ಜಗತ್ತಿನ ಯಾವ ದೇಶದಲ್ಲಿ ಅತಿಹೆಚ್ಚು ಲಕ್ಷಾಧಿಪತಿಗಳಿರಬಹುದು ಎನ್ನುವುದು ನಮ್ಮಲ್ಲಿರುವ ಕುತೂಹಲ. ವರ್ಲ್ಡ್ ವೆಲ್ತ್ ವರದಿ ಅನುಸಾರ ಹೆಚ್ಚು ನಿವ್ವಳ ಆಸ್ತಿ ಹೊಂದಿರುವ ಶ್ರೀಮಂತರು ಖ ಕೆಳಗಿನ ದೇಶಗಳಲ್ಲಿ ವಾಸವಾಗಿದ್ದಾರೆ.
ಜಗತ್ತಿನ ಯಾವ ದೇಶದಲ್ಲಿ ಅತಿಹೆಚ್ಚು ಲಕ್ಷಾಧಿಪತಿಗಳಿರಬಹುದು ಎನ್ನುವುದು ನಮ್ಮಲ್ಲಿರುವ ಕುತೂಹಲ. ವರ್ಲ್ಡ್ ವೆಲ್ತ್ ವರದಿ ಅನುಸಾರ ಹೆಚ್ಚು ನಿವ್ವಳ ಆಸ್ತಿ ಹೊಂದಿರುವ ಶ್ರೀಮಂತರು ಖ ಕೆಳಗಿನ ದೇಶಗಳಲ್ಲಿ ವಾಸವಾಗಿದ್ದಾರೆ. ವರದಿ ಪ್ರಕಾರ ಆ ದೇಶಗಳು ಯಾವುವು ಎಂಬುದನ್ನು ನೋಡೋಣ...
ಯುಎಸ್ಎ
ಅತಿಹೆಚ್ಚು ಲಕ್ಷಾಧಿಪತಿಗಳನ್ನು ಹೊಂದಿರುವ ದೇಶ ಅಮೆರಿಕಾ. ಇದು ಬರೋಬ್ಬರಿ 4,458,000 ಲಕ್ಷಾಧಿಪತಿಗಳನ್ನು ಹೊಂದಿದೆ. ಬೇರೆ ಯಾವ ದೇಶ ಕೂಡ ಇದರ ಸನಿಹಕ್ಕೆ ಸುಳಿಯಲು ಸಾಧ್ಯವಿಲ್ಲ. ಯುಎಸ್ಎ ನಲ್ಲಿ 2015ರಲ್ಲಿ 4,458,000 ಮಿಲಿಯನೇರ್ ಗಳಿದ್ದರು. ಬಿಲ್ ಗೇಟ್ಸ್, ವಾರೆನ್ ಬಫೆಟ್ ನಂತಹ ಜಗತ್ತಿನ ಅತಿ ಶ್ರೀಮಂತರನ್ನು ಇದು ಒಳಗೊಂಡಿದೆ. ಪ್ರಪಂಚದ 10 ಶ್ರೀಮಂತ ದೇಶಗಳ ಸಾಲಿನಲ್ಲಿ ಭಾರತ
ಜಪಾನ್
ಜಪಾನ್ ದೇಶ 2,720,000 ಮಿಲಿಯನೇರ್ ಗಳನ್ನು ಹೊಂದಿದೆ. ಜಪಾನ್ ಜಗತ್ತಿನ ಯಾವುದೇ ದೇಶಕ್ಕಿಂತಲೂ ಹೆಚ್ಚು ಮಿಲಿಯನೇರ್ ತಲಾದಾಯ ಹೊಂದಿದೆ. ಜಪಾನ್ ನಲ್ಲಿ 2015ರಲ್ಲಿ 2,720,000 ಮಿಲಿಯನೇರ್ ಗಳಿದ್ದರು.
ಜರ್ಮನಿ
ಯೂರೋಪ್ ನಲ್ಲಿ ಜರ್ಮನಿ ಅತಿಹೆಚ್ಚು ಮಿಲಿಯನೇರ್ ಗಳನ್ನು ಹೊಂದಿರುವ ದೇಶ. 2015ರಲ್ಲಿ 1,199,000 ಲಕ್ಷಾಧಿಪತಿಗಳು ಜರ್ಮನಿಯಲ್ಲಿದ್ದರು. 2014ರಲ್ಲಿ 1,142,000 ಮಿಲಿಯನೇರ್ ಗಳಿದ್ದರು. ಅತಿ ಹೆಚ್ಚು ನಿವ್ವಳ ಮೌಲ್ಯ ಹೊಂದಿರುವ ವ್ಯಕ್ತಿಗಳ ಸಂಖ್ಯೆ ಕೂಡ ಜರ್ಮನಿಯಲ್ಲಿದೆ.
ಚೀನಾ
1,034,000 ಮಿಲಿಯನೇರ್ ಗಳನ್ನು ಚೀನಾ ಹೊಂದಿದೆ. ತುಂಬಾ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಚೀನಾ ಮುಂಚೂಣಿಯಲ್ಲಿದೆ. 2014ರಿಂದ 2015ರಲ್ಲಿ ಕೇವಲ ಒಂದು ವರ್ಷದ ಅವಧಿಯಲ್ಲಿ ಒಂದು ಲಕ್ಷ ಲಕ್ಷಾದಿಪತಿಗಳು ಏರಿಕೆ ಕಂಡಿದ್ದಾರೆ.
ಯುಕೆ
ಯುನೈಟೆಡ್ ಕಿಂಗ್ಡಮ್ ನಲ್ಲಿ 553,000 ಮಿಲಿಯನೇರ್ ಗಳಿದ್ದಾರೆ. ಯುಕೆಯ ಆರ್ಥಿಕತೆ ಮತ್ತು ರಿಯಲ್ ಎಸ್ಟೇಟ್ ಮಾರುಕಟ್ಟೆ ಅಲ್ಲಿನ ಲಕ್ಷಾಧಿಪತಿಗಳ ಹೆಚ್ಚಳಕ್ಕೆ ಕಾರಣವಾಗಿದೆ.
ಫ್ರಾನ್ಸ್
5,23,000 ಲಕ್ಷಾದಿಪತಿಗಳು ಫ್ರಾನ್ಸ್ ನಲ್ಲಿದ್ದಾರೆ. ವರದಿ ಪ್ರಕಾರ 494,000 ಲಕ್ಷಾದಿಪತಿಗಳು 2014ರಲ್ಲಿದ್ದರು. ಅನೇಕ ಮಿಲಿಯನೇರ್ ಗಳು ಫ್ರಾನ್ಸ್ ಬಿಟ್ಟು ಹೋಗುತ್ತಿದ್ದಾರೆ.
ಸ್ವಿಟ್ಜರ್ಲ್ಯಾಂಡ್
ಈ ಯೂರೋಪಿಯನ್ ದೇಶ 2015ರಲ್ಲಿ 358,000 ಲಕ್ಷಾದಿಪತಿಗಳ ನೆಲೆಯಾಗಿದೆ. ಯೂರೋಪಿನಲ್ಲಿ ಸ್ವಿಟ್ಜರ್ಲ್ಯಾಂಡ್ ಅತಿಹೆಚ್ಚು ಮಿಲಿಯನೇರ್ ತಲಾದಾಯ ಹೊಂದಿದೆ. 2014ರಲ್ಲಿ 3,43,000 ಮಿಲಿಯನೇರ್ ಗಳಿದ್ದರು.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications