For Quick Alerts
ALLOW NOTIFICATIONS  
For Daily Alerts

ಇನ್ಮುಂದೆ.., ಚುನಾವಣಾ ಚೀಟಿಗೆ ಆಧಾರ್ ಲಿಂಕ್ ಮಾಡೋದು ಕಡ್ಡಾಯ..?!

ವಿವಿಧ ಚುನಾವಣಾ ಸೇವೆಗಳಿಗಾಗಿ ಮತದಾರ ಗುರುತಿನ ಚೀಟಿಗೆ ಆಧಾರ್ ನಂಬರ್ ಸಂಪರ್ಕ ಕಲ್ಪಿಸುವ ಬಗ್ಗೆ ಭಾರತೀಯ ಚುನಾವಣಾ ಆಯೋಗ (ಇಸಿಐ) ಪರಿಶೀಲನೆ ನಡೆಸುತ್ತಿದೆ.

|

ವಿವಿಧ ಚುನಾವಣಾ ಸೇವೆಗಳಿಗಾಗಿ ಮತದಾರ ಗುರುತಿನ ಚೀಟಿಗೆ ಆಧಾರ್ ನಂಬರ್ ಸಂಪರ್ಕ ಕಲ್ಪಿಸುವ ಬಗ್ಗೆ ಭಾರತೀಯ ಚುನಾವಣಾ ಆಯೋಗ (ಇಸಿಐ) ಪರಿಶೀಲನೆ ನಡೆಸುತ್ತಿದೆ ಎಂದು ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪಿ.ಪಿ ಚೌಧರಿ ಬುಧವಾರ ಲೋಕಸಭೆಗೆ ತಿಳಿಸಿದ್ದಾರೆ.

ಈ ಕ್ರಮವನ್ನು "ಸರಿಯಾದ ಸಮಯದಲ್ಲಿ ಪರಿಚಯಿಸಲಾಗುವುದು" ಎಂದು ಚೌಧರಿ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿದೆ.

ಚುನಾವಣಾ ಚೀಟಿಗೆ ಆಧಾರ್ ಕಡ್ಡಾಯ ಮಾಡುತ್ತಿಲ್ಲ ಏಕೆ?ಚುನಾವಣಾ ಚೀಟಿಗೆ ಆಧಾರ್ ಕಡ್ಡಾಯ ಮಾಡುತ್ತಿಲ್ಲ ಏಕೆ?

ವ್ಯಾಪಕ ಚರ್ಚೆ, ಆಗ್ರಹ

ವ್ಯಾಪಕ ಚರ್ಚೆ, ಆಗ್ರಹ

ಕೇಂದ್ರ ಸರ್ಕಾರ ಎಲ್ಲದಕ್ಕೂ ಆಧಾರ್ ಕಡ್ಡಾಯ ಮಾಡುತ್ತಿದೆ. ಆದರೆ ಚುನಾವಣಾ ಚೀಟಿಗೆ ಮಾತ್ರ ಆಧಾರ್ ಕಡ್ಡಾಯ ಮಾಡುತ್ತಿಲ್ಲ ಏಕೆ ಎನ್ನುವುದು ತುಂಬಾ ಜನರ ಪ್ರಶ್ನೆ. ಅದರಲ್ಲೂ ಸಾಮಾಜಿಕ ತಾಣಗಳಲ್ಲಿ ಈ ಬಗ್ಗೆ ಚರ್ಚೆಗಳು ಜೋರಾಗಿ ನಡೆದಿವೆ. ಮತದಾರರ ಚೀಟಿಯೊಂದಿಗೆ ಆಧಾರ್ ಜೋಡಣೆ ಮಾಡಿದರೆ ಮಹತ್ತರ ಬದಲಾವಣೆ, ಫಲಿತಾಂಶ ಸಾಧ್ಯವಿದೆ. ದೇಶದ ಚುನಾವಣಾ ಚರಿತ್ರೆಯಲ್ಲಿ ಇದೊಂದು ಮಹತ್ತರ ಬದಲಾವಣೆಯ ಪರ್ವ ಆಗಲಿದೆ ಎಂಬ ಕೂಗು ಕೇಳಿ ಬರುತ್ತಿದೆ. ನಕಲಿ ಮತದಾನ ತಡೆಗೆ ಮತದಾರರ ಚೀಟಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗುವುದೇ ಎನ್ನುವುದು ಎಲ್ಲರ ಆಶಯವಾಗಿದೆ.

NERPAP ಕಾರ್ಯಕ್ರಮ

NERPAP ಕಾರ್ಯಕ್ರಮ

ಚುನಾವಣಾ ಆಯೋಗ 2015 ರಲ್ಲಿ ಡೇಟಾಬೇಸ್ ನೊಂದಿಗೆ ಆಧಾರ್ ಸಂಖ್ಯೆಗಳನ್ನು ಸಂಪರ್ಕಿಸಲು ರಾಷ್ಟ್ರೀಯ ಚುನಾವಣಾ ಶುದ್ಧೀಕರಣ ಮತ್ತು ದೃಢೀಕರಣ ಕಾರ್ಯಕ್ರಮ (NERPAP) ಪ್ರಾರಂಭಿಸಿದೆ.

ಮತದಾರ ಚೀಟಿ-ಆಧಾರ್ ಜೋಡಣೆ ಲಾಭಗಳೇನು?

ಮತದಾರ ಚೀಟಿ-ಆಧಾರ್ ಜೋಡಣೆ ಲಾಭಗಳೇನು?

1. ನಕಲಿ ಮತದಾನ ತಡೆಯಬಹುದು. ಬೆರಳ ತುದಿಗೆ ಶಾಯಿ ಹಾಕುವ ಬದಲು ಬೆರಳಿನ ಸ್ಕ್ಯಾನ್ ಮಾಡಿದರೆ ಸಾಕು. ಎರಡನೇ ಬಾರಿ ಸ್ಕ್ಯಾನ್ ಮಾಡಲಾಗದಂತ ನಿಯಮ ಯಂತ್ರದಲ್ಲಿ ಅಳವಡಿಸಿದರೆ ಸಾಕು.
2. ಒಬ್ಬ ವ್ಯಕ್ತಿ ಎರಡೆರಡು ಬಾರಿ ಮತದಾನ ಮಾಡುವುದು ಅಥವಾ ನಕಲಿ ಮತದಾನ ಮಾಡುವುದನ್ನು ಸುಲಭವಾಗಿ ತಡೆಯಬಹುದು. ಮರಣಹೊಂದಿದ ವ್ಯಕ್ತಿಗಳು ಮತ ಚಲಾಯಿಸಲಾರರು!
3. ನಕಲಿ ಮತದಾನ ಅವಕಾಶ ಸಾದ್ಯವಿಲ್ಲದಿರುವುದರಿಂದ ಅಭ್ಯರ್ಥಿಯ ಏಜೆಂಟರುಗಳನ್ನು ನಿಲ್ಲಿಸುವ ಅಗತ್ಯವಿರುವುದಿಲ್ಲ.
4. ಮತದಾನಕ್ಕಾಗಿ ರಜೆಗಳನ್ನು ತಡೆಯಬಹುದು.
5. ಪೊಲೀಸ್/ಸೇನೆಗಳನ್ನು ಬಳಸುವುದನ್ನು ತಪ್ಪಿಸಬಹುದು.
6. ಸರ್ಕಾರಿ ಅಧಿಕಾರಿಗಳನ್ನುತಿಂಗಳುಗಟ್ಟಲೆ ಅಲೆದಾಡಿಸಬೇಕಿಲ್ಲ.
7. ಮತದಾರ ಬೆರಳಿನ ಸ್ಕ್ಯಾನ್ ಮಾಡಿದಾಗ ಆತನ ವಿಧಾನಸಭಾ ಕ್ಷೇತ್ರದ ಮಾಹಿತಿ ಪ್ರಕಟವಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಬಹುದು.
8. ಮತದಾನ ಮಾಡಬೇಕಾದ ಕ್ಷೇತ್ರಗಳಿಗೆ ಹೋಗಿ ಮತ ಚಲಾಯಿಸುವ ಬದಲು ಇರುವ ನಗರ ಅಥವಾ ಸ್ಥಳಗಳಿಂದಲೇ ಮತ ಚಲಾವಣೆ ಅವಕಾಶ ಕಲ್ಪಿಸಬಹುದು. ಆಧಾರ್ ಲಿಂಕ್ ಮಾಡಿಲ್ಲವೆ? ಹಾಗಿದ್ದರೆ ಈ ಸೌಲಭ್ಯಗಳು ಸಿಗಲ್ಲ

ಪ್ಯಾನ್ ಕಡ್ಡಾಯ

ಪ್ಯಾನ್ ಕಡ್ಡಾಯ

ಸರ್ಕಾರ ಈಗಾಗಲೇ ಪ್ಯಾನ್ ಗಾಗಿ ಆಧಾರ್ ಕಡ್ಡಾಯ ಮಾಡಿದೆ. ಆನ್ಲೈನ್ ನಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ, ಇತರ ಸಹಾಯ ಧನಗಳು, ರಿಯಲ್ ಎಸ್ಟೇಟ್ ವ್ಯವಹಾರಗಳು ಮತ್ತು ಚಾಲನಾ ಪರವಾನಗಿಗೆ ಆಧಾರ್ ಕಡ್ಡಾಯ ಮಾಡಲು ಮುಂದಾಗಿರುವುದು ಹಿಂದಿನ ವರದಿಗಳು ಸೂಚಿಸುತ್ತವೆ.

English summary

Now, you may have to link Aadhaar to your Voter ID

The Election Commission of India (ECI) is considering linking Aadhaar number to voter identification cards 'for various electoral services', MoS for Electronics and Information Technology P P Chaudhary told the Lok Sabha on Wednesday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X