Englishहिन्दी മലയാളം தமிழ் తెలుగు

ಬೆಂಗಳೂರು ಮೆಟ್ರೋ: ವಿಳಂಬ ನೀತಿ-ದುಪಟ್ಟು ವೆಚ್ಚ, ಪ್ರಯಾಣಿಕರಿಗೆ ಬರೆ!

Written By: Siddu
Subscribe to GoodReturns Kannada

ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ಪಡೆಯುವುದಕ್ಕಾಗಿ ನಮ್ಮ ಮೆಟ್ರೋ ಯೋಜನೆ ಪ್ರಾರಂಭಿಸಲಾಗಿದ್ದು, ಮೊದಲ ಹಂತ(ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿ) ಲೋಕಾರ್ಪಣೆಗೊಳ್ಳುತ್ತಿದೆ.

ಇದು ಸಂತಸದ ಸುದ್ದಿನೇ, ಆದರೆ ಇದಕ್ಕಾಗಿ ಖರ್ಚು ಮಾಡಿರುವ ಬಜೆಟ್ ಮತ್ತು ತೆಗೆದುಕೊಂಡಿರುವ ಅವಧಿ ನೋಡಿದರೆ ಶಾಕ್ ಆಗ್ತಿರಾ..?

ವಿಳಂಬನೀತಿ ಪರಿಣಾಮ

ಐದು ವರ್ಷಗಳ ವಿಳಂಬದ ಹಿನ್ನೆಲೆಯಲ್ಲಿ ಮೊದಲ ಹಂತದ ನಮ್ಮ ಮೆಟ್ರೋ ಅಂದಾಜು ವೆಚ್ಚ ರೂ. 6,500 ಕೋಟಿಗಿಂತ ಎರಡುಪಟ್ಟು ಹೆಚ್ಚಾಗಿದ್ದು, ರೂ. 14,405 ಕೋಟಿಗೆ ತಲುಪಿದೆ. 2006ರಲ್ಲಿ ಪ್ರಾರಂಭವಾಗಿ 2011ರಲ್ಲಿ ಪೂರ್ಣಗೊಳಿಸಲು ಅಂದಾಜಿಸಲಾಗಿದ್ದ ಯೋಜನೆಯೂ, ವಿಳಂಬದ ಐದು ವರ್ಷಗಳು ಸೇರಿದಂತೆ ಭರ್ತಿ 10 ವರ್ಷಗಳನ್ನು ನುಂಗಿದೆ!

ಪ್ರಯಾಣಿಕರಿಗೆ ಬರೆ

ವಿಳಂಬ ನೀತಿಯ ಪರಿಣಾಮದಿಂದ ಮೆಟ್ರೋ ಕಾಮಗಾರಿ ಪೂರ್ಣಗೊಳ್ಳಲು ಐದು ವರ್ಷ ತಗುಲಿರುವುದರಿಂದ ಅಂದಾಜುವೆಚ್ಚಕ್ಕಿಂತ ಖರ್ಚಾದ ವೆಚ್ಚ ದುಪ್ಪಟ್ಟಾಗಿದೆ. ಹೀಗಾಗಿ ಈ ವೆಚ್ಚವನ್ನು ಭರಿಸಲು ಟಿಕೇಟ್ ದರ ಹೆಚ್ಚಿಸುವುದು ಸರ್ಕಾರದ ಮುಂದಿರುವ ಪರಿಹಾರ. ಯಾರೇ ಏನೇ ಮಾಡಿದರೂ ಕೊನೆಗೆ ಬಲಿಪಶುವಾಗುವವರು ಪ್ರಯಾಣಿಕರು ಮಾತ್ರ. ನಷ್ಟ ತುಂಬಿಕೊಳ್ಳಲು ಈಗ ಪ್ರಯಾಣಿಕರ ಮೇಲೆ ಹೆಚ್ಚು ದರದ ಹೊರೆ ಬಿಳಲಿದೆ.

ಎಷ್ಟು ದರ ಹೆಚ್ಚಾಗಲಿದೆ?

ಜೂನ್ 19ರಿಂದ ಟಿಕೇಟ್ ದರ ಹೆಚ್ಚಾಗಲಿದ್ದು, ಶೇ. 15ರಷ್ಟು ಟಿಕೆಟ್ ದರ ಹೆಚ್ಚಾಗಲಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಹೇಳಿದ್ದಾರೆ. ಮೊದಲ ಬಾರಿಗೆ, ಮೈಸೂರು ರಸ್ತೆ-ಬೈಯಪ್ಪನಹಳ್ಳಿ ನಡುವೆ ಸಂಚಾರ ಆರಂಭವಾದಾಗಿನಿಂದ ಟಿಕೆಟ್ ದರವನ್ನು ಹೆಚ್ಚಿಸಿರಲಿಲ್ಲ.

ಮೆಟ್ರೋ ಯೋಜನೆ ಹೇಗಿತ್ತು?

ಪೂರ್ವದ-ಪಶ್ಚಿಮ(ಪರ್ಪಲ್ ಲೈನ್) ಮತ್ತು ನಾರ್ತ್-ಸೌತ್(ಗ್ರೀನ್ ಲೈನ್)- ಎರಡು ಕಾರಿಡಾರ್ ಗಳೊಂದಿಗೆ 42.3 ಕಿ.ಮೀ ಮೊದಲ ಹಂತದ ಯೋಜನೆ 2006ರಲ್ಲಿ ಪ್ರಾರಂಭವಾದಾಗ 6,500 ಕೋಟಿ ರೂ. ವೆಚ್ಚವಾಗಲಿದ್ದು, 2011 ರಲ್ಲಿ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿತ್ತು.ಆದರೆ ಹಂತ ಹಂತವಾಗಿ ಪೂರ್ಣಗೊಂಡ ಕಾಮಗಾರಿಯ ಅಂತಿಮ ಬಿಲ್ ರೂ. 14,405 ಕೋಟಿಗೆ ತಲುಪಿದೆ. ಅಂದರೆ ವಿಳಂಬದ ಐದು ವರ್ಷಗಳು ಸೇರಿದಂತೆ ಸಂಪೂರ್ಣ 10 ವರ್ಷಗಳು ಕಳೆದಿವೆ!

English summary

Namma Metro Phase I at double the cost and double the time

From an estimated cost of ₹6,500 crore when work began in 2006, the final bill for Phase I has come to ₹14,405 crore
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC