For Quick Alerts
ALLOW NOTIFICATIONS  
For Daily Alerts

ಪೇಟಿಎಂ ಬಳಸಿ ರೇಲ್ವೆ ಟಿಕೆಟ್ ಬುಕ್ ಮಾಡುವುದು ಹೇಗೆ?

ಪೇಟಿಎಂ (Paytm) ದೇಶದ ಇ-ಕಾಮರ್ಸ್ ಕ್ಷೇತ್ರದ ಅತಿದೊಡ್ಡ ವೇದಿಕೆ ಆಗಿದ್ದು, ಡಿಜಿಟಲ್ ವಾಲೆಟ್ ಸೌಲಭ್ಯ ಒದಗಿಸುತ್ತಿದ್ದು, ಅಂತರ್ಜಾಲ ಸಂಪರ್ಕ ಇಲ್ಲದೆಯೂ ವ್ಯವಹಾರ ನಡೆಸುವ ಸೌಲಭ್ಯ ಕಲ್ಪಿಸಿದೆ.

By Siddu
|

ಪೇಟಿಎಂ (Paytm) ದೇಶದ ಇ-ಕಾಮರ್ಸ್ ಕ್ಷೇತ್ರದ ಅತಿದೊಡ್ಡ ವೇದಿಕೆ ಆಗಿದ್ದು, ಡಿಜಿಟಲ್ ವಾಲೆಟ್ ಸೌಲಭ್ಯ ಒದಗಿಸುತ್ತಿದ್ದು, ಅಂತರ್ಜಾಲ ಸಂಪರ್ಕ ಇಲ್ಲದೆಯೂ ವ್ಯವಹಾರ ನಡೆಸುವ ಸೌಲಭ್ಯ ಕಲ್ಪಿಸಿದೆ. ಪೇಟಿಎಂ ವಾಲೆಟ್ ಮೂಲಕ ಬಿಲ್ ಪಾವತಿ ಹೇಗೆ?

 

ನೋಟುಗಳ ನಿಷೇಧದ ನಂತರ ಕೇಂದ್ರ ಸರ್ಕಾರ ನಗದು ರಹಿತ ವ್ಯವಹಾರಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು, ಪೇಟಿಎಂ ಹೆಚ್ಚೆಚ್ಚು ಗ್ರಾಹಕರನ್ನು ಪಡೆಯುತ್ತಿದೆ. ಬಿಲ್ ಪಾವತಿ, ಹಣ ರವಾನೆ ,ಮೊಬೈಲ್ ರೀಚಾರ್ಜ್, ಡಿಟಿಎಚ್ ರೀಚಾರ್ಜ್, ಗ್ಯಾಸ್ ಬಿಲ್ ಪಾವತಿ, ಮೆಟ್ರೋ ಸ್ಮಾರ್ಟ್ ಕಾರ್ಡ್ ರೀಚಾರ್ಜ್, ವಿದ್ಯುತ್ ಬಿಲ್ ಪಾವತಿ ಮತ್ತು ಲ್ಯಾಂಡ್ ಲೈನ್ ಬಿಲ್ ಪಾವತಿ ಸೇವೆಗಳನ್ನು ಒದಗಿಸುತ್ತದೆ. ಬೆಸ್ಟ್ ಮೊಬೈಲ್ ವಾಲೆಟ್ ಆಪ್ ಯಾವವು ಗೊತ್ತೆ?

ಇದೀಗ ಪೇಟಿಎಂ ಆಪ್ ಮತ್ತು ವೆಬ್ಸೈಟ್ ಮೂಲಕ IRCTC ಟಿಕೆಟ್ ಬುಕಿಂಗ್ ಲಭ್ಯವಿದ್ದು, ಪೇಟಿಎಂ ಮೂಲಕ ರೇಲ್ವೆ ಟಿಕೆಟ್ ಬುಕ್ ಮಾಡುವುದು ಹೇಗೆ ನೋಡೋಣ...

1. ಪೇಟಿಎಂ ಮೂಲಕ ರೇಲ್ವೆ ಟಿಕೆಟ್ ಬುಕಿಂಗ್ ಹೇಗೆ?

1. ಪೇಟಿಎಂ ಮೂಲಕ ರೇಲ್ವೆ ಟಿಕೆಟ್ ಬುಕಿಂಗ್ ಹೇಗೆ?

1. ಪೇಟಿಎಂ ಅಪ್ ಲಾಗಿನ್ ಆಗಿ ಅಥವಾ www.paytm.com ಸಂದರ್ಶಿಸಿ.
2. ರೇಲ್ವೆ ಡ್ರಾಪ್ ಡೌನ್ ಲಿಸ್ಟ್ ಆಯ್ಕೆ ಮಾಡಿ.
3. ಪ್ರಯಾಣ ಯಾವ ಸ್ಥಳದಿಂದ ಎಲ್ಲಿಗೆ ಆಯ್ಕೆ ಮಾಡಿ.
4. ನಿರ್ಗಮನದ ದಿನಾಂಕ ಆಯ್ಕೆ ಮಾಡಿ.
5. ಸರ್ಚ್ ಟ್ರೈನ್ಸ್ ಮೇಲೆ ಕ್ಲಿಕ್ ಮಾಡಿ. ರೇಲ್ವೆ ವೇಳಾಪಟ್ಟಿ ಪ್ರಕಾರ ಮಾಹಿತಿ ಪಡೆಯುವಿರಿ. (ನೀವು ಈಗಾಗಲೇ ಲಾಗ್ಡ್ ಇನ್ ಆಗಿದ್ದರೆ ಪೇಟಿಎಂ ಲಾಗಿನ್ ವಿವರಗಳನ್ನು ನಮೂದಿಸಿ.)
6. ಸೀಟುಗಳ ಲಭ್ಯತೆ ಮತ್ತು ಆದ್ಯತೆ ಮೇರೆಗೆ ರೇಲ್ವೆ ಆಯ್ಕೆ ಮಾಡಿ.
7. ಪ್ರಯಾಣದ ದಿನಾಂಕಕ್ಕೆ ಅನುಗುಣವಾಗಿ ಬುಕಿಂಗ್ ಪ್ರಕ್ರಿಯೆ ಮುಂದುವರೆಸಿ.
8. IRCTC ID ನಮೂದಿಸಿ ಮತ್ತು ಪ್ರಕ್ರಿಯೆ ಮುಂದುವರೆಸಿ ಅಥವಾ IRCTC ಖಾತೆ ತೆರೆಯಿರಿ.
9. ಬೋರ್ಡಿಂಗ್ ಪಾಯಿಂಟ್ ಆಯ್ಕೆ ಮಾಡಿ, ಪ್ರಯಾಣಿಕರ ವಿವರ ತುಂಬಿ ಮತ್ತು ಆದ್ಯತೆಗಳನ್ನು ಆಯ್ಕೆ ಮಾಡಿ. (ಅಗತ್ಯವಿದ್ದಲ್ಲಿ)
10. ಪ್ರೋಸೀಡ್ ಟು ಬುಕ್ ಮೇಲೆ ಕ್ಲಿಕ್ ಮಾಡಿ.
11. ವಿವರಗಳನ್ನು ಪರಿಶೀಲಿಸಿ. ಪ್ರೊಮೊ ಕೋಡ್ ಇದ್ದರೆ ನಮೂದಿಸಿ ಮತ್ತು ಪಾವತಿ ಪ್ರಕ್ರಿಯೆ ಮುಂದುವರೆಸಿ.

2. ಪೇಟಿಎಂ ಮೂಲಕ IRCTC ಸೈಟ್ ನಲ್ಲಿ ಪಾವತಿಸಿ

2. ಪೇಟಿಎಂ ಮೂಲಕ IRCTC ಸೈಟ್ ನಲ್ಲಿ ಪಾವತಿಸಿ

ಒಂದು ಬಾರಿ ನೀವು IRCTC ವೆಬ್ಸೈಟ್ ನಲ್ಲಿ ಲಾಗ್ಡ್ ಇನ್ ಆದ ನಂತರ ಪೇಟಿಎಂ ವಾಲೆಟ್ ಬಳಸಿ ಹಣ ಪಾವತಿಸಬಹುದು. ರೇಲ್ವೆ ಟಿಕೆಟ್ ಖರೀದಿ ನಂತರ ಕ್ಯಾಶ್ ಕಾರ್ಡ್/ವಾಲೆಟ್ ಆಪ್ಸನ್ ನೋಡಬಹುದು.

3. ಪೇಟಿಎಂ ಮೂಲಕ ಎಷ್ಟು ಟಿಕೆಟ್ ಖರೀದಿಸಬಹುದು?
 

3. ಪೇಟಿಎಂ ಮೂಲಕ ಎಷ್ಟು ಟಿಕೆಟ್ ಖರೀದಿಸಬಹುದು?

ಒಂದು ಬಾರಿ ಟಿಕೆಟ್ ಬುಕಿಂಗ್ ಮಾಡುವಾಗ ಹೆಚ್ಚೆಂದರೆ ಆರು ಜನರಿಗೆ ಟಿಕೆಟ್ ಗಳನ್ನು ಬುಕ್ ಮಾಡಬಹುದು. ತತ್ಕಾಲ್ ಬುಕಿಂಗ್ ಸಂದರ್ಭದಲ್ಲಿ ನಾಲ್ಕು ಟಿಕೆಟ್ ಗಳನ್ನು ಬುಕ್ ಮಾಡಬಹುದು. ಜತೆಗೆ ಟಿಕೆಟ್ ಇಲ್ಲದೆ ಐದು ವರ್ಷದೊಳಗಿನ ಎರಡು ಮಕ್ಕಳು ಪಯಣಿಸಬಹುದು.

4. ಪೇಟಿಎಂ ಮೂಲಕ ಟಿಕೆಟ್ ಕ್ಯಾನ್ಸಲ್ ಮಾಡುವುದು ಹೇಗೆ?

4. ಪೇಟಿಎಂ ಮೂಲಕ ಟಿಕೆಟ್ ಕ್ಯಾನ್ಸಲ್ ಮಾಡುವುದು ಹೇಗೆ?

1. ಪೇಟಿಎಂ ಖಾತೆಗೆ ಪ್ರವೇಶಿಸಿ.
2. ಟಿಕೆಟ್ ಕ್ಯಾನ್ಸಲ್ ಮಾಡಬೇಕಾಗಿರುವವರ ಹೆಸರು ಆಯ್ಕೆ ಮಾಡಿ.
3. ಕ್ಯಾನ್ಸಲ್ ಬಟನ್ ಮೇಲೆ ಕ್ಲಿಕ್ ಮಾಡಿ. ('ಕ್ಯಾನ್ಸಲ್ ಬುಕಿಂಗ್' ಮೇಲೆ ಕ್ಲಿಕ್ ಮಾಡುವುದರಿಂದ ಟಿಕೆಟ್ ನೇರವಾಗಿ ಕ್ಯಾನ್ಸಲ್ ಆಗುತ್ತದೆ.)
4. ಟಿಕೆಟ್ ಕ್ಯಾನ್ಸಲ್ ಮಾಡಿದ ನಂತರ ಮೊತ್ತ ಮೂಲ ಖಾತೆಗೆ ಮರುಪಾವತಿ ಆಗುತ್ತದೆ.

English summary

How To Book Train Tickets Using Paytm

The virtual wallet, Paytm store money online which can be used instead of debit/credit or net banking. After the demonetization of high-value currency notes and the government's push for a cashless economy, Paytm is getting a lot of users.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X