ಆದಾಯ ತೆರಿಗೆ (ITR) ಸಲ್ಲಿಕೆಗೆ ಇಂದು ಕೊನೆ ದಿನ

ಆದಾಯ ತೆರಿಗೆ ರಿಟರ್ನ್ಸ್ ವಿವರ ಸಲ್ಲಿಕೆಗೆ ಅಗಸ್ಟ್ 5 ಕೊನೆ ದಿನ ಆಗಿದ್ದು, ಆದಾಯ ತೆರಿಗೆ ಇಲಾಖೆಗಳು ಮಧ್ಯರಾತ್ರಿವರೆಗೆ ಕಾರ್ಯನಿರ್ವಹಿಸಲಿವೆ.

ಆದಾಯ ತೆರಿಗೆ ರಿಟರ್ನ್ಸ್ ವಿವರ ಸಲ್ಲಿಕೆಗೆ ಅಗಸ್ಟ್ 5 ಕೊನೆ ದಿನ ಆಗಿದ್ದು, ಆದಾಯ ತೆರಿಗೆ ಇಲಾಖೆಗಳು ಮಧ್ಯರಾತ್ರಿವರೆಗೆ ಕಾರ್ಯನಿರ್ವಹಿಸಲಿವೆ.

ಹಣಕಾಸು ವರ್ಷ 2016-17ರ ಐ.ಟಿ ರಿಟರ್ನ್ಸ್ ವಿವರ ಸಲ್ಲಿಕೆಗೆ ಜುಲೈ 31 ರಿಂದ ಅಗಸ್ಟ್ 5 ರವರೆಗೆ ಅವಧಿಯನ್ನು ವಿಸ್ತರಿಸಲಾಗಿತ್ತು.

ಇ-ಫೈಲಿಂಗ್ ಕಡ್ಡಾಯ

ಇ-ಫೈಲಿಂಗ್ ಕಡ್ಡಾಯ

ಈ ಹಿಂದೆ ಜುಲೈ 31 ಆದಾಯ ತೆರಿಗೆ ಸಲ್ಲಿಕೆಗೆ ಕೊನೆ ದಿನವಾಗಿತ್ತು. ತೆರಿಗೆದಾರರು ಕೊನೆ ಘಳಿಗೆಯಲ್ಲಿ ರಿಟರ್ನ್ ಫೈಲಿಂಗ್ ಗಾಗಿ ಇ-ಫೈಲಿಂಗ್ ವೆಬ್ಸೈಟ್ incometaxindiaefiling.gov.in ನಲ್ಲಿ ಮುಗಿಬಿದ್ದಿರುವುದರಿಂದ ತೊಂದರೆ ಉಂಟಾಗಿದ್ದು, ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಸರ್ಕಾರ ತಿಳಿಸಿತ್ತು. ರೂ. 5 ಲಕ್ಷಕ್ಕಿಂತ ಹೆಚ್ಚು ಆದಾಯ ಇರುವವರಿಗೆ ಐಟಿಆರ್ ಇ-ಫೈಲಿಂಗ್ ಕಡ್ಡಾಯವಾಗಿದೆ.

ಆಧಾರ್-ಪ್ಯಾನ್ ಲಿಂಕ್ ಕಡ್ಡಾಯ

ಆಧಾರ್-ಪ್ಯಾನ್ ಲಿಂಕ್ ಕಡ್ಡಾಯ

 ಜುಲೈ 1ರಿಂದ ತೆರಿಗೆದಾರರು ಆಧಾರ್ ಸಂಖ್ಯೆಯನ್ನು ಪ್ಯಾನ್ ನೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ. ತೆರಿಗೆ ಇಲಾಖೆಯು ನೋಟು ನಿಷೇಧದ ನಂತರ ಬ್ಯಾಂಕು ಖಾತೆಗಳಲ್ಲಿ ರೂ. 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಇರಿಸಿದ್ದರೆ ಅಂತಹ ವಿವರಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕಾಗುತ್ತದೆ.

ಇ-ಫೈಲಿಂಗ್ ವೆಬ್ಸೈಟ್

ಇ-ಫೈಲಿಂಗ್ ವೆಬ್ಸೈಟ್

ಆದಾಯ ತೆರಿಗೆ ಇಲಾಖೆಯ ಅಧಿಕೃತ ತಾಣ http://incometaxindiaefiling.gov.in ಮೂಲಕ ಇ-ಫೈಲಿಂಗ್ ಮಾಡಬಹುದಾಗಿದೆ. ಕೊನೆ ಸಂದರ್ಭದಲ್ಲಿ ಇಲಾಖೆಯ ಇಂಟರ್ನೆಟ್ ತಾಣದಲ್ಲಿ ತಾಂತ್ರಿಕ ಸಮಸ್ಯೆಗಳು ಕಂಡುಬಂದಿರುವ ಬಗ್ಗೆ ದೂರುಗಳು ದಾಖಲಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+