Englishहिन्दी മലയാളം தமிழ் తెలుగు

ಜಿಎಸ್ಟಿ ಎಫೆಕ್ಟ್: ಜುಲೈ 1ರಿಂದ ಯಾವುದು ದುಬಾರಿ, ಯಾವುದು ಅಗ್ಗ..?

Written By: Siddu
Subscribe to GoodReturns Kannada

ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಜಾರಿ ಬಂದ ನಂತರ ದಿನನಿತ್ಯ ಬಳಕೆಯ ಸರಕುಗಳು, ಹಣಕಾಸು ಸೇವೆಗಳು, ಚಿನ್ನ, ಹೋಟೆಲ್, ಫ್ಯಾಷನ್, ದೂರಸಂಪರ್ಕ, ವಿದ್ಯುತ್, ಪ್ರಯಾಣ, ರಿಯಲ್ ಎಸ್ಟೇಟ್, ವಾಹನ ಉದ್ಯಮ, ಸಿಮೆಂಟ್ ಹಾಗೂ ಮನರಂಜನಾ ಸೇವೆಗಳ ಮೇಲೆ ಯಾವ ಪರಿಣಾಮ ಬೀರಲಿದೆ? ತೆರಿಗೆ ದರಗಳು ಹೆಚ್ಚಾಗಲಿದೆಯೇ ಅಥವಾ ಕಡಿಮೆಯಾಗಲಿದೆಯೇ, ಯಾವುದಕ್ಕೆ ಎಷ್ಟು ದರ ವಿಧಿಸಲಾಗುತ್ತಿದೆ ಹೀಗೆ ಹಲವು ಗೊಂದಲಗಳಿರಬಹುದು. ಜಿಎಸ್‌ಟಿ(GST) ರೇಟ್ ಫಿಕ್ಸ್: 13 ಪ್ರಯೋಜನ ತಪ್ಪದೆ ಪಡೆಯಿರಿ

ಜಿಎಸ್ಟಿ(GOODS AND SERVES TAX) ಯಾವ ಯಾವ ಸೇವೆಗಳ ಮೇಲೆ ಧನಾತ್ಮಕ ಮತ್ತು ನಕರಾತ್ಮಕ ಪರಿಣಾಮ ಬೀರಲಿದೆ ಎಂಬುದನ್ನು ನೋಡೋಣ...

ಸಿನೆಮಾ

ರೂ. 100 ಮತ್ತು ಅದಕ್ಕಿಂತ ಕಡಿಮೆ ಮೊತ್ತದ ಸಿನೆಮಾ ಟಿಕೆಟ್ ಗಳ ಮೇಲೆ ಶೇ. 18ರಷ್ಟು ತೆರಿಗೆ ದರ ವಿಧಿಸಲಾಗಿದೆ. ರೂ. 100 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಟಿಕೇಟ್ ಗಳ ಮೇಲೆ ಶೇ. 28ರಷ್ಟು ತೆರಿಗೆ ದರ ನಿಗದಿಪಡಿಸಲಾಗಿದೆ. ಜಿಎಸ್ಟಿ ಜಾರಿ: 0%, 5%, 12%, 18% ತೆರಿಗೆ ಪಟ್ಟಿಗೆ ಬರುವ ಪದಾರ್ಥಗಳ ವಿವರ

ಡಿಟಿಎಚ್, ಕೇಬಲ್ ಸೇವೆ

ಡಿಟಿಎಚ್ ಮತ್ತು ಕೇಬಲ್ ಸೇವೆಗಳ ದರ ಕೊಂಚ ಕಡಿಮೆಯಾಗಲಿದ್ದು, ಶೇ. 18ರಷ್ಟು ನಿಗದಿಪಡಿಸಲಾಗಿದೆ. ಪ್ರಸ್ತುತ, ರಾಜ್ಯಗಳಲ್ಲಿ ಮನರಂಜನಾ ತೆರಿಗೆಗಳು ಶೇ.10-30 ರ ವ್ಯಾಪ್ತಿಯಲ್ಲಿವೆ. ಜಿಎಸ್ಟಿ(GST) ಎಂದರೇನು? ಯಾಕೆ ಬೇಕು?

ರೆಸ್ಟೊರೆಂಟ್, ಡಾಬಾ

ಜುಲೈನಿಂದ ಪಂಚಾತಾರಾ ಹೋಟೆಲ್ ಗಳಲ್ಲಿ ಶೇ. 18ರಷ್ಟು ತೆರಿಗೆ ವಿಧಿಸಲಾಗುತ್ತದೆ. ನಾನ್ ಎಸಿ(Non-AC) ರೆಸ್ಟೊರೆಂಟ್ ಗಳಲ್ಲಿ ಶೇ. 12, ಎಸಿ ಇರುವ ಹೋಟೆಲ್ ಗಳಲ್ಲಿ ಶೇ. 18ರಷ್ಟು ತೆರಿಗೆ ವಿಧಿಸಲಾಗುತ್ತದೆ.
ಹೋಟೆಲ್ ಗಳಲ್ಲಿ ಶೇ. 18ರಷ್ಟು ತೆರಿಗೆ ಇದ್ದರೂ, ಬೇರೆ ಬೇರೆ ರೆಸ್ಟೊರೆಂಟ್ ಗಳಲ್ಲಿ ವಿಭಿನ್ನ ಸೇವಾ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ.

ಕ್ರಿಕೆಟ್

ಐಪಿಎಲ್ ನಂತಹ ಕ್ರಿಡಾಕೂಟಗಳು ಶೇ. 28ರಷ್ಟು ತೆರಿಗೆ ದರ ಆಕರ್ಷಿಸುತ್ತಿದ್ದು, ಪ್ರಸ್ತುತ ದರ ಶೇ. 20ರಷ್ಟಿದೆ. ಇದರಿಂದಾಗಿ ಟಿಕೆಟ್ ದರಗಳು ಹೆಚ್ಚಾಗಲಿದೆ. ಸರ್ಕಸ್, ರಂಗಭೂಮಿ, ಜಾನಪದ ನೃತ್ಯ, ಭಾರತೀಯ ಶಾಸ್ತ್ರೀಯ ನೃತ್ಯ ಮತ್ತು ನಾಟಕ ಮನರಂಜನೆಗಳ ಮೇಲೆ ಶೇ. 18ರಷ್ಟು ತೆರಿಗೆ ದರ ವಿಧಿಸಲಾಗಿದೆ. ಇದು ಪ್ರಸ್ತುತ ತೆರಿಗೆ ದರಕ್ಕಿಂತ ಕಡಿಮೆಯಿರುತ್ತದೆ.

ದಿನನಿತ್ಯ ಬಳಕೆ ಸರಕುಗಳು

ಮಸಾಲೆ ಪದಾರ್ಥಗಳು, ಅಕ್ಕಿ, ಗೋದಿ, ಟೀ, ಮೊಸರು, ಮಜ್ಜಿಗೆ, ಅಡುಗೆ ಅನಿಲ(ಎಲ್ಪಿಜಿ), ನೋಟ್‌ಬುಕ್‌, ಇನ್ಸುಲಿನ್, ಅಗರಬತ್ತಿ, ಹಾಲಿನ ಪುಡಿ, ಬ್ರಾಂಡ್ ರಹಿತ ನೈಸರ್ಗಿಕ ಜೇನು ಹೀಗೆ ಹಲವು ದಿನಿತ್ಯದ ವಸ್ತುಗಳ ಬೆಲೆಗಳು ಕಡಿಮೆಯಾಗಲಿವೆ. ಶೇಂಗಾ ಎಣ್ಣೆ, ಪಾಮ್ ಎಣ್ಣೆ, ಸೂರ್ಯಕಾಂತಿ ಎಣ್ಣೆ, ತೆಂಗಿನ ಎಣ್ಣೆ, ಸಾಸಿವೆ ಎಣ್ಣೆ, ಸಕ್ಕರೆ, ಬೆಲ್ಲ, ಸಕ್ಕರೆ ಮಿಠಾಯಿ, ನೂಡಲ್ಸ್, ಹಣ್ಣು-ತರಕಾರಿ, ಉಪ್ಪಿನಕಾಯಿ, ಸಾಸ್ ಹೀಗೆ ಅನೇಕ ವಸ್ತುಗಳು ಜಿಎಸ್ಟಿ ಕಡಿಮೆ ದರದ ಪಟ್ಟಿಯಲ್ಲಿವೆ. ಇನ್‌ಸ್ಟಂಟ್‌ ಫುಡ್‌ ಮಿಕ್ಸಸ್, ಮಿನಿರಲ್ ವಾಟರ್, ಐಸ್, ಸಿಮೆಂಟ್, ಕಲ್ಲಿದ್ದಲು, ಪಡಿತರ ಪದಾರ್ಥಗಳಾದ ಸೀಮೆಎಣ್ಣೆ, ಟೂಥ್ ಪೇಸ್ಟ್, ಕೇಶ ತೈಲ, ಎಕ್ಸ್‌ರೇ ಫಿಲ್ಮ್ಸ್‌, ಹತ್ತಿ ಬಟ್ಟೆ ಅಗ್ಗವಾಗಲಿವೆ. ಜತೆಗೆ ರೂ. 500ವರೆಗಿನ ಪಾದರಕ್ಷೆ ಮತ್ತು ಹೆಲ್ಮೇಟ್ ಕೂಡ ಅಗ್ಗವಾಗಲಿವೆ. ದಿನನಿತ್ಯ ಬಳಕೆಯ ಸರಕುಗಳು ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯಡಿ ಬಹುತೇಕ ಅಗ್ಗವಾಗಲಿವೆ.

ಹಣಕಾಸು ಸೇವೆ ದುಬಾರಿ

ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಜಾರಿಗೆ ಬರುತ್ತಿದ್ದಂತೆ ಹಣಕಾಸು ಸೇವೆಗಳು ದುಬಾರಿಯಾಗಲಿವೆ. ಇದರಲ್ಲಿ ಮುಖ್ಯವಾಗಿ ಬ್ಯಾಂಕಿಂಗ್‌, ದೂರಸಂಪರ್ಕ ಮತ್ತು ವಿಮಾ ಸೇವೆಗಳು ಒಳಗೊಂಡಿವೆ. ಹಣಕಾಸು, ಕ್ರೆಡಿಟ್‌ ಕಾರ್ಡ್‌, ವಿಮೆ ಮತ್ತು ದೂರಸಂಪರ್ಕ ಸೇವೆಗಳ ಮೇಲೆ ಶೇ. 18ರಷ್ಟು ತೆರಿಗೆ ವಿಧಿಸಲಾಗಿದೆ. ಪ್ರಸ್ತುತ ಹಣಕಾಸು ಸೇವೆಗಳ ಮೇಲೆ ಶೇ. 15ರಷ್ಟು ಸೇವಾ ತೆರಿಗೆ ಇದೆ. ಈಗಾಗಲೇ ತೆರಿಗೆ ಹೆಚ್ಚಳದ ಬಗ್ಗೆ ಸಂಬಂಧಪಟ್ಟ ಹಣಕಾಸು ಸೇವಾ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಸಂದೇಶಗಳ ಮೂಲಕ ಮಾಹಿತಿಗಳನ್ನು ರವಾನಿಸುತ್ತಿವೆ. ನೀಡುತ್ತಿವೆ.

ಫ್ಯಾಷನ್

ಬಟ್ಟೆಗಳೆಂದರೆ ಎಲ್ಲರಿಗೂ ಇಷ್ಟ. ಹಾಗಂತ ಹೆಚ್ಚೆಚ್ಚು ಬಟ್ಟೆ ಖರೀದಿಸಿದರೆ ಹೆಚ್ಚು ತೆರಿಗೆ ಗ್ಯಾರಂಟಿ. ಪ್ಯಾಷನ್ ಕ್ಷೇತ್ರ ಸಿಹಿಕಹಿಗಳ ಅನುಭವ ನೀಡಲಿದೆ. ರೂ. 1000 ಕ್ಕಿಂತ ಕಡಿಮೆ ಬೆಲೆಯ ಬಟ್ಟೆಗಳ ಮೇಲೆ ಶೇ. 5ರಷ್ಟು ಮತ್ತು ರೂ. 1000ಕ್ಕಿಂತ ಹೆಚ್ಚಿನ ಬೆಲೆಯ ಜವಳಿ ಉತ್ಪನ್ನಗಳ ಮೇಲೆ ಶೇ. 12ರಷ್ಟು ತೆರಿಗೆ ನಿಗದಿ ಪಡಿಸಲಾಗಿದೆ.

ಚಿನ್ನ ತುಟ್ಟಿ

ಜಿಎಸ್ಟಿ(GOODS AND SERVICES TAX) ಮಂಡಳಿ ಚಿನ್ನದ ಮೇಲಿನ ದರಗಳನ್ನು ಪರಿಷ್ಕರಿಸಿದ್ದು, ಜಿಎಸ್ಟಿಯಲ್ಲಿ ಶೇ. 3ರಷ್ಟು ತೆರಿಗೆ ದರ ನಿಗದಿ ಪಡಿಸಿದೆ. ಆದರೆ ಪ್ರಸ್ತುತ ಚಿನ್ನದ ಮೇಲೆ ಶೇ. 2ರಷ್ಟು ತೆರಿಗೆ ಇದೆ. ಶೇ. 3 ರಷ್ಟು ತೆರಿಗೆ ದರ ನಿಗದಿ ಪಡಿಸಿರುವ ಹಿನ್ನೆಲೆಯಲ್ಲಿ ಬೆಲೆಯಲ್ಲಿ ಏರಿಕೆಯಾಗುವುದು ಸಹಜ. ಇದು ಪ್ರತಿ ಗ್ರಾಂಗೆ ಅಂದಾಜು 30-70 ರೂಪಾಯಿವರೆಗೂ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಚಿನ್ನಾಭರಣ ಖರೀದಿ ಮಂದಗತಿಯಲ್ಲಿ ಸಾಗಲಿದೆ ಎನ್ನಲಾಗಿದೆ. (Read more: GST latest news)

ವಿದ್ಯುತ್ ದರ ಯಥಾಸ್ಥಿತಿ

ವಿದ್ಯುತ್ ದರದ ಮೇಲೆ ಜಿಎಸ್ಟಿ ಯಾವುದೇ ಪರಿಣಾಮ ಬೀರುವುದಿಲ್ಲ. ಪ್ರತಿ ಯೂನಿಟ್ ಮೇಲೆ ಒಂದೆರಡು ಪೈಸೆಯಷ್ಟು ವ್ಯತ್ಯಾಸ ಆಗಬಹುದು ಎಂದು ಇಂಧನ ಕ್ಷೇತ್ರದ ಪ್ರತಿನಿಧಿಗಳ ಸಭೆಯಲ್ಲಿ ಹೇಳಿದರು. ಸರಕು ಮತ್ತು ಸೇವಾ ತೆರಿಗೆ ಬಗ್ಗೆ ಯಾರೂ ಕೂಡ ಆತಂಕ ವ್ಯಕ್ತಪಡಿಸಿಲ್ಲ. ಅಲ್ಲದೇ ಮುಂದೂಡಬೇಕೆಂದು ಯಾರೂ ಒತ್ತಾಯ ಮಾಡಿಲ್ಲ ಎಂದು ಕೇಂದ್ರ ಇಂಧನ ಸಚಿವ ಪಿಯುಷ್ ಗೋಯಲ್ ಹೇಳಿದ್ದಾರೆ. ಜಿಎಸ್‌ಟಿ ಜಾರಿ: ಯಾವುದು ದುಬಾರಿ, ಯಾವುದು ಅಗ್ಗ?

ವಾಹನ ಉದ್ಯಮ

ಜಿಎಸ್ಟಿ ಹೊಸ ನಿಯಮ ವಾಹನ ಉದ್ಯಮದಾರರಿಗೆ, ಗ್ರಾಹಕರಿಗೆ ಸಿಹಿಕಹಿಗಳೆರಡರ ಅನುಭವ ನೀಡಲಿದೆ ಎನ್ನುವುದು ತಜ್ಞರ ಅಭಿಮತ.
ಜುಲೈ 1ರಿಂದ ಜಿಎಸ್ಟಿ ಜಾರಿ ನಂತರ ಐಷಾರಾಮಿ ಕಾರುಗಳು, ಎಸ್‌ಯುವಿಗಳ ಬೆಲೆಗಳು ಇಳಿಕೆ ಕಂಡರೆ, ಸಣ್ಣ ಪ್ರಯಾಣಿಕ ವಾಹನಗಳ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಲಿದೆ. ಹೈಬ್ರಿಡ್‌ ಕಾರುಗಳು ಬೆಲೆ ಕೊಂಚ ಹೆಚ್ಚಾಗಲಿದೆ.

ರಿಯಲ್‌ ಎಸ್ಟೇಟ್‌ ಉದ್ಯಮ

ನೂತನ ಜಿಎಸ್ಟಿ ನಿಯಮಗಳಡಿಯಲ್ಲಿ ಲಭ್ಯವಿರುವ ಇನ್‌ಪುಟ್‌ ತೆರಿಗೆ ಕ್ರೆಡಿಟ್‌ನಿಂದಾಗಿ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಪ್ರಯೋಜನವಾಗುವ ಸಾಧ್ಯತೆ ಇದೆ. ಪ್ರಸ್ತುತ ಶೇ. 11-18ರವರೆಗೆ ತೆರಿಗೆ ಇದ್ದು, ತೆರಿಗೆ ಪ್ರಮಾಣ ಗುತ್ತಿಗೆ ಸ್ವರೂಪ ಮತ್ತು ಕಾಮಗಾರಿಯಲ್ಲಿ ಬಳಸುವ ಸರಕುಗಳ ಮೇಲಿನ ಸೇವಾ ತೆರಿಗೆಗಳ ಮೇಲೆ ಅವಲಂಬಿತವಾಗಿರುತ್ತದೆ. ಜಿಎಸ್ಟಿ ಅಡಿಯಲ್ಲಿ ಇಡೀ ಗುತ್ತಿಗೆಗೆ ಶೇ. 18ರಷ್ಟು ತೆರಿಗೆ ವಿಧಿಸಲಾಗುತ್ತದೆ.
ಪ್ರಸ್ತುತ, ಬಿಲ್ಡರ್ ಗಳು ಪಾವತಿಸುತ್ತಿರುವ ತೆರಿಗೆಗಳು ಹೀಗಿವೆ:
- ಕಚ್ಚಾ ಸಾಮಗ್ರಿ ಮತ್ತು ಅಬಕಾರಿ: 12.5%
- ನಿರ್ಮಾಣ ವಸ್ತುಗಳ ಮೇಲೆ ವ್ಯಾಟ್: 12.5-14.5%
- ನಿರ್ಮಾಣದ ಮೇಲಿನ ಸೇವಾ ತೆರಿಗೆ: 4.5%
- ಕಾಂಪೊಜಿಷನ್ ಯೋಜನೆಯ ಅಡಿಯಲ್ಲಿ ವ್ಯಾಟ್: 1-2%

ಸಿಮೆಂಟ್ ಉದ್ಯಮ

ಜಿಎಸ್ಟಿ ಜಾರಿ ಸಿಮೆಂಟ್ ತಯಾರಿಕಾ ಉದ್ಯಮ ವಲಯಕ್ಕೆ ಹಾಗೂ ಗ್ರಾಹಕರಿಗೆ ಸ್ವಲ್ಪ ಪ್ರಮಾಣದಲ್ಲಿ ಲಾಭದಾಯಕ ಎನಿಸಲಿದೆ.
ಪ್ರಸ್ತುತ ಸಿಮೆಂಟ್ ಮೇಲೆ ಶೇ. 29-31ರವರೆಗೆ ತೆರಿಗೆ ವಿಧಿಸಲ್ಪಡುತ್ತಿದ್ದು, ಜುಲೈ 1ರಿಂದ ಶೇ. 28ಕ್ಕೆ ಇಳಿಕೆ ಆಗಲಿದೆ.

ದೂರಸಂಪರ್ಕ ಸೇವೆ

ಜಿಎಸ್ಟಿ ಜಾರಿ ನಂತರ ದೂರಸಂಪರ್ಕ ಸೇವೆಗಳು ದುಬಾರಿಯಾಗಲಿದೆ. ಪ್ರಸ್ತುತ ಮೊಬೈಲ್‌, ಇಂಟರ್ನೆಟ್ ಸೇವೆಗಳ ಮೇಲೆ ಶೇ. 15ರಷ್ಟು ತೆರಿಗೆ ಇದ್ದು, ಶೇ. 18ಕ್ಕೆ ಹೆಚ್ಚಾಗಲಿದೆ.

ರೈಲು ದರಗಳಲ್ಲಿ ಏರಿಕೆ

ರೈಲು ಪ್ರಯಾಣಿಕರು ಎಸಿ ಮತ್ತು ಪ್ರಥಮ ದರ್ಜೆ ಪ್ರಯಾಣಗಳ ಮೇಲೆ ಸಲ್ಪ ಹೆಚ್ಚು ಮೊತ್ತ ಪಾವತಿಸಬೇಕಾಗುತ್ತದೆ. ಜಿಎಸ್ಟಿ ಅನುಷ್ಠಾನದ ನಂತರ ಟಿಕೆಟ್ ಶುಲ್ಕದ ಮೇಲಿನ ಸೇವಾ ತೆರಿಗೆ ಶೇ. 4.5 ರಿಂದ ಶೇ. 5ಕ್ಕೆ ಏರಿಕೆಯಾಗಲಿದೆ. ಎಸಿ ಮತ್ತು ಪ್ರಥಮ ದರ್ಜೆಯ ಪ್ರಯಾಣ ದರಗಳಲ್ಲಿ ಮಾತ್ರ ಸೇವಾ ತೆರಿಗೆಯನ್ನು ವಿಧಿಸಲಾಗುತ್ತದೆ. ಹಾಗಾಗಿ ಟಿಕೆಟ್ ದರ ರೂ. 2,000 ಆಗಿದ್ದರೆ, ಮುಂದಿನ ತಿಂಗಳಲ್ಲಿ ಪ್ರಯಾಣಿಕರು ರೂ. 2,010ರಷ್ಟು ಪಾವತಿಸಬೇಕಾಗುತ್ತದೆ.

English summary

GST Effect: After July 1, What's expensive and what's cheaper?

After the Goods and Services Tax (GST) comes in to effect on July 1, what will happen to your daily products, financial service and entertainment bill?
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns