For Quick Alerts
ALLOW NOTIFICATIONS  
For Daily Alerts

ಉದ್ಯಮಪತಿಗಳ 81 ಸಾವಿರ ಕೋಟಿ ಸಾಲ ಮಾಫಿ ಮಾಡಿದ ಕೇಂದ್ರ!

ಸರ್ಕಾರಿ ವಲಯದ ಬ್ಯಾಂಕುಗಳಿಗೆ ಹೊರೆಯಾಗಿದ್ದ ಸುಮಾರು 81,683 ಸಾವಿರ ಕೋಟಿ ಮೊತ್ತದ ಸಾಲವನ್ನು ಕೇಂದ್ರ ಸರ್ಕಾರ ಮಾಫಿ ಮಾಡಿದೆ ಎಂದು ಹಣಕಾಸು ಇಲಾಖೆ ತಿಳಿಸಿದೆ.

By Siddu
|

ಸರ್ಕಾರಿ ವಲಯದ ಬ್ಯಾಂಕುಗಳಿಗೆ ಹೊರೆಯಾಗಿದ್ದ ಸುಮಾರು 81,683 ಸಾವಿರ ಕೋಟಿ ಮೊತ್ತದ ಸಾಲವನ್ನು ಕೇಂದ್ರ ಸರ್ಕಾರ ಮಾಫಿ ಮಾಡಿದೆ ಎಂದು ಹಣಕಾಸು ಇಲಾಖೆ ತಿಳಿಸಿದೆ.

ಬ್ಯಾಂಕುಗಳಿಂದ ಸಾಲ ಪಡೆದು ವಾಪಸ್ ಕಟ್ಟಲಾಗದೇ, ದೇಶ ಬಿಟ್ಟು ಓಡಿ ಹೋದವರು, ತಲೆ ತಪ್ಪಿಸಿಕೊಂಡವವರ ವಾಪಸ್ ಬರಲಾಗದ ಸಾಲವನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ವಿಧಿಯಿಲ್ಲದೆ ಮನ್ನಾ ಇಲ್ಲವೇ ಮಾಫಿ ಮಾಡಿವೆ. ಈ ಮೊತ್ತವನ್ನು ಬ್ಯಾಲೆನ್ಸ್ ಶೀಟ್ ನಿಂದ ಕೈಬಿಡಲಾದ ಲೆಕ್ಕವೇ ಹೊರತು ಕಾನೂನು ವ್ಯಾಪ್ತಿಯಿಂದ ಕೈಬಿಡಲಾದ ಲೆಕ್ಕಾಚಾರವಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಜಗತ್ತಿನ ಟಾಪ್ 10 ಅತಿ ಭ್ರಷ್ಟ ರಾಷ್ಟ್ರಗಳು

ಅನುತ್ಪಾದಕ ಆಸ್ತಿ ಸಮಸ್ಯೆ

ಅನುತ್ಪಾದಕ ಆಸ್ತಿ ಸಮಸ್ಯೆ

ಬ್ಯಾಂಕುಗಳಿಂದ ವಿವಿಧ ಉದ್ಯಮಪತಿಗಳು, ಉದ್ಯಮಗಳು, ವ್ಯಕ್ತಿಗಳು ತೆಗೆದುಕೊಂಡಿದ್ದ ಸಾಲಗಳು ಸುದೀರ್ಘ ಕಾಲದಿಂದ ಮರುಪಾವತಿಯಾಗದ ಕಾರಣ ಬ್ಯಾಂಕುಗಳು ಎದುರಿಸುತ್ತಿರುವ ವಸೂಲಿ ಹೊರೆ ಸಮಸ್ಯೆಯನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಸಾಲಗಳು ಬ್ಯಾಂಕುಗಳ ಆದಾಯದ ಮೇಲೆ ಭಾರಿ ಹೊಡೆತ ನೀಡಿದ್ದರಿಂದಾಗಿ ವಸೂಲಾಗದ ಸಾಲ ಅಥವಾ ಅನುತ್ಪಾದಕ ಆಸ್ತಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಆರ್‌ಬಿಐ ಕಠಿಣ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕುಗಳು ಸಾಲದ ಹಣವನ್ನು ಮಾಫಿ/ಮನ್ನಾ ಮಾಡುವ ನಿರ್ಧಾರ ತೆಗೆದುಕೊಳ್ಳುತ್ತಿವೆ ಎನ್ನಲಾಗಿದೆ.

ಶೇ. 41 ರಷ್ಟು ಏರಿಕೆ

ಶೇ. 41 ರಷ್ಟು ಏರಿಕೆ

2016ರ ಹಣಕಾಸು ವರ್ಷಕ್ಕೆ ಹೋಲಿಕೆ ಮಾಡಿದರೆ ಇದರ ಪ್ರಮಾಣ ಶೇ. 41 ರಷ್ಟು ಏರಿಕೆಯಾಗಿದೆ. ಅನುತ್ಪಾದಕ ಆಸ್ತಿ ಸಮಸ್ಯೆಯನ್ನು ಈಡೇರಿಸುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಈ ಮೊತ್ತವನ್ನು ಬ್ಯಾಲೆನ್ಸ್ ಶೀಟ್ ನಿಂದ ಕೈಬಿಡಲಾದ ಲೆಕ್ಕವೇ ಹೊರತು ಕಾನೂನು ವ್ಯಾಪ್ತಿಯಿಂದ ಕೈಬಿಡಲಾದ ಲೆಕ್ಕಾಚಾರವಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ.

ವಿರೋಧ ಪಕ್ಷಗಳ ಆಕ್ರೋಶ

ವಿರೋಧ ಪಕ್ಷಗಳ ಆಕ್ರೋಶ

ದೇಶದ ರೈತರು ಸತತ ಬರಗಾಲದಿಂದ ಕೆಂಗೆಟ್ಟು ಸಾವಿರ ಅಥವಾ ಲಕ್ಷಗಳ ಲೆಕ್ಕದಲ್ಲಿರುವ ಸಾಲವನ್ನು ತಿರಿಸಲಾಗದೆ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾನೆ. ಆದರೆ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡುತ್ತಿಲ್ಲ. ಆದರೆ ಕಾರ್ಪೋರೇಟ್ ಸಾಲಗಳನ್ನು ಮಾಫಿ ಮಾಡುತ್ತಿದೆ ಎಂದು ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ದೇಶದ ಒಟ್ಟು ಅನುತ್ಪಾದಕ ಆಸ್ತಿ

ದೇಶದ ಒಟ್ಟು ಅನುತ್ಪಾದಕ ಆಸ್ತಿ

ದೇಶದಲ್ಲಿ ಒಟ್ಟು ರೂ. 9.64 ಲಕ್ಷ ಕೋಟಿ ಅನುತ್ಪಾದಕ ಆಸ್ತಿ ಇದೆ. ಈ ವರ್ಷ ಮಾಫಿ ಮಾಡಿದ ಸಾಲದ ಮೊತ್ತ ರೂ. 81,683 ಕೋಟಿ ಆಗಿರುತ್ತದೆ. ಕಳೆದ ವರ್ಷದ ಮೊತ್ತ
ರೂ. 57, 586 ಕೋಟಿಯಷ್ಟಿದೆ. ಕಳೆದ ಐದು ವರ್ಷಗಳ ಒಟ್ಟು ಮಾಫಿ ಮೊತ್ತ ರೂ. 2.46 ಲಕ್ಷ ಕೋಟಿ.

ಕಾನೂನು ಕ್ರಮ ಸಾಧ್ಯವೆ?

ಕಾನೂನು ಕ್ರಮ ಸಾಧ್ಯವೆ?

ಅನುತ್ಪಾದಕ ಆಸ್ತಿ ಎಂಬುದು ಬ್ಯಾಂಕುಗಳ ದೊಡ್ಡ ಸಮಸ್ಯೆಯಾಗಿದ್ದು, ಇದು ಬ್ಯಾಂಕುಗಳು ನೀಡಿರುವ ಸಾಲ ಮತ್ತು ಬಡ್ಡಿ ಎರಡನ್ನು ಸಾಲಗಾರರು ಬಾಕಿ ಉಳಿಸಿಕೊಳ್ಳುವ ಪರಿಸ್ಥಿತಿ. ಬ್ಯಾಂಕುಗಳಿಗೆ ಪ್ರತಿವರ್ಷ ಆಡಿಟಿಂಗ್ ನಲ್ಲಿ ಈ ಅನುತ್ಪಾದಕ ಆಸ್ತಿ ದೊಡ್ಡ ಸವಾಲಾಗಿ ಎದುರಾಗುತ್ತದೆ. ಇದರಿಂದ ಬ್ಯಾಂಕುಗಳಿಗೆ ನಷ್ಟವಾಗುತ್ತದೆ. ಹೀಗಾಗಿ ಅನುತ್ಪಾದಕ ಆಸ್ತಿಯನ್ನು ಬ್ಯಾಲೆನ್ಸ್ ಶೀಟ್ ನಿಂದ ತೆಗೆಯುತ್ತದೆ. ಇದು ಸಾಲ ಮಾಫಿ ಅಥವಾ ಮನ್ನಾ ರೂಪ ಪಡೆದುಕೊಳ್ಳುತ್ತದೆ. ಇದನ್ನು ಬ್ಯಾಂಕುಗಳು ಕಾನೂನು ಚೌಕಟ್ಟಿನಲ್ಲಿ ನ್ಯಾಯಾಲಯಗಳ ಮೊರೆ ಹೋಗಿ ಸಾಲಗಾರರ ಆಸ್ತಿಯನ್ನು ಮುಟ್ಟುಗೋಲು ಮಾಡಿಕೊಳ್ಳುವ ಮುಖಾಂತರ ಅಸಲು ಮತ್ತು ಬಡ್ಡಿಯನ್ನು ಹಿಂಪಡೆಯುತ್ತವೆ. ಇದಕ್ಕೆ ವಿಜಯ್ ಮಲ್ಯ ಉತ್ತಮ ಉದಾಹರಣೆ ಎನ್ನಬಹುದು.

English summary

Govt-Run Banks Wrote Off A Record Rs 81,000 Crore Of Bad Loans In 2016-2017

According to Finance Ministry data, public sector banks (PSBs) wrote off a record Rs 81,683 crore worth of bad loans in the financial year ended March 2017.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X