For Quick Alerts
ALLOW NOTIFICATIONS  
For Daily Alerts

ಜಿಎಸ್ಟಿ ಎಫೆಕ್ಟ್: ಎಲೆಕ್ಟ್ರಾನಿಕ್, ಗೃಹೋಪಯೋಗಿ ಉತ್ಪನ್ನಗಳ ಮೇಲೆ 40% ಡಿಸ್ಕೌಂಟ್!

ಗ್ರಾಹಕರಿಗೆ ಸುಗ್ಗಿ... ದೀಪಾವಳಿ ಹಬ್ಬದ ಮುನ್ನವೇ ದೀಪಾವಳಿ ಪ್ರಾರಂಭ..! ದೀಪಾವಳಿ ಇನ್ನೂ ನಾಲ್ಕು ತಿಂಗಳು ಇರುವಾಗಲೇ ಎಲೆಕ್ಟ್ರಾನಿಕ್, ಗೃಹೋಪಯೋಗಿ ಉತ್ಪನ್ನಗಳ ಮೇಲೆ ಭರ್ಜರಿ ಡಿಸ್ಕೌಂಟ್..!!

By Siddu
|

ಗ್ರಾಹಕರಿಗೆ ಸುಗ್ಗಿ... ದೀಪಾವಳಿ ಹಬ್ಬದ ಮುನ್ನವೇ ದೀಪಾವಳಿ ಪ್ರಾರಂಭ..! ದೀಪಾವಳಿ ಇನ್ನೂ ನಾಲ್ಕು ತಿಂಗಳು ಇರುವಾಗಲೇ ಎಲೆಕ್ಟ್ರಾನಿಕ್, ಗೃಹೋಪಯೋಗಿ ಉತ್ಪನ್ನಗಳ ಮೇಲೆ ಭರ್ಜರಿ ಡಿಸ್ಕೌಂಟ್..!!

ದೇಶದಾದ್ಯಂತ ಜಿಎಸ್ಟಿ ಚರ್ಚೆ ಬಿರುಸಾಗಿ ನಡೆದಿದ್ದು, ಜುಲೈ 1ರಿಂದ ಜಾರಿ ಬರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಕೆಲ ಕಂಪನಿಗಳು ತಮ್ಮ ಎಲೆಕ್ಟ್ರಾನಿಕ್ ಮತ್ತು ಗೃಹೋಪಯೋಗಿ ಉತ್ಪನ್ನಗಳನ್ನು ಭಾರೀ ರಿಯಾಯಿತಿ ದರಕ್ಕೆ ಮಾರಾಟ ಮಾಡಲು ಮುಂದಾಗಿದ್ದು, ಹಳೆಯ ದಾಸ್ತಾನು ಖಾಲಿ ಮಾಡುವ ಭರದಲ್ಲಿವೆ.

ಹಾಗಿದ್ರೆ ಯಾವ ಕಂಪನಿಗಳು, ಯಾವ ಉತ್ಪನ್ನಗಳ ಮೇಲೆ ಎಷ್ಟು ರಿಯಾಯಿತಿ ನೀಡುತ್ತಿವೆ ಎನ್ನುವುದನ್ನು ತಿಳಿಯೋಣ...

ರಿಯಾಯಿತಿಗೆ ಕಾರಣ

ರಿಯಾಯಿತಿಗೆ ಕಾರಣ

ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ(gst) ಜಾರಿ ಬರುತ್ತಿರುವುದರಿಂದ ಎಲೆಕ್ಟ್ರಾನಿಕ್ ಮತ್ತು ಗೃಹೋಪಯೋಗಿ ಉತ್ಪನ್ನಗಳನ್ನು ಡಿಸ್ಕೌಂಟ್ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಿವೆ. ಹಳೆಯ ದಾಸ್ತಾನುಗಳನ್ನು ಖಾಲಿ ಮಾಡಿ ಆ ಮೂಲಕ ಆಗಬಹುದಾದ ನಷ್ಟವನ್ನು ಕಡಿಮೆ ಮಾಡಿಕೊಳ್ಳುವುದು ಕಂಪನಿಗಳ ಉದ್ದೇಶ.

ಎಷ್ಟು ರಿಯಾಯಿತಿ?

ಎಷ್ಟು ರಿಯಾಯಿತಿ?

ಸರಕು ಮತ್ತು ಸೇವಾ ತೆರಿಗೆ(gst) ಜುಲೈ 1ರಿಂದ ಜಾರಿ ಆಗುತ್ತಿರುವ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ ಮತ್ತು ಗೃಹೋಪಯೋಗಿ ಉತ್ಪನ್ನಗಳನ್ನು 40% ಡಿಸ್ಕೌಂಟ್ ದರದಲ್ಲಿ ಮಾರಾಟ ಆಗಲಿವೆ. ಚಿಲ್ಲರೆ ವ್ಯಾಪಾರಿಗಳು ಸಾಮಾನ್ಯವಾಗಿ 10-15% ರಿಯಾಯಿತಿಗಳನ್ನು ನೀಡುತ್ತಾರೆ. ಆದರೆ ಏಕಾಏಕಿ ರಿಯಾಯಿತಿ ದರ ಏರಿಕೆ ಮಾಡಿರುವುದು ಹಳೆ ದಾಸ್ತಾನು ಖಾಲಿ ಮಾಡುವ ಉದ್ದೇಶ ಹೊಂದಿವೆ.

ಯಾವ ಉತ್ಪನ್ನಗಳ ಮೇಲೆ ಡಿಸ್ಕೌಂಟ್

ಯಾವ ಉತ್ಪನ್ನಗಳ ಮೇಲೆ ಡಿಸ್ಕೌಂಟ್

ಒಂದು ವರದಿಯ ಪ್ರಕಾರ, ರೆಫ್ರಿಜರೇಟರ್, ಏರ್ ಕಂಡಿಷನರ್ಸ್, ಟೆಲಿವಿಷನ್ ಸೆಟ್ ಗಳು ಮತ್ತು ವಾಷಿಂಗ್ ಮೆಷಿನ್ ಮೇಲೆ ಅವುಗಳ ಬೆಲೆಗಳಿಗೆ ಅನುಗುಣವಾಗಿ ಚಿಲ್ಲರೆ ವ್ಯಾಪಾರಿಗಳು ಬೆಲೆ ಕಡಿತಗೊಳಿಸುತ್ತಿದ್ದಾರೆ.

ಯಾವ ಕಂಪನಿ ಉತ್ಪನ್ನಗಳು

ಯಾವ ಕಂಪನಿ ಉತ್ಪನ್ನಗಳು

ಗ್ರಾಹಕರ ಎಲೆಕ್ಟ್ರಾನಿಕ್ ಕಂಪನಿಗಳಾದ ಸ್ಯಾಮ್ಸಂಗ್, ಹಿಟಾಚಿ, ಪ್ಯಾನಾಸಾನಿಕ್, ವೀಡಿಯೋಕಾನ್ ನಂತಹ ಪ್ರಮುಖ ಕಂಪನಿಗಳು ರಿಯಾಯಿತಿಗಳನ್ನು ನೀಡಲು ಮುಂದಾಗಿದ್ದು, ಹೊಸ ಆರ್ಡರ್ ಗಳನ್ನು ತೆಗೆಯುವ ಬದಲು ಹಳೆ ದಾಸ್ತಾನು ಖಾಲಿ ಮಾಡುವಂತೆ ಚಿಲ್ಲರೆ ವ್ಯಾಪಾರಿಗಳಿಗೆ ತಿಳಿಸಿದೆ.

ತೆರಿಗೆ ಹೆಚ್ಚಳ ಎಲ್ಲಿ?

ತೆರಿಗೆ ಹೆಚ್ಚಳ ಎಲ್ಲಿ?

ರಾಜ್ಯ ಸರ್ಕಾರದ ತೆರಿಗೆಗೆ ಅನುಸಾರ ಬಹುಷಹ ಮುಂಬೈ ನಲ್ಲಿ ಗ್ರಾಹಕರ ಎಲೆಕ್ಟ್ರಾನಿಕ್ ದರಗಳು ಏರಿಕೆ ಆಗುವುದಿಲ್ಲ. ಆದರೆ ಕರ್ನಾಟಕ, ಆಂದ್ರಪ್ರದೇಶ, ಮಧ್ಯಪ್ರದೇಶ ಹೀಗೆ ಪ್ರಸ್ತುತ ಎಲ್ಲೆಲ್ಲಿ ರಾಜ್ಯ ತೆರಿಗೆ ಕಡಿಮೆ ಇದೆಯೋ ಅಲ್ಲಿ ಬೆಲೆಗಳು ಏರಿಕೆಯಾಗಲಿದೆ ಎಂದು ವರದಿ ಹೇಳಿದೆ. ಜಿಎಸ್ಟಿ(GST) ಎಂದರೇನು? ಯಾಕೆ ಬೇಕು?

Read more about: gst taxes finance news savings
English summary

GST effect: Early Diwali for consumers as retailers offer up to 40% discount on TVs, ACs

The reason behind retailers offering discounts of up to 40 percent on various electronic goods and home appliances to consumers is to clear out all the old inventories to trim their losses ahead of the rollout of Goods and Services tax (GST) on 1 July.
Story first published: Tuesday, June 6, 2017, 16:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X