ಐಡಿಯ ಸೆಲ್ಯುಲರ್ 4G ಸ್ಮಾರ್ಟ್ ಫೋನ್ ಬಿಡುಗಡೆ ಮಾಡುವುದಾಗಿ ಘೋಷಿಸಿ, ಆ ಮೂಲಕ ಜಿಯೋಫೋನ್ ಗೆ ತಿರುಗೇಟು ನೀಡಿದೆ.
ರಿಲಯನ್ಸ್ ಜಿಯೋ ಫೋನ್ ಬಿಡುಗಡೆ ಮಾಡುವುದಾಗಿ ಘೋಷಿಸಿರುವುದು ಟೆಲಿಕಾಂ ರಂಗದಲ್ಲಿ ಹೊಸ ಸಂಚಲನವನ್ನು ಉಂಟು ಮಾಡಿದ್ದು, ಬೇರೆ ಕಂಪನಿಗಳು ಕೂಡ ಪರ್ಯಾಯ ಚಿಂತನೆ ಮಾಡುತ್ತಿವೆ.
ಐಡಿಯ ಸೆಲ್ಯುಲರ್ 4G ಸ್ಮಾರ್ಟ್ ಫೋನ್ ಬಿಡುಗಡೆ ಮಾಡುವುದಾಗಿ ಘೋಷಿಸಿ, ಆ ಮೂಲಕ ಜಿಯೋಫೋನ್ ಗೆ ತಿರುಗೇಟು ನೀಡಿದೆ.
ಐಡಿಯ ಫೋನ್ ಬೆಲೆ
ಐಡಿಯ ಮತ್ತು ಜಿಯೋ ಫೋನ್ ಗಳ ನಡುವಿನ ಒಂದು ಅಂತರವೆಂದರೆ ಬೆಲೆ. ಜಿಯೋಫೋನ್ ಬೆಲೆ ರೂ. 1500 ಆದರೆ ಐಡಿಯ 4G ಸ್ಮಾರ್ಟ್ ಫೋನ್ ಬೆಲೆ ರೂ. 2500 ಆಗಿದೆ.
ಜಿಯೋಫೋನ್ ರಿಫಂಡ್ ಸೌಲಭ್ಯ!
ಜಿಯೋ 4G ಸ್ಮಾರ್ಟ್ಫೋನ್ ಖರೀದಿಸುವಾಗ ರೂ. 1500 ಪಾವತಿಸಬೇಕು. ಫೋನ್ ಹಿಂದಿರುಗಿಸಿದ 36 ತಿಂಗಳ ನಂತರ ಪಾವತಿಸಲ್ಟಟ್ಟ ರೂ. 1500 ಮೊತ್ತ ಮರುಪಾವತಿಸಲಾಗುವುದು ಎಂದು ಅಂಬಾನಿ ಹೇಳಿದ್ದಾರೆ. ಎದುರಾಗಬಹುದಾದ ದುರೂಪಯೋಗಗಳನ್ನು ತಡೆಯಲು ಇದು ಸಹಕಾರಿಯಾಗಲಿದೆ. ಜಿಯೋ ಫೋನ್ 0 ಬೆಲೆಯಲ್ಲಿ ಸಿಗಲಿದೆ.! ಜಿಯೋ ಪ್ರತಿ ತಿಂಗಳಿಗೆ ರೂ. 153 ನಿಗದಿಪಡಿಸಿದ್ದು, ಡೇಟಾ ಸೌಲಭ್ಯ ಒದಗಿಸಲಿದೆ. ಜಿಯೋ ಫೋನ್ ನಲ್ಲಿ ಧ್ವನಿ ಕರೆಗಳು ಉಚಿತವಾಗಿ ಇರಲಿವೆ ಎಂದಿದ್ದಾರೆ. ಜಿಯೋ 4G ಸ್ಮಾರ್ಟ್ಫೋನ್ ಲಾಂಚ್..! ಮುಖೇಶ್ ಅಂಬಾನಿ ಘೋಷಿಸಿರುವ ಉಚಿತ ಆಫರ್ ಗಳೇನು..?
ಐಡಿಯ-ವೊಡಾಫೋನ್ ಸಹಭಾಗಿತ್ವದಲ್ಲಿ ಫೋನ್
ದೇಶದ ಪ್ರಮುಖ ಟೆಲಿಕಾಂ ಕಂಪನಿ ಐಡಿಯ ವೊಡಾಫೋನ್ ನೊಂದಿಗೆ ವಿಲೀನಗೊಂಡ ನಂತರ ಈ ಬೃಹತ್ ಕಾರ್ಯಕ್ಕೆ ಕೈಹಾಕಿದೆ. ಈಗಾಗಲೇ 4G ಸ್ಮಾರ್ಟ್ ಫೋನ್ ತಯಾರಿಕಾ ಕಾರ್ಯಪ್ರಗತಿಯಲ್ಲಿದ್ದು, ಶೀಘ್ರದಲ್ಲಿಯೇ ಗ್ರಾಹಕರ ಕೈ ಸೇರಲಿದೆ ಎಂದು ಕಂಪನಿ ಹೇಳಿದೆ. ಏರ್ಟೆಲ್ ಭರ್ಜರಿ ಆಫರ್..! ಪ್ರತಿದಿನ 3GB ಡೇಟಾ, ಅನ್ ಲಿಮಿಟೆಡ್ ಕರೆ
ಹೊಸ ಕ್ರಾಂತಿ
ಭಾರತದಲ್ಲಿ ಜಿಯೋ 4G ಸ್ಮಾರ್ಟ್ ಫೋನ್ ಹಾಗೂ ಐಡಿಯ ಬಿಡುಗಡೆಗೊಳಿಸಲಿರುವ 4G ಸ್ಮಾರ್ಟ್ ಫೋನ್ ಹೊಸ ಕ್ರಾಂತಿಗೆ ಕಾರಣವಾಗಲಿದ್ದು, ಟೆಲಿಕಾಂ ರಂಗದಲ್ಲಿ ವೇಗವಾಗಿ ಬೆಳೆಯಲಿದೆ. ಈಗಾಗಲೇ ಮೊಬೈಲ್ ಡೇಟಾ ಬಳಕೆಯಲ್ಲಿ ಭಾರತವು ಚೀನಾ ಮತ್ತು ಅಮೆರಿಕಾವನ್ನು ಹಿಂದಿಕ್ಕಿದೆ. ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಸಿಗಲಿರುವುದರಿಂದ ಡಿಜಿಟಲೀಕರಣ ಕ್ರಾಂತಿಗೆ ವೇಗ ಸಿಗಲಿದೆ.


Click it and Unblock the Notifications