ಗ್ರಾಹಕರು ಈ ಹೊಸ ಯೋಜನೆಯಡಿ ತಮ್ಮ ತತ್ಕಾಲ್ ಟಿಕೇಟ್ ಬುಕಿಂಗ್ ಮಾಡಬಹುದಾಗಿದ್ದು, ನಂತರದಲ್ಲಿ ಪಾವತಿಸುವ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದು ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಮ್ ಕಾರ್ಪ್ (IRCTC) ಹೇಳಿದೆ.
ರೇಲ್ವೆ ಪ್ರಯಾಣಿಕರಿಗೆ ಇದೊಂದು ಸಂತಸದ ಸುದ್ದಿ!
ಭಾರತೀಯ ರೇಲ್ವೆ ಇಲಾಖೆ ಹೊಸ ಸೌಲಭ್ಯಗಳನ್ನೊಳಗೊಂಡ ಟಿಕೇಟ್ ಬುಕಿಂಗ್ ವ್ಯವಸ್ಥೆಯನ್ನು ಬಿಡುಗಡೆ ಮಾಡುತ್ತಿದೆ.
ಗ್ರಾಹಕರು ಈ ಹೊಸ ಯೋಜನೆಯಡಿ ತಮ್ಮ ತತ್ಕಾಲ್ ಟಿಕೇಟ್ ಬುಕಿಂಗ್ ಮಾಡಬಹುದಾಗಿದ್ದು, ನಂತರದಲ್ಲಿ ಪಾವತಿಸುವ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದು ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಮ್ ಕಾರ್ಪ್ (IRCTC) ಹೇಳಿದೆ.
ಇದು ತತ್ ಕ್ಷಣದಲ್ಲಿ ಹಣ ಪಾವತಿಸುವ ಸಮಸ್ಯೆಯನ್ನು ತೊಡೆದು ಹಾಕಲಿದೆ. ಈಗ ಖರೀದಿಸಿ, ನಂತರ ಪಾವತಿಸಿ( 'buy now, pay later') ಈ ಸೌಲಭ್ಯದ ಮೂಲ ಉದ್ದೇಶವಾಗಿದೆ.
ಇಪೇಲೇಟರ್(ePayLater) ವ್ಯವಸ್ಥೆ
ಮುಂಬೈ ಮೂಲದ ಪಿಂಟೆಕ್ ಉದ್ಯಮ ಐಆರ್ಸಿಟಿಸಿ(IRCTC)ನೊಂದಿಗೆ ಕೈಜೋಡಿಸಿದ್ದು, ಈ ಹೊಸ ವೈಶಿಷ್ಟ್ಯತೆಯ ಮೂಲಕ ಭಾರತೀಯ ರೇಲ್ವೆ ಇಲಾಖೆ ಅತ್ಯುತ್ತಮ ಟಿಕೇಟ್ ಬುಕಿಂಗ್ ಸೇವೆಗಳನ್ನು ಒದಗಿಸಲಿದೆ. ಡಿಜಿಟಲ್ ಟಿಕೇಟ್ ಎಸ್ಎಂಎಸ್ ಅಥವಾ ಇ-ಮೇಲ್ ಮೂಲಕ ಕಳುಹಿಸಲ್ಪಡುತ್ತದೆ. ಅಲ್ಲದೆ ಟಿಕೇಟ್ ನ ಹಾರ್ಡ್ ಕಾಪಿಯನ್ನು ನಿಮ್ಮ ಮನೆ ವಿಳಾಸಕ್ಕೆ ಕಳುಹಿಸಲಾಗುತ್ತದೆ.
15 ದಿನಗಳ ಕಾಲಾವಕಾಶ
ರೇಲ್ವೆ ಟಿಕೇಟ್ ಗಳನ್ನು ವೆಬ್ಸೈಟ್ ಮೂಲಕ ಬುಕಿಂಗ್ ಮಾಡುವವರಿಗೆ ಇದೊಂದು ವರದಾನವಾಗಲಿದೆ. ವಾಲೆಟ್ ಮೂಲಕ ಟಿಕೇಟ್ ಖರೀದಿಸಿದ ನಂತರ ಹಣ ಪಾವತಿಸಲು 15 ದಿನಗಳ ಕಾಲಾವಕಾಶ ಸಿಗಲಿದೆ.
ಸೇವಾಶುಲ್ಕ ಎಷ್ಟು?
ಇ-ಪೇಲೇಟರ್ ಸೌಲಭ್ಯವನ್ನು ಬಳಸುವ ವ್ಯವಹಾರದ ಮೊತ್ತ ಮೇಲೆ ಶೇ. 3.5ರಷ್ಟು ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ. ಟಿಕೇಟ್ ಬುಕಿಂಗ್ ವೇಳೆ ಐಆರ್ಸಿಟಿಸಿ ವೆಬ್ಸೈಟ್ ಮೇಲೆ ಪೇಮೆಂಟ್ ವಿಧಾನ ತೆರೆದುಕೊಳ್ಳುತ್ತದೆ. ಪೇಟಿಎಂ ಬಳಸಿ ರೇಲ್ವೆ ಟಿಕೆಟ್ ಬುಕ್ ಮಾಡುವುದು ಹೇಗೆ?
ಸೌಲಭ್ಯ ಪಡೆಯಲು ಏನು ಮಾಡಬೇಕು?
ಗ್ರಾಹಕರು ಈ ಸೌಲಭ್ಯ ಪಡೆಯಬೇಕಾದರೆ ಅಥವಾ ಟಿಕೇಟ್ ಬುಕಿಂಗ್ ಮಾಡಬೇಕಾದರೆ ಹೆಸರು, ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಪ್ಯಾನ್ ಅಥವಾ ಆಧಾರ್ ಇತ್ಯಾದಿ ವಿವರಗಳನ್ನು ಒದಗಿಸಬೇಕು. ಈ ಯೋಜನೆ ಬಳಸಲು ಗ್ರಾಹಕರು ಅನುಮೋದನೆ ಪಡೆದ ನಂತರ OTP ಕಳುಹಿಸಲಾಗುತ್ತದೆ. ತದನಂತರ ಸೇವೆಗಳನ್ನು ಪಡೆಯಬಹುದು.


Click it and Unblock the Notifications