ಜಗತ್ತಿನ ಯಾವ ದೇಶದಲ್ಲಿ ಅತಿಹೆಚ್ಚು ಲಕ್ಷಾದಿಪತಿಗಳಿರಬಹುದು ಎನ್ನುವುದು ನಮ್ಮಲ್ಲಿರುವ ಕುತೂಹಲ. ವರ್ಲ್ಡ್ ವೆಲ್ತ್ ವರದಿ ಅನುಸಾರ ಹೆಚ್ಚು ನಿವ್ವಳ ಆಸ್ತಿ ಹೊಂದಿರುವ ಶ್ರೀಮಂತರು ಖ ಕೆಳಗಿನ ದೇಶಗಳಲ್ಲಿ ವಾಸವಾಗಿದ್ದಾರೆ.
ಜಗತ್ತಿನ ಯಾವ ದೇಶದಲ್ಲಿ ಅತಿಹೆಚ್ಚು ಲಕ್ಷಾದಿಪತಿಗಳಿರಬಹುದು ಎನ್ನುವುದು ನಮ್ಮಲ್ಲಿರುವ ಕುತೂಹಲ. ವರ್ಲ್ಡ್ ವೆಲ್ತ್ ವರದಿ ಅನುಸಾರ ಹೆಚ್ಚು ನಿವ್ವಳ ಆಸ್ತಿ ಹೊಂದಿರುವ ಶ್ರೀಮಂತರು ಖ ಕೆಳಗಿನ ದೇಶಗಳಲ್ಲಿ ವಾಸವಾಗಿದ್ದಾರೆ. ವರದಿ ಪ್ರಕಾರ ಆ ದೇಶಗಳು ಯಾವುವು ಎಂಬುದನ್ನು ನೋಡೋಣ...
ಯುಎಸ್ಎ
ಅತಿಹೆಚ್ಚು ಲಕ್ಷಾದಿಪತಿಗಳನ್ನು ಹೊಂದಿರುವ ದೇಶ ಅಮೆರಿಕಾ. ಇದು ಬರೋಬ್ಬರಿ 4,458,000 ಲಕ್ಷಾದಿಪತಿಗಳನ್ನು ಹೊಂದಿದೆ. ಬೇರೆ ಯಾವ ದೇಶ ಕೂಡ ಇದರ ಸನಿಹಕ್ಕೆ ಸುಳಿಯಲು ಸಾಧ್ಯವಿಲ್ಲ. ಯುಎಸ್ಎ ನಲ್ಲಿ 2015ರಲ್ಲಿ 4,458,000 ಮಿಲಿಯನೇರ್ ಗಳಿದ್ದರು. ಬಿಲ್ ಗೇಟ್ಸ್, ವಾರೆನ್ ಬಫೆಟ್ ನಂತಹ ಜಗತ್ತಿನ ಅತಿ ಶ್ರೀಮಂತರನ್ನು ಇದು ಒಳಗೊಂಡಿದೆ. ಪ್ರಪಂಚದ 10 ಶ್ರೀಮಂತ ದೇಶಗಳ ಸಾಲಿನಲ್ಲಿ ಭಾರತ
ಜಪಾನ್
ಜಪಾನ್ ದೇಶ 2,720,000 ಮಿಲಿಯನೇರ್ ಗಳನ್ನು ಹೊಂದಿದೆ. ಜಪಾನ್ ಜಗತ್ತಿನ ಯಾವುದೇ ದೇಶಕ್ಕಿಂತಲೂ ಹೆಚ್ಚು ಮಿಲಿಯನೇರ್ ತಲಾದಾಯ ಹೊಂದಿದೆ. ಜಪಾನ್ ನಲ್ಲಿ 2015ರಲ್ಲಿ 2,720,000 ಮಿಲಿಯನೇರ್ ಗಳಿದ್ದರು.
ಜರ್ಮನಿ
ಯೂರೋಪ್ ನಲ್ಲಿ ಜರ್ಮನಿ ಅತಿಹೆಚ್ಚು ಮಿಲಿಯನೇರ್ ಗಳನ್ನು ಹೊಂದಿರುವ ದೇಶ. 2015ರಲ್ಲಿ 1,199,000 ಲಕ್ಷಾದಿಪತಿಗಳು ಜರ್ಮನಿಯಲ್ಲಿದ್ದರು. 2014ರಲ್ಲಿ 1,142,000 ಮಿಲಿಯನೇರ್ ಗಳಿದ್ದರು. ಅತಿ ಹೆಚ್ಚು ನಿವ್ವಳ ಮೌಲ್ಯ ಹೊಂದಿರುವ ವ್ಯಕ್ತಿಗಳ ಸಂಖ್ಯೆ ಕೂಡ ಜರ್ಮನಿಯಲ್ಲಿದೆ.
ಚೀನಾ
1,034,000 ಮಿಲಿಯನೇರ್ ಗಳನ್ನು ಚೀನಾ ಹೊಂದಿದೆ. ತುಂಬಾ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಚೀನಾ ಮುಂಚೂಣಿಯಲ್ಲಿದೆ. 2014ರಿಂದ 2015ರಲ್ಲಿ ಕೇವಲ ಒಂದು ವರ್ಷದ ಅವಧಿಯಲ್ಲಿ ಒಂದು ಲಕ್ಷ ಲಕ್ಷಾದಿಪತಿಗಳು ಏರಿಕೆ ಕಂಡಿದ್ದಾರೆ.
ಯುಕೆ
ಯುನೈಟೆಡ್ ಕಿಂಗ್ಡಮ್ ನಲ್ಲಿ 553,000 ಮಿಲಿಯನೇರ್ ಗಳಿದ್ದಾರೆ. ಯುಕೆಯ ಆರ್ಥಿಕತೆ ಮತ್ತು ರಿಯಲ್ ಎಸ್ಟೇಟ್ ಮಾರುಕಟ್ಟೆ ಅಲ್ಲಿನ ಲಕ್ಷಾಧಿಪತಿಗಳ ಹೆಚ್ಚಳಕ್ಕೆ ಕಾರಣವಾಗಿದೆ.
ಫ್ರಾನ್ಸ್
5,23,000 ಲಕ್ಷಾದಿಪತಿಗಳು ಫ್ರಾನ್ಸ್ ನಲ್ಲಿದ್ದಾರೆ. ವರದಿ ಪ್ರಕಾರ 494,000 ಲಕ್ಷಾದಿಪತಿಗಳು 2014ರಲ್ಲಿದ್ದರು. ಅನೇಕ ಮಿಲಿಯನೇರ್ ಗಳು ಫ್ರಾನ್ಸ್ ಬಿಟ್ಟು ಹೋಗುತ್ತಿದ್ದಾರೆ.
ಸ್ವಿಟ್ಜರ್ಲ್ಯಾಂಡ್
ಈ ಯೂರೋಪಿಯನ್ ದೇಶ 2015ರಲ್ಲಿ 358,000 ಲಕ್ಷಾದಿಪತಿಗಳ ನೆಲೆಯಾಗಿದೆ. ಯೂರೋಪಿನಲ್ಲಿ ಸ್ವಿಟ್ಜರ್ಲ್ಯಾಂಡ್ ಅತಿಹೆಚ್ಚು ಮಿಲಿಯನೇರ್ ತಲಾದಾಯ ಹೊಂದಿದೆ. 2014ರಲ್ಲಿ 3,43,000 ಮಿಲಿಯನೇರ್ ಗಳಿದ್ದರು.


Click it and Unblock the Notifications