Englishहिन्दी മലയാളം தமிழ் తెలుగు

ಬೆಂಗಳೂರು ಟ್ರಾಫಿಕ್ ಸಮಸ್ಯೆ ಪರಿಹಾರಕ್ಕಾಗಿ ಫ್ಲಿಪ್‌ಕಾರ್ಟ್ ಮಾಡುತ್ತಿರುವುದೇನು?

Written By: Siddu
Subscribe to GoodReturns Kannada

ಬೆಂಗಳೂರು ಮೂಲದ ಇ-ಕಾಮರ್ಸ್ ದೈತ್ಯ ಸಂಸ್ಥೆ ಫ್ಲಿಪ್‌ಕಾರ್ಟ್ ತನ್ನ ದಶಮಾನೋತ್ಸವದ(10 ವರ್ಷ) ಅಂಗವಾಗಿ ನಗರದ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕಾಗಿ ಮುಂದಾಗಿದೆ.

ಫ್ಲಿಪ್ಕಾರ್ಟ್ ಗ್ರಿಡ್‌ಲಾಕ್‌ ಹ್ಯಾಕಥಾನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜೂನ್ 21ರವರೆಗೆ ನಡೆಯಲಿದೆ.

ದಶಮಾನೋತ್ಸವದ ಕೊಡುಗೆ

ಫ್ಲಿಪ್‌ಕಾರ್ಟ್ ಬೆಂಗಳೂರು ಮೂಲದ ಸಂಸ್ಥೆಯಾಗಿರುವುದರಿಂದ ಹತ್ತು ವರ್ಷದಗಳ ಸಂದರ್ಭದಲ್ಲಿ ನಮ್ಮ ನಗರಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ಉದ್ದೇಶದಿಂದ ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ದೀಪಕ್‌ ರಾಜಣ್ಣ ಹೇಳಿದ್ದಾರೆ.

ಸ್ಟೋರಿಸ್ ನೋಂದಣಿ ಅಗತ್ಯ

ಫ್ಲಿಪ್ಕಾರ್ಟ್ ಆಯೋಜಿಸುತ್ತಿರುವ ಗ್ರಿಡ್‌ಲಾಕ್‌ ಹ್ಯಾಕಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಷ್ಟಪಡುವವರು ಫ್ಲಿಪ್ಕಾರ್ಟ್ ಸ್ಟೋರಿಸ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು.

ಎಲ್ಲರ ಸಲಹೆ ಪಡೆಯಲಾಗುವುದು

ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಕುರಿತಾದ ಈ ಗ್ರಿಡ್‌ಲಾಕ್‌ ಹ್ಯಾಕಥಾನ್ ಕಾರ್ಯಕ್ರಮದಲ್ಲಿ ಸಂಸ್ಥೆಗಳ ಮುಖ್ಯಸ್ಥರು, ಉದ್ಯೋಗಿಗಳು ಹಾಗೂ ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಬಹುದು. ಹೀಗೆ ಎಲ್ಲರಿಂದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸೂಚಿಸುವಂತಹ ಸಲಹೆಗಳನ್ನು ಪಡೆದುಕೊಂಡು ಕಾರ್ಯರೂಪಕ್ಕೆ ತರುವುದು ಉದ್ದೇಶವಾಗಿದೆ.

ಟ್ರಾಫಿಕ್ ಸಮಸ್ಯೆ ಪರಿಹಾರ

ಬೆಂಗಳೂರಿನಲ್ಲಿರುವ ಟ್ರಾಫಿಕ್ ಸಮಸ್ಯೆ ಪರಿಹಾರ ಕಂಡುಕೊಳ್ಳುವುದೇ ಇದರ ಧ್ಯೇಯವಾಗಿದ್ದು, ಟ್ರಾಫಿಕ್ ದಟ್ಟಣೆಯ ಸಮಸ್ಯೆ ಎದುರಿಸುತ್ತಿರುವ ಎಲ್ಲ ಪ್ರದೇಶಗಳನ್ನೂ ಗಮನದಲ್ಲಿರಿಸಿಕೊಂಡು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ದೀಪಕ್‌ ರಾಜಣ್ಣ ಹೇಳಿದ್ದಾರೆ.

Read more about: flipkart, finance news, business, karnataka
English summary

To Solve Bengaluru's Traffic Problems, Flipkart Is Doing This

E-commerce major Flipkart turns 10 this year, and in order to do something for Bengaluru - the city in which it took birth - it are trying to help sort out the city's notorious traffic.
Story first published: Thursday, June 8, 2017, 17:29 [IST]
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC