ಮೈಕ್ರೊಸಾಫ್ಟ್ ಕಂಪನಿ ಪುನರ್ ರಚನೆ ಯೋಜನೆಯಲ್ಲಿ ತೊಡಗಿದ್ದು, ಈ ಹಿಂದೆಯೇ ವರದಿ ಮಾಡಿರುವಂತೆ ಉದ್ಯೋಗಿಗಳನ್ನು ವಜಾ ಮಾಡಲಿದೆ. ಮಾರಾಟ ವಿಭಾಗದ ಸುಮಾರು 3000 ದಿಂದ 5000 ಉದ್ಯೋಗಿಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ.
News
oi-Siddu
By Siddu
ಮೈಕ್ರೊಸಾಫ್ಟ್ ಕಂಪನಿ ಪುನರ್ ರಚನೆ ಯೋಜನೆಯಲ್ಲಿ ತೊಡಗಿದ್ದು, ಈ ಹಿಂದೆಯೇ ವರದಿ ಮಾಡಿರುವಂತೆ ಉದ್ಯೋಗಿಗಳನ್ನು ವಜಾ ಮಾಡಲಿದೆ.
ಮೈಕ್ರೊಸಾಫ್ಟ್ ಸಂಸ್ಥೆ ತನ್ನ ಗ್ರಾಹಕರಿಗೆ ಮತ್ತು ಪಾಲುದಾರರಿಗೆ ಉತ್ತಮ ಸೇವೆ ಸಲ್ಲಿಸಲು ಬದಲಾವಣೆಗಳನ್ನು ಜಾರಿಗೆ ತರಲು ಮುಂದಾಗಿದೆ ಎಂದು ಮೈಕ್ರೋಸಾಫ್ಟ್ ವಕ್ತಾರರು ಹೇಳಿದ್ದಾರೆ. ಎಲ್ಲಾ ಕಂಪನಿಗಳಂತೆ, ಮೈಕ್ರೋಸಾಫ್ಟ್ ಕೂಡ ನಿಯಮಿತವಾಗಿ ವ್ಯವಹಾರವನ್ನು ಮೌಲ್ಯಮಾಪನ ಮಾಡುತ್ತದೆ. ಇದು ಸಮಯಕ್ಕನುಗುಣವಾಗಿ ಕೆಲವೊಂದು ಸ್ಥಳಗಳಲ್ಲಿ ಹೆಚ್ಚು ಬಂಡವಾಳ ಹೂಡಿಕೆಗೆ ಕಾರಣವಾಗಬಹುದು. ಜತೆಗೆ ಉದ್ಯೋಗಿಗಳ ಮರುನಿಯೋಜನೆಗೆ ಕಾರಣವಾಗಬಹುದು.