬದಲು, ಕೇವಲ ಡೆಬ್ಟ್ ಗಳಲ್ಲಿ ಹೂಡಿಕೆ ಮಾಡುವುದಾಗಿದೆ.
ಇದರ ಹೆಚ್ಚಿನ ಹೋಲ್ಡಿಂಗ್ ಸರ್ಕಾರದ ಸೆಕ್ಯುರಿಟಿ ಗಳಲ್ಲಿದೆ. ಕಳೆದ ಒಂದು ವರ್ಷದಲ್ಲಿ ಶೇ. 8.65ರಷ್ಟು ಆದಾಯ ಗಳಿಸಿದೆ. ರೂ. 1000, 5000ರ ಆರಂಭಿಕ ಹೂಡಿಕೆಯೊಂದಿಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

7. ಎಸ್ಬಿಐ ಟ್ರೆಸರರಿ ಫಂಡ್

ಇದು ಡೆಬ್ಟ್ ಫಂಡ್ ಆಗಿದೆ. ಕಳೆದ ಒಂದು ವರ್ಷದಲ್ಲಿ ಶೇ. 7.56 ಆದಾಯ ಗಳಿಸಿದೆ. ಎಲ್ಐಸಿ ಹೌಸಿಂಗ್ ಮತ್ತು ಇಂಡಿಯಾ ಬುಲ್ಸ್ ಹೌಸಿಂಗ್ ಮುಂತಾದ ಕೆಲವು ಖಾಸಗಿ ಡಿಬೆಂಚರ್ ನೊಂದಿಗೆ ಮಾನ್ಯತೆ ಹೊಂದಿದೆ.

English summary

7 Best SBI Mutual Fund Schemes To Invest Through SIP

Some of the SBI Mutual Fund Schemes, have given returns of as much as 38 per cent in the last 1 year. Most of them have given very comfortable returns in the last 1 year, which have beaten most asset classes, including bank deposits.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

ಕರ್ನಾಟಕ ವಿಧಾನಸಭೆ ಚುನಾವಣೆ 2018

Get Latest News alerts from Kannada Goodreturns