For Quick Alerts
For Daily Alerts
ಎಚ್ಡಿಎಫ್ಸಿ ಉಳಿತಾಯ ಖಾತೆ ಬಡ್ಡಿದರ ಕಡಿತ
ದೇಶದ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿರುವ ಎಚ್ಡಿಎಫ್ಸಿ ಶೇ. 0.50ರಷ್ಟು ಬಡ್ಡಿದರವನ್ನು ಕಡಿತ ಮಾಡಿದೆ. ಎಚ್ಡಿಎಫ್ಸಿ ಬ್ಯಾಂಕ್ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರವನ್ನು ಶೇ. 4 ರಿಂದ ಶೇ. 3.5ಕ್ಕೆ ಇಳಿಸಿದೆ.
|
ದೇಶದ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿರುವ ಎಚ್ಡಿಎಫ್ಸಿ ಶೇ. 0.50ರಷ್ಟು ಬಡ್ಡಿದರವನ್ನು ಕಡಿತ ಮಾಡಿದೆ.
ಎಚ್ಡಿಎಫ್ಸಿ ಬ್ಯಾಂಕ್ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರವನ್ನು ಶೇ. 4 ರಿಂದ ಶೇ. 3.5ಕ್ಕೆ ಇಳಿಸಿದೆ. ಗ್ರಾಹಕರು ರೂ. 50 ಲಕ್ಷದವರೆಗಿನ ಉಳಿತಾಯ ಖಾತೆ ಮೊತ್ತದ ಮೇಲೆ ವಾರ್ಷಿಕವಾಗಿ ಶೇ. 3.5ರಷ್ಟು ಬಡ್ಡಿದರ ಪಡೆಯಲಿದ್ದಾರೆ. ಈ ಪರಿಷ್ಕೃತ ದರಗಳು ನಿವಾಸಿ ಮತ್ತು ಅನಿವಾಸಿ ಗ್ರಾಹಕರಿಗೆ ಅನ್ವಯವಾಗುತ್ತವೆ ಎಂದು ಎಚ್ಡಿಎಫ್ಸಿ ಬ್ಯಾಂಕ್ ತಿಳಿಸಿದೆ.
ಹೊಸ ಬಡ್ಡಿದರ ಆಗಸ್ಟ್ 19, 2017ರಿಂದ ಜಾರಿಗೆ ಬರಲಿದೆ. ಕಳೆದ ತಿಂಗಳು ಎಸ್ಬಿಐ ಬ್ಯಾಂಕ್ ತನ್ನ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದೆ. ಎಸ್ಬಿಐ ಬಡ್ಡಿದರ ಕಡಿತಗೊಳಿಸಿದ ನಂತರ ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಇಂಡಿಯನ್ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್ ಸೇರಿದಂತೆ ಅನೇಕ ಬ್ಯಾಂಕುಗಳು ಉಳಿತಾಯ ಖಾತೆಗಳ ಮೇಲಿನ ಬಡ್ಡಿದರಗಳನ್ನು ಕಡಿತಗೊಳಿಸಿವೆ.
English summary
HDFC Bank cuts rates on certain savings accounts
Story first published: Thursday, August 17, 2017, 17:34 [IST]