Englishहिन्दी മലയാളം தமிழ் తెలుగు

ಪ್ರತಿದಿನ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ

Posted By: Siddu
Subscribe to GoodReturns Kannada

ಪ್ರತಿ 15 ದಿನಗಳಿಗೊಮ್ಮೆ ಪರಿಷ್ಕರಣೆ ಮಾಡಲಾಗುತ್ತಿದ್ದ ಪೆಟ್ರೋಲ್, ಡೀಸೆಲ್ ದರವನ್ನು ಜೂನ್ 16ರಿಂದ ಪ್ರತಿದಿನ ಪರಿಷ್ಕರಣೆ ಮಾಡಲು ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ನಿರ್ಧರಿಸಿದೆ.

ಪ್ರತಿದಿನ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ

ಈಗಾಗಲೇ ಪ್ರಾಯೋಗಿಕವಾಗಿ ಮೇ 1ರಿಂದ ದೇಶದ ಐದು ಮಹಾನಗರಗಳಾದ ಪಾಂಡಿಚೇರಿ, ಆಂಧ್ರಪ್ರದೇಶದ ವೈಝಾಗ್, ಉದಯಪುರ, ಜಾರ್ಖಂಡ್ ರಾಜ್ಯದ ಜಮ್ಶೆಡ್ಪುರ, ಚಂಡೀಗಢದಲ್ಲಿ ಪ್ರತಿ ದಿನ ದರ ಪರಿಷ್ಕರಣೆ ಆಗುತಿತ್ತು. ಇದು ಯಶಸ್ವಿಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಜಾರಿಗೊಳಿಸಲು ತೈಲ ಕಂಪೆನಿಗಳು ಮುಂದಾಗಿವೆ.
ಪ್ರತಿನಿತ್ಯ ಬದಲಾಗುವ ದರಗಳನ್ನು ಪೆಟ್ರೋಲ್ ಬಂಕ್ ಗಳಲ್ಲಿ, ಪತ್ರಿಕೆ ಜಾಹೀರಾತು ಮೂಲಕ ನೀಡಲಾಗುವುದು ಎನ್ನಲಾಗಿದೆ.
ಪ್ರಸ್ತುತ ಭಾರತದಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಶೇ. 95ರಷ್ಟು ಮಾರುಕಟ್ಟೆ ಜಾಲ ಹೊಂದಿದ್ದು, ಈ ಎಲ್ಲ ತೈಲ ಕಂಪೆನಿಗಳು ಏಪ್ರಿಲ್ 5ರಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಜತೆ ಚರ್ಚೆ ನಡೆಸಿದ್ದರು.

Read more about: petrol, taxes, income tax, money
English summary

Get ready to pay different prices for petrol, diesel every day

Starting June 16, you will be paying a different rate every day when you go to a gas station near you to get petrol or diesel for your vehicle. State oil companies will revise petrol and diesel prices daily for consumers across the country starting next Friday.
Story first published: Friday, June 9, 2017, 15:20 [IST]
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC