ಇಂಡಿಗೊ 'ಆಲ್ ಟೈಮ್ ಲೋ' ಆಫರ್, ಪ್ರಾರಂಭ ದರ ರೂ. 899
ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೊ 'ಆಲ್ ಟೈಮ್ ಲೋ' ಹೆಸರಿನಲ್ಲಿ ಪ್ರಚಾರಾರ್ಥ ಆಫರ್ ಘೋಷಿಸಿದೆ.
ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೊ 'ಆಲ್ ಟೈಮ್ ಲೋ' ಹೆಸರಿನಲ್ಲಿ ಪ್ರಚಾರಾರ್ಥ ಆಫರ್ ಘೋಷಿಸಿದೆ. ಸಾರ್ವಕಾಲಿಕ ಕಡಿಮೆ ಆಫರ್ ನ ಆರಂಭ ದರ ರೂ. 899 ಆಗಿದ್ದು, ಜೂನ್ 14ರ ವರೆಗೆ ಆಫರ್ ಇರಲಿದೆ.

ಆಲ್ ಟೈಮ್ ಲೋ ಆಫರ್ ಮೂಲಕ ನಿಗದಿತ ಮಾರ್ಗಗಳ ಮಧ್ಯೆ, ಜುಲೈ 1ರಿಂದ ಸೆಪ್ಟಂಬರ್ 30, 2017 ನಡುವಿನ ಅವಧಿಯಲ್ಲಿ ಪ್ರಯಾಣ ಮಾಡಬಹುದು.
ಅಗರ್ತಾಲ್, ಅಹಮದಾಬಾದ್, ಅಮೃತಸರ್, ಬಾಗ್ದೊಗ್ರಾ, ಬೆಂಗಳೂರು, ಭುವನೇಶ್ವರ, ಚಂಡೀಗಢ, ಚೆನ್ನೈ, ಕೊಯಮತ್ತೂರು, ಡೆಹ್ರಾಡೂನ್, ದೆಹಲಿ, ಗೋವಾ, ಗುವಾಹಟಿ, ಹೈದರಾಬಾದ್, ಇಂಫಾಲ್, ಇಂದೋರ್, ಜೈಪುರ, ಜಮ್ಮು, ಕೊಚ್ಚಿ, ಕೊಲ್ಕತ್ತಾ, ಲಕ್ನೋ, ಮಧುರೈ, ಮಂಗಳೂರು, ಮುಂಬೈ, ನಾಗ್ಪುರ್, ಪಾಟ್ನಾ, ಪೋರ್ಟ್ ಬ್ಲೇರ್, ಪುಣೆ, ರಾಯ್ಪುರ್, ರಾಂಚಿ, ಶ್ರೀನಗರ, ತಿರುವನಂತಪುರಂ, ಉದೈಪುರ್, ವಡೋದರಾ, ವಾರಣಾಸಿ ಮತ್ತು ವಿಶಾಖಪಟ್ಟಣಂ ನಾನ್ ಸ್ಟಾಪ್ ಮಾರ್ಗಗಳಿಗೆ ಮಾತ್ರ ಈ ಆಫರ್ ಅನ್ವಯಿಸುತ್ತದೆ ಎಂದು ಇಂಡಿಗೊ ಹೇಳಿದೆ.


Click it and Unblock the Notifications