Englishहिन्दी മലയാളം தமிழ் తెలుగు

ಜಿಯೋ ಹೊಸ ಅವತಾರ! 100% ಕ್ಯಾಶ್ ಬ್ಯಾಕ್ ಬಂಪರ್ ಆಫರ್!!

Written By: Siddu
Subscribe to GoodReturns Kannada

ರಿಲಯನ್ಸ್ ಜಿಯೋ ಆಫರ್ ಗಳ ಸರಣಿ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ವೆಲ್ಕಮ್ ಆಫರ್ ನಿಂದ ಹಿಡಿದು ಇಲ್ಲಿಯವರೆಗೆ ಹತ್ತು ಹಲವು ಕೊಡುಗೆಗಳನ್ನು ಘೋಷಿಸುತ್ತಾ.. ಗ್ರಾಹಕರನ್ನು ಪೋಷಿಸಿ ಮನರಂಜಿಸುತಾ... ಟೆಲಿಕಾಂ ಕಂಪನಿಗಳಲ್ಲಿ ನಡುಕ ಹುಟ್ಟಿಸುತ್ತಾ... ದರ ಸಮರದೊಂದಿಗೆ ಸ್ಪರ್ಧಿಸುತ್ತಾ... ಟೆಲಿಕಾಂ ರಂಗದಿ ಮುನ್ನಡೆ ಸಾಧಿಸುತ್ತಾ ಮುನ್ನಡೆಯುತ್ತಲೇ ಸಾಗಿದೆ..!!

ಜಿಯೋ ಸಮರ್ ಸರ್ಪ್ರೈಸ್, ಧನ್ ಧನಾ ಧನ್ ಆಫರ್ ಗಳ ನಂತರ ಜಿಯೋ ಕಂಪನಿ ಜಿಯೋಫೈ ಹೆಸರಲ್ಲಿ ಮತ್ತೆರಡು ಹೊಸ ಆಫರ್ ಗಳನ್ನು ಘೋಷಿಸಿದೆ. ಜಿಯೋ ಉಲಾಲಾ.... ಇನ್ನೂ 12-18 ತಿಂಗಳು ಉಚಿತ ಆಫರ್!!

100% ಕ್ಯಾಶ್ ಬ್ಯಾಕ್!

ಅಂಬಾನಿ ಮಾಲೀಕತ್ವದ ಜಿಯೋ ಮತ್ತೊಂದು ಸೂಪರ್ ಆಫರ್ ನ್ನು ಗ್ರಾಹಕರಿಗೆ ಪರಿಚಯಿಸಿದೆ. ಹಳೆಯ ಡಾಂಗಲ್, ಡೇಟಾ ಕಾರ್ಡ್, ವೈಫೈ ರೂಟರ್ ಗಳನ್ನು ಜಿಯೋಫೈ 4ಜಿ ರೂಟರ್ ಜತೆ ಎಕ್ಸ್‌ಚೇಂಜ್ ಮಾಡಿಕೊಂಡರೆ 100% ಕ್ಯಾಶ್ ಬ್ಯಾಕ್ ಆಫರ್ ಘೋಷಿಸಿದೆ.

2010 ಮೌಲ್ಯದ 4ಜಿ ಡೇಟಾ ಉಚಿತ

ಜಿಯೋಫೈ ಎರಡು ಪ್ಲಾನ್ ಗಳನ್ನು ಪ್ರಕಟಿಸಿದೆ. ಮೊದಲನೇ ಪ್ಲಾನ್ ಪ್ರಕಾರ ಯಾವುದೇ ಟೆಲಿಕಾಂ ಕಂಪನಿಗಳ ಈಗಾಗಲೇ ಬಳಸುತ್ತಿರುವ ಡೇಟಾ ಕಾರ್ಡ್, ಡಾಂಗಲ್, ಹಾಟ್ ಸ್ಪಾಟ್ ರೂಟರನ್ನು ಹತ್ತಿರದ ಜಿಯೋ ಡಿಜಿಟಲ್ ಮಳಿಗೆ ಅಥವಾ ಜಿಯೋ ಕೇರ್ ಮಳಿಗೆಯಲ್ಲಿ ವಿನಿಮಯ ಮಾಡಿಕೊಳ್ಳಬೇಕು. ಹೀಗೆ ಮಾಡಿದರೆ 100% ಕ್ಯಾಶ್ ಬ್ಯಾಕ್ ಅಥವಾ 2010 ರೂಪಾಯಿ ಮೌಲ್ಯದ 4ಜಿ ಡೇಟಾ ಪಡೆಯಬಹುದು.

ಪಡೆಯಲು ಏನು ಮಾಡಬೇಕು?

100% ಕ್ಯಾಶ್ ಬ್ಯಾಕ್ ಅಥವಾ 2010 ರೂಪಾಯಿ ಮೌಲ್ಯದ 4ಜಿ ಡೇಟಾ ಪಡೆಯಬೇಕೆಂದರೆ ಜಿಯೋ ಧನ್ ಧನಾಧನ್ ಅಡಿಯಲ್ಲಿ ರೂ. 309+99 ಕಡ್ಡಾಯವಾಗಿ 408 ರೂಪಾಯಿಗಳ ರೀಚಾರ್ಜ್ ಮಾಡಿಕೊಳ್ಳಬೇಕು. ಸಾಮಾನ್ಯವಾಗಿ ಎಲ್ಲಾ ಗ್ರಾಹಕರು ಫ್ರೈಮ್ ಮೆಂಬರ್ಶಿಪ್ ಮತ್ತು ಧನ್ ಧನಾಧನ್ ಯೋಜನೆ ಅಡಿಯಲ್ಲಿ ರೀಚಾರ್ಜ್ ಮಾಡಿ ಕೊಡುಗೆಗಳನ್ನು ಆನಂದಿಸುತ್ತಿರುತ್ತಾರೆ. ಆದರಿಂದ ಈ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ.

ಜಿಯೋಫೈ ರೂಟರ್ ಬೆಲೆ ರೂ. 1999

ಗ್ರಾಹಕರು ಜಿಯೋಫೈ ರೂಟರ್ ನ್ನು ರೂ. 1999 ಕೊಟ್ಟು ಖರೀದಿಸಿರೆ ಈಗಾಗಲೇ ದೊರಕುವ 100% ಕ್ಯಾಶ್ ಬ್ಯಾಕ್ ಅಂದರೆ ರೂ. 2010 ಮೌಲ್ಯದ 4ಜಿ ಡೇಟಾದೊಂದಿಗೆ ಮೈನಸ್ ಮಾಡಿದರೆ ಇಂಟರ್ನೆಟ್ ಸಂಪರ್ಕ ಉಚಿತವಾಗಿ ಲಭಿಸಿದಂತೆ ಆಗುತ್ತದೆ. ಇದರ ಜತೆಗೆ ಜಿಯೋಫೈ ಡಿವೈಸ್ ಸಹ ಉಚಿತವಾಗಿ ಸಿಗಲಿದೆ.

ಎರಡನೇ ಪ್ಲಾನ್ ಏನು?

ಎರಡನೇ ಯೋಜನೆ ಅಡಿ ಗ್ರಾಹಕರಿಗೆ ರೂ. 1999 ಮೌಲ್ಯದ ಜಿಯೋಫೈ ಉಚಿತವಾಗಿ ಸಿಗಲಿದೆ. ಆದರೆ ರೂ. 408 (309 + 99) ಕಡ್ಡಾಯವಾಗಿ ಮೊದಲ ರೀಚಾರ್ಜ್ ಮಾಡಿಕೊಳ್ಳಬೇಕು. ಹೊಸ ಸಿಮ್ ಪಡೆಯಲು ರೂ. 309 ಮತ್ತು ಜಿಯೋ ನಾನ್ ಫ್ರೈಮ್ ಮೆಂಬರ್ ರ್ಶಿಪ್ 99 ರೂ. 408 (309 + 99) ರೂಪಾಯಿ ಪಾವತಿಸಬೇಕು. ಎರಡನೇ ಯೋಜನೆಯಡಿ ಕೇವಲ ರೂ. 1005 ಮೌಲ್ಯದ 4ಜಿ ಡೇಟಾ ಮಾತ್ರ ಸಿಗಲಿದೆ.

ಪ್ಲಾನ್ ಯಾರಿಗೆ ಪ್ರಯೋಜನ?

ಈಗಾಗಲೇ ಡಾಂಗಲ್ ಬಳಸುತ್ತಿರುವ ಗ್ರಾಹಕರಿಗೆ ಮೊದಲನೇ ಯೋಜನೆ ಅನುಕೂಲವಾದರೆ, ಎರಡನೇ ಪ್ಲಾನ್ ಲ್ಯಾಪ್‌ಟಾಪ್ ಬಳಕೆದಾರರು, 2G/3G ಫೋನ್ ಬಳಕೆದಾರು ಮತ್ತು ಟ್ಯಾಬ್ಲೆಟ್ ಬಳಸುತ್ತಿರುವವರಿಗೆ ಪ್ರಯೋಜನಕಾರಿಯಾಗಲಿದೆ.

4 ವಿಧದ ಜಿಯೋಫೈ ಡಿವೈಸ್ ಗಳು

ಪ್ರಸ್ತುತ ರಿಲಯನ್ಸ್ ನಾಲ್ಕು ತರಹದ ಜಿಯೋಫೈ ಡಿವೈಸ್‌ಗಳನ್ನು ಮಾರಾಟ ಮಾಡುತ್ತಿದೆ.
ಜಿಯೋಫೈ 1 ರೂಟರ್
ಜಿಯೋಫೈ 2 ರೂಟರ್
ಜಿಯೋಫೈ 3 ರೂಟರ್
ಜಿಯೋಫೈ 4 ಡಾಂಗಲ್  ಮತ್ತೆ ಜಿಯೋ ಧಮಾಕಾ... 'ಧನ್ ಧನಾ ಧನ್' ಭರ್ಜರಿ ಆಫರ್!!

English summary

Reliance Jio offer: Exchange old datacard, dongle, router, get 100% cashback on JioFi

Reliance Jio has launched a 100% cashback offer with JioFi 4G router, as the Mukesh Ambani-owned tries to attract users of dongles, datacard and wifi routers offered by rival telcos.
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC