ಇಡೀ ದೇಶದಾದ್ಯಂತ 'ಒಂದು ದೇಶ ಒಂದು ತೆರಿಗೆ' ಜಪ ಜೋರಾಗಿ ಸದ್ದು ಮಾಡುತ್ತಿದ್ದು, ಸರಕು ಮತ್ತು ಸೇವಾ ತೆರಿಗೆ (goods and services tax) ಜಾರಿಗೆ ಕ್ಷಣಗಣನೆ ಆರಂಭವಾಗಿದೆ.
ಇಡೀ ದೇಶದಾದ್ಯಂತ 'ಒಂದು ದೇಶ ಒಂದು ತೆರಿಗೆ' ಜಪ ಜೋರಾಗಿ ಸದ್ದು ಮಾಡುತ್ತಿದ್ದು, ಸರಕು ಮತ್ತು ಸೇವಾ ತೆರಿಗೆ (goods and services tax) ಜಾರಿಗೆ ಕ್ಷಣಗಣನೆ ಆರಂಭವಾಗಿದೆ.

ಇಂದು(ಶುಕ್ರವಾರ) ಮಧ್ಯರಾತ್ರಿ 'ಒಂದು ರಾಷ್ಟ್ರ, ಒಂದು ತೆರಿಗೆ' ಎಂಬ ಜಿಎಸ್ಟಿ ಪರಿಕಲ್ಪನೆಯ ಐತಿಹಾಸಿಕ ಘಟನೆಗೆ ದೇಶ ಸಾಕ್ಷಿಯಾಗಲಿದೆ.
ಪಾರ್ಲಿಮೆಂಟ್ ನ ಸೆಂಟ್ರಲ್ ಹಾಲ್ ಈ ಹೊಸ ಯುಗಾರಂಭಕ್ಕೆ ನಾಂದಿ ಹಾಡಲಿದೆ. ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಜಿಎಸ್ಟಿ ವ್ಯವಸ್ಥೆಗೆ ಚಾಲನೆ ನೀಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಭಾಷಣ ಮಾಡಲಿದ್ದಾರೆ.
ಸ್ವಾತಂತ್ರ್ಯಾ ಭಾರತದಲ್ಲಿ ಜಾರಿಗೆ ಬರುತ್ತಿರುವ ಅತೀ ದೊಡ್ಡ ತೆರಿಗೆ ಸುಧಾರಣೆ ಎಂದು ಜಿಎಸ್ಟಿ ಖ್ಯಾತಿ ಪಡೆದಿದೆ. ಈ ನೂತನ ವ್ಯವಸ್ಥೆ ಮೂಲಕ ಪರೋಕ್ಷ ತೆರಿಗೆ, ಅಬಕಾರಿ ಸುಂಕ, ವ್ಯಾಟ್, ಅಕ್ಟ್ರಾಯ್ ಸೇರಿದಂತೆ ಇತರ ಸ್ಥಳೀಯ ತೆರಿಗೆಗಳನ್ನು ರದ್ದುಪಡಿಸಿ ಕೇಂದ್ರ ಮತ್ತು ರಾಜ್ಯಗಳ ಮಟ್ಟದಲ್ಲಿ ಏಕರೂಪದ ಒಂದೇ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.
ಸಂಪೂರ್ಣವಾಗಿ ಆನ್‌ಲೈನ್ ಮೂಲಕ ತೆರಿಗೆ ಪಾವತಿ ಕಾರ್ಯನಿರ್ವಹಿಸುವುದರಿಂದ ತೆರಿಗೆ ವಂಚನೆಗೆ ಕಡಿವಾಣ ಹಾಕಬಹುದು. ಉದ್ಯಮ ಸ್ನೇಹಿ ವ್ಯವಸ್ಥೆ ಹಾಗೂ ದೇಶದ ಆರ್ಥಿಕ ಅಭಿವೃದ್ಧಿಗೆ ಜಿಎಸ್ಟಿ ಪ್ರಮುಖ ಪಾತ್ರವಹಿಸಲಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳೊಂದಿಗೆ ಸತತ ಸಮಾಲೋಚನೆ ನಡೆಸಿ, ಎದುರಾಗುವ ತೊಡಕುಗಳನ್ನು ನಿವಾರಿಸಿ ಯಶಸ್ವಿಯಾಗಿ ನೂತನ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. ಜಿಎಸ್ಟಿ ಎಫೆಕ್ಟ್: ಜುಲೈ 1ರಿಂದ ಯಾವುದು ದುಬಾರಿ, ಯಾವುದು ಅಗ್ಗ..?



Click it and Unblock the Notifications