ಜಿಯೋ ಸಿಮ್ ಹೋಮ್ ಡೆಲಿವರಿ ಆಫರ್! 100% ಕ್ಯಾಶ್ ಬ್ಯಾಕ್..!!

ಜಿಯೋ ವೆಲ್ ಕಮ್ ಆಫರ್ ನೊಂದಿಗೆ ಪ್ರಾರಂಭವಾಗಿರುವ ಈ ಪಯಣ ಇದೀಗ ಮನೆ ಬಾಗಿಲಿಗೆ ಸಿಮ್ ವಿತರಣೆ ಮಾಡುವ ಹಂತಕ್ಕೆ ತಲುಪಿದೆ...!

ಮುಖೇಶ್ ಅಂಬಾನಿ ಏನೇ ಮಾಡಿದ್ರೂ ಅದು ಡಿಫರೆಂಟ್ ಆಗಿರತ್ತೆ. ಯಾಕಂದ್ರೆ ಅವರು ಬಿಸಿನೆಸ್ ನಲ್ಲಿ ಪಕ್ಕಾ ಲೆಕ್ಕಾಚಾರದ ಮನುಷ್ಯ.
ಟೆಲಿಕಾಂ ರಂಗದಲ್ಲಿ ಅಂಬಾನಿ ಏನೇ ಮಾಡಿದರೂ ಅದಕ್ಕೊಂದು ತೂಕವಿದೆ.. ಮಿಗಿಲಾಗಿ ವೇಗವಿದೆ... ಹಾಗಿದ್ರೆ ಮುಖೇಶ್ ಅಂಬಾನಿ ತನ್ನ ಗ್ರಾಹಕರಿಗೆ ನೀಡುತ್ತಿರುವ ಆಫರ್ ಏನು..?

ರಿಲಯನ್ಸ್ ಜಿಯೋ ವೆಲ್ ಕಮ್ ಆಫರ್ ನೊಂದಿಗೆ ಪ್ರಾರಂಭವಾಗಿರುವ ಈ ಪಯಣ ಇದೀಗ ಮನೆ ಬಾಗಿಲಿಗೆ ಸಿಮ್ ವಿತರಣೆ ಮಾಡುವ ಹಂತಕ್ಕೆ ತಲುಪಿದೆ...!

ಕಠಿಣ ಸ್ಪರ್ಧೆ

ಕಠಿಣ ಸ್ಪರ್ಧೆ

ಜಿಯೋ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಅಂಬಾನಿ ಟೆಲಿಕಾಂ ಕಂಪನಿಗಳೊಂದಿಗೆ ಟಫ್ ಕಾಂಪಿಟೇಷನ್ ನೀಡುತ್ತಾ ಬಂದಿದ್ದಾರೆ. ಜಿಯೋ ಪ್ರಾರಂಭದಲ್ಲಿ ಉಚಿತ ಕರೆ ಮತ್ತು ಡೇಟಾ ಆಫರ್ ಗಳನ್ನು ನೀಡಿತ್ತು. ಇದೀಗ ಕಡಿಮೆ ದರದಲ್ಲಿ ಆಫರ್ ಗಳನ್ನು ಒದಗಿಸುತ್ತಿದೆ. ಹೀಗಾಗಿ ಎಲ್ಲಾ ಕಂಪನಿಗಳು ಕಂಗಾಲಾಗಿ ತಮ್ಮ ಗ್ರಾಹಕರನ್ನು ಉಳಿಸುವ ನಿಟ್ಟಿನಲ್ಲಿ ದರಸಮರದ ಸ್ಪರ್ಧೆಗೆ ಇಳಿದು ಆಫರ್ ಗಳನ್ನು ಘೋಷಿಸತೊಡಗಿವೆ. ಜಿಯೋ ದೂರಸಂಪರ್ಕ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸುವ ನಿಟ್ಟಿನಲ್ಲಿ ದಾಪುಗಾಲು ಇಟ್ಟಿದೆ.

ಹೋಮ್ ಡೆಲಿವರಿ

ಹೋಮ್ ಡೆಲಿವರಿ

ರಿಲಯನ್ಸ್ ಸಂಸ್ಥೆ ಜಿಯೋ ಸಿಮ್ ಗಳನ್ನು ಹೋಮ್ ಡೆಲಿವರಿ ಮಾಡುವುದಾಗಿ ಘೋಷಿಸಿದೆ. ಅದೂ ಕೂಡ 600 ಮತ್ತು ಅದಕ್ಕಿಂತ ಹೆಚ್ಚಿನ ನಗರಗಳಲ್ಲಿ ಮನೆ ಬಾಗಿಲಿಗೆ ವಿತರಣೆ ಮಾಡಲಿದೆ. ಜಿಯೋ ಸಿಮ್ ಆಫರ್ ನೊಂದಿಗೆ ಪ್ರಾರಂಭವಾಗಿರುವ ಈ ಪಯಣ ಇದೀಗ ಮನೆ ಬಾಗಿಲಿಗೆ ಸಿಮ್ ವಿತರಣೆ ಮಾಡುವ ಹಂತಕ್ಕೆ ತಲುಪಿದೆ...

ಜಿಯೋಫೈ ಹಾಟ್ ಸ್ಪಾಟ್

ಜಿಯೋಫೈ ಹಾಟ್ ಸ್ಪಾಟ್

ಹೋಮ್ ಡೆಲಿವರಿ ಜತೆ ಆಯ್ಕೆ ಮಾಡಲ್ಪಟ್ಟ ಕೆಲ ನಿರ್ಧಿಷ್ಟ ನಗರಗಳಲ್ಲಿ ನಿಮ್ಮ ಮನೆಯಲ್ಲಿ ಜಿಯೋಫೈ 4G ಹಾಟ್ ಸ್ಪಾಟ್ ವ್ಯವಸ್ಥೆ ಸೇವೆ ಒದಗಿಸಲಿದೆ. ಅದು ಕೂಡ ಕೇವಲ 90 ನಿಮಿಷಗಳಲ್ಲಿ!

100% ಕ್ಯಾಶ್ ಬ್ಯಾಕ್!

100% ಕ್ಯಾಶ್ ಬ್ಯಾಕ್!

ಅಂಬಾನಿ ಮಾಲೀಕತ್ವದ ಜಿಯೋ ಮತ್ತೊಂದು ಸೂಪರ್ ಆಫರ್ ನ್ನು ಗ್ರಾಹಕರಿಗೆ ಪರಿಚಯಿಸಿದೆ. ಹಳೆಯ ಡಾಂಗಲ್, ಡೇಟಾ ಕಾರ್ಡ್, ವೈಫೈ ರೂಟರ್ ಗಳನ್ನು ಜಿಯೋಫೈ 4ಜಿ ರೂಟರ್ ಜತೆ ಎಕ್ಸ್‌ಚೇಂಜ್ ಮಾಡಿಕೊಂಡರೆ 100% ಕ್ಯಾಶ್ ಬ್ಯಾಕ್ ಆಫರ್ ಪಡೆಯಬಹುದು. ಜಿಯೋ ಹೊಸ ಅವತಾರ! 100% ಕ್ಯಾಶ್ ಬ್ಯಾಕ್ ಬಂಪರ್ ಆಫರ್!!

2010 ಮೌಲ್ಯದ 4ಜಿ ಡೇಟಾ ಉಚಿತ

2010 ಮೌಲ್ಯದ 4ಜಿ ಡೇಟಾ ಉಚಿತ

ಜಿಯೋಫೈ ಪ್ಲಾನ್ ಪ್ರಕಾರ ಯಾವುದೇ ಟೆಲಿಕಾಂ ಕಂಪನಿಗಳ ಈಗಾಗಲೇ ಬಳಸುತ್ತಿರುವ ಡೇಟಾ ಕಾರ್ಡ್, ಡಾಂಗಲ್, ಹಾಟ್ ಸ್ಪಾಟ್ ರೂಟರನ್ನು ವಿನಿಮಯ ಮಾಡಿಕೊಳ್ಳಬೇಕು. ಹೀಗೆ ಮಾಡಿದರೆ 100% ಕ್ಯಾಶ್ ಬ್ಯಾಕ್ ಅಥವಾ 2010 ರೂಪಾಯಿ ಮೌಲ್ಯದ 4ಜಿ ಡೇಟಾ ಪಡೆಯಬಹುದು.

ಉಚಿತ ಸೇವೆ

ಉಚಿತ ಸೇವೆ

ಜಿಯೋ ಸಿಮ್ ಹೋಮ್ ಡೆಲಿವರಿ ಸಂಪೂರ್ಣವಾಗಿ ಉಚಿತವಾಗಿರಲಿದ್ದು, ಯಾವುದೇ ಶುಲ್ಕವನ್ನು ಇರುವುದಿಲ್ಲ ಎಂದು ಹೇಳಿದೆ. ಸಿಮ್ ಡೆಲಿವರಿಗಾಗಿ ಮೊದಲು MyJio ಆಪ್ ಡೌನ್ಲೋಡ್ ಮಾಡಿ, ಆಪ್ ನಲ್ಲಿ ಕೂಪನ್ ಜನರೇಟ್ ಮಾಡಬೇಕು. ತದನಂತರ ಆನ್ಲೈನ್ ಮೂಲಕ ಅಪಾಯಿಂಟ್ಮೆಂಟ್ ಪಡೆಯಬೇಕು.

ಆಧಾರ್ ಕಡ್ಡಾಯ

ಆಧಾರ್ ಕಡ್ಡಾಯ

ಸಿಮ್ ಹೋಮ್ ಡೆಲಿವರಿ ಪಡೆಯುವ ಸಂದರ್ಭದಲ್ಲಿ ಆಧಾರ್ ನಂಬರ್ ಒದಗಿಸಬೇಕು. ಇದು ನಿಮ್ಮ ಇ-ಕೆವೈಸಿ ಪ್ರಕ್ರಿಯೆ ಹಾಗೂ ಕೂಪನ್ ನಲ್ಲಿ ಆಪ್ ಜನರೇಟ್ ಮಾಡಲು ಅಗತ್ಯವಾಗಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+