ಬಾಬಾ ರಾಮದೇವ್ ಆಹಾರ, ಔಷಧಿ ಮತ್ತು ಸೌಂದರ್ಯವರ್ಧಕಗಳ ನಂತರ ಇದೀಗ ಬಟ್ಟೆ ಉದ್ಯಮಕ್ಕೆ ಕಾಲಿರಿಸಿದ್ದಾರೆ. ಪತಂಜಲಿ ಹೆಸರಿನ ದೇಶಿಯ ಉತ್ಪನ್ನಗಳ ಮೂಲಕ ಮನೆಮಾತಾಗಿರುವ ರಾಮದೇವ್ ಒಂದೊಂದೆ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿದ್ದಾರೆ.
ಯೋಗ ಗುರು ಬಾಬಾ ರಾಮದೇವ್ ಯಾರಿಗೆ ತಾನೇ ಗೊತ್ತಿಲ್ಲ. ಅವರು ಏನೇ ಮಾಡಿದರೂ ಅದು ಭಾರೀ ಸುದ್ದಿಯಾಗುತ್ತದೆ.
ಇದೀಗ ಬಾಬಾ ರಾಮದೇವ್ ಬ್ರ್ಯಾಂಡೆಡ್ ಬಟ್ಟೆಗಳನ್ನು ಪರಿಚಯಿಸುತ್ತಿದ್ದು, ಶೀಘ್ರದಲ್ಲೇ ನಿಮ್ಮ ಹತ್ತಿರದ ಮಳಿಗೆಗಳಲ್ಲಿ ಸಿಗಲಿವೆ!
ಆಹಾರ, ಔಷಧಿ ಮತ್ತು ಸೌಂದರ್ಯವರ್ಧಕಗಳ ನಂತರ ಇದೀಗ ಬಟ್ಟೆ ಉದ್ಯಮಕ್ಕೆ ಕಾಲಿರಿಸಿದ್ದಾರೆ. ಪತಂಜಲಿ ಹೆಸರಿನ ದೇಶಿಯ ಉತ್ಪನ್ನಗಳ ಮೂಲಕ ಮನೆಮಾತಾಗಿರುವ ರಾಮದೇವ್ ಒಂದೊಂದೆ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿದ್ದಾರೆ.
ಸ್ವದೇಶಿ ವಸ್ತ್ರ
ದೇಶದಲ್ಲಿ ಉಡುಪುಗಳಿಗೆ ಭಾರೀ ಬೇಡಿಕೆ ಇದ್ದು, ಮಾರುಕಟ್ಟೆ ಜಾಲ ತುಂಬಾ ದೊಡ್ಡದು. ಹೀಗಾಗಿ ಪತಂಜಲಿ ಆಯುರ್ವೇದ ಲಿ. ಶೀಘ್ರದಲ್ಲೇ ಸ್ವದೇಶಿ ಹೆಸರಿನ ಬ್ರ್ಯಾಂಡ್ ಮೂಲಕ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ಬಟ್ಟೆಗಳನ್ನು ಪೂರೈಸಲಿದ್ದಾರೆ.
5000 ಕೋಟಿ ಮಾರಾಟ ಗುರಿ
ಪತಂಜಲಿ ಭಾರತದ ಗ್ರಾಹಕ ಮಾರುಕಟ್ಟೆಯ ಮೇಲೆ ದಾಳಿ ಮಾಡಲು ಸರ್ವ ಸಿದ್ದತೆ ನಡೆಸಿದ್ದು, ಸ್ವದೇಶಿ ಉತ್ಪನ್ನಗಳನ್ನು ಒದಗಿಸಲಿದೆ. ಮೊದಲ ವರ್ಷದಲ್ಲಿ ರೂ. 5000 ಕೋಟಿ ಮಾರಾಟದ ಗುರಿಯನ್ನು ಹೊಂದಿದೆ ಎನ್ನಲಾಗಿದೆ.
ವಿಭಿನ್ನ ಉತ್ಪನ್ನಗಳು
ಪತಂಜಲಿ ವಿಭಿನ್ನವಾದ ಉತ್ಪನ್ನಗಳನ್ನು ಹೊಂದಿದ್ದು, ಗ್ರಾಹಕರಿಗೆ ಇಷ್ಟವಾಗುವ ವಿಭಿನ್ನ ವಿನ್ಯಾಸದ ವಸ್ತ್ರಗಳನ್ನು ಪೂರೈಸಲಿದೆ. ಡೆನಿಮ್ಸ್ ಒಳಗೊಂಡಂತೆ ನೇಯ್ದ ಬಟ್ಟೆಗಳು, ನಿಟ್ವೇರ್ (ಹೆಣೆದ ಉಡುಪುಗಳು), ಯಂತ್ರ ತಯಾರಿತ ಉಡುಪು ಸಿಗಲಿವೆ ಎಂದು ಕಂಪನಿ ಹೇಳಿದೆ.
ಟೈ ಅಪ್ ಯೋಜನೆ
ಉತ್ಪನ್ನಗಳ ಮಾರಾಟಕ್ಕಾಗಿ ಪತಂಜಲಿ ಬೃಹತ್ ಯೋಜನೆಯನ್ನು ರೂಪಿಸಿದ್ದು, ಈಗಾಗಲೇ ಬಿಗ್ ಬಜಾರ್ ನೊಂದಿಗೆ ಟೈ ಅಪ್ ಆಗಿದೆ. ದೇಶದಾದ್ಯಂತ 250 ವಿಶೇಷ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಏಪ್ರಿಲ್ 2018ರ ವೇಳೆಗೆ ಲಭ್ಯವಾಗಲಿದೆ.


Click it and Unblock the Notifications