ಆಧಾರ್ ದಾಖಲು ಮತ್ತು ರವಾನೆ ಪ್ರಕ್ರಿಯೆಗಾಗಿ 9000 ಕೋಟಿ ವೆಚ್ಚ
ಕಳೆದ 8 ವರ್ಷಗಳಲ್ಲಿ ಸುಮಾರು ರೂ. 9000 ಕೋಟಿಗೂ ಹೆಚ್ಚಿನ ಮೊತ್ತವನ್ನು ಆಧಾರ್ ಸಂಖ್ಯೆಗಳ ದಾಖಲು ಮತ್ತು ರವಾನೆ ಪ್ರಕ್ರಿಯೆಗಾಗಿ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಖರ್ಚು ಮಾಡಿದೆ ಎಂದು ಸಂಸತ್ತು ತಿಳಿಸಿದೆ.
ಕಳೆದ 8 ವರ್ಷಗಳಲ್ಲಿ ಸುಮಾರು ರೂ. 9000 ಕೋಟಿಗೂ ಹೆಚ್ಚಿನ ಮೊತ್ತವನ್ನು ಆಧಾರ್ ಸಂಖ್ಯೆಗಳ ದಾಖಲು ಮತ್ತು ರವಾನೆ ಪ್ರಕ್ರಿಯೆಗಾಗಿ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಖರ್ಚು ಮಾಡಿದೆ ಎಂದು ಸಂಸತ್ತು ತಿಳಿಸಿದೆ.
ಯುಐಡಿಎಐ 2009-10 ರಿಂದ 2017-18(ಜುಲೈ 18, 2017 ರವರೆಗೆ) ಒಟ್ಟು 9,055.73 ಕೋಟಿ ಖರ್ಚು ಮಾಡಿದೆ ಎಂದು ಐಟಿ ಪಿ ಪಿ ಚೌಧರಿ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಇದರಲ್ಲಿ ರೂ. 3,819.97 ಕೋಟಿ ದಾಖಲು ಪ್ರಕ್ರಿಯೆ ಹಾಗೂ ರೂ. 1,171.45 ಕೋಟಿ ಲಾಜಿಸ್ಟಿಕ್ಸ್ (ಆಧಾರ್ ಪತ್ರಗಳ ಮುದ್ರಣ ಮತ್ತು ರವಾನೆ)ಗಾಗಿ ವ್ಯಯಿಸಲಾಗಿದೆ.