Englishहिन्दी മലയാളം தமிழ் తెలుగు

ಸ್ವಾತಂತ್ರ್ಯ ನಂತರದ 70 ವರ್ಷಗಳಲ್ಲಿ ಭಾರತ..? ಚೀನಾ-ಪಾಕಿಸ್ತಾನದೊಂದಿಗೆ ಒಂದು ಹೋಲಿಕೆ..!

Written By: Siddu
Subscribe to GoodReturns Kannada

ಭಾರತ 70 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸಿದ್ದು, ಎಲ್ಲಾ ರಂಗದಲ್ಲೂ ಮಹತ್ತರ ಪ್ರಗತಿ ಸಾಧಿಸುತ್ತಿದೆ. ಸಾಕ್ಷರತೆ, ಜೀವನಶೈಲಿ, ತಂತ್ರಜ್ಞಾನ, ವಿಜ್ಞಾನಗಳಲ್ಲಿ ಅಪಾರ ಬೆಳವಣಿಗೆ ಸಾಧಿಸಿದೆ. ಆದರೆ ಏಷಿಯಾದ ಪ್ರಮುಖ ದೇಶಗಳಿಗೆ ಹೋಲಿಸಿದರೆ ಮಕ್ಕಳ ಮರಣ ದರ ಹಾಗೂ ಆದಾಯ ಗಳಿಕೆಯಲ್ಲಿ ತುಂಬಾ ನಿಧಾನ ಪ್ರಗತಿ ಸಾಧಿಸುತ್ತಿದೆ.

70 ವರ್ಷಗಳ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ ಸಂದರ್ಭದಲ್ಲಿ ನಮ್ಮ ದೇಶದ ಪ್ರಗತಿಯನ್ನು ಚೀನಾ, ಪಾಕಿಸ್ತಾನ, ಮಲೇಷಿಯಾ, ದಕ್ಷಿಣ ಕೊರಿಯಾ ಮತ್ತು ಬ್ರೆಜಿಲ್ ದೇಶಗಳೊಂದಿಗೆ ಹೋಲಿಕೆ ಮಾಡಿ ನೋಡೋಣ..

'ಭಾರತ, ಚೀನಾ, ಪಾಕಿಸ್ತಾನ' ಆರ್ಥಿಕ ಸಮರದಲ್ಲಿ ಯಾರಿಗೆ ಗೆಲುವು?

ಹೋಲಿಕೆ

ಇಂದು ಚೈನಾ, ಪಾಕಿಸ್ತಾನ, ಮಲೇಷಿಯಾ, ದಕ್ಷಿಣ ಕೊರಿಯಾ ಮತ್ತು ಬ್ರೆಜಿಲ್ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದ ಆದಾಯ ಹೆಚ್ಚಳ (ಜಿಡಿಪಿ), ಮಕ್ಕಳ ಮರಣ ದರ, ಸಾಕ್ಷರತೆ, ಆರೋಗ್ಯ, ಅರಣ್ಯ ರಕ್ಷಣೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಎಷ್ಟು ಬೆಳವಣಿಗೆ ಸಾಧಿಸಿದೆ ಎಂಬುದನ್ನು ಅರ್ಥೈಸಿಕೊಳ್ಳಬಹುದು. ಮುಂದೆ ಓದಿ.....

5 ದೇಶಗಳನ್ನು ಆಯ್ಕೆ ಮಾಡಲು ಕಾರಣ?

1960 ರ ದಶಕದಿಂದ ಇಲ್ಲಿಯವರೆಗೆ ಹೋಲಿಕೆ ಮಾಡಿ ನೋಡಿದರೆ ಈ ಐದು ದೇಶಗಳಲ್ಲಿ ಹಲವಾರು ಸಾಮ್ಯತೆಗಳಿವೆ.

ಚೀನಾ: 1960 ರ ದಶಕದಲ್ಲಿ ಚೀನಾ ಮತ್ತು ಭಾರತದ ಆದಾಯದ ವಿಷಯದಲ್ಲಿ ಒಂದೇ ಮಟ್ಟದಲ್ಲಿದ್ದವು.
ದಕ್ಷಿಣ ಕೊರಿಯಾ: 1947 ರ ದಶಕದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಲ್ಲಿದ್ದ ದಕ್ಷಿಣ ಕೊರಿಯಾವು ಪ್ರಸ್ತುತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿದೆ. ಈ ದೇಶವನ್ನು ಭಾರತಕ್ಕೆ ಹೋಲಿಸುವುದು ಒಳ್ಳೆಯದು ಏಕೆಂದರೆ ಎರಡು ದೇಶಗಳು ಹೇಗೆ ಪ್ರಗತಿಯ ಪಥದಲ್ಲಿ ಪ್ರದರ್ಶನ ಮಾಡುತ್ತಿವೆ ಎಂಬುದನ್ನು ತಿಳಿಯಬಹುದು.
ಪಾಕಿಸ್ತಾನ: ಭಾರತ ಮತ್ತು ಪಾಕಿಸ್ತಾನ ಒಂದೇ ಇತಿಹಾಸ ಮತ್ತು ಸಂಸ್ಕೃತಿಯನ್ನು ಹೊಂದಿದ್ದು, ಭಾರತದೊಂದಿಗೆ ಹೋಲಿಕೆಯ ಅಧ್ಯಯನ ಮಾಡಲು ವಿಶ್ವದ ಏಕೈಕ ದೇಶವಾಗಿದೆ.
ಬ್ರೆಜಿಲ್: ಬ್ರಿಕ್ಸ್(Brazil, Russia, India, China and South Africa) ದೇಶಗಳಲ್ಲಿ ಒಂದಾಗಿರುವ ಬ್ರೇಜಿಲ್ ಕೂಡ ಭಾರತದೊಂದಿಗಿನ ಹೋಲಿಕೆ ಅಧ್ಯಯನಕ್ಕೆ ಉತ್ತಮ ವೇದಿಕೆ. ಇದು ಕೂಡ ಹಲವಾರು ಆರ್ಥಿಕ ಬದಲಾವಣೆಗೆ ಒಳಗಾಗಿದೆ..
ಮಲೇಷಿಯಾ: ಭಾರತದಂತೆಯೇ, ಬಹುಸಂಸ್ಕೃತಿ ಮತ್ತು ಅನೇಕ ಸಮಸ್ಯೆಗಳನ್ನು ಹೊಂದಿರುವ ಮಲೇಷಿಯಾ ಭಾರತದ ಬೆಳವಣಿಗೆಯನ್ನು ಮಾರ್ಪಡಿಸುವಲ್ಲಿ ನೆರವಾಗಿದೆ.

ಮಂದಗತಿಯ ಪ್ರಗತಿ

ಕಳೆದ 56 ವರ್ಷಗಳಲ್ಲಿ, ಭಾರತದ ಆದಾಯ 21 ಬಾರಿ ಹೆಚ್ಚಿದೆ. ಆದರೆ ಚೀನಾ, ಮಲೆಷ್ಯಾಕ್ಕಿಂತ ನಿಧಾನವಾಗಿ ಪ್ರಗತಿ ಸಾಧಿಸಿದೆ. ಪ್ರತಿ ಪ್ರಜೆಯ ಸರಾಸರಿ ಆದಾಯ ನಿಧಾನಗತಿಯಲ್ಲಿ ಸಾಗಿದ್ದರೆ, ಜನಸಂಖ್ಯೆ ಮಾತ್ರ ವೇಗವಾಗಿ ಬೆಳೆಯುತ್ತಿದೆ. ಚೀನಾ, ಮಲೇಷಿಯಾ, ಬ್ರೆಜಿಲ್ ಮತ್ತು ದಕ್ಷಿಣ ಕೊರಿಯಾ ದೇಶಗಳಿಗೆ ಹೋಲಿಸಿದರೆ ಭಾರತ ನಿಧಾನಗತಿಯ ಪ್ರಗತಿಯನ್ನು ಸಾಧಿಸಿದೆ.

ಒಟ್ಟು ದೇಶಿಯ ಉತ್ಪನ್ನ (GDP)

ಇಲ್ಲಿ 1960 ರಿಂದ 2016ರ ವರೆಗಿನ ಭಾರತ, ಚೀನಾ, ಮಲೇಷಿಯಾ, ಬ್ರೆಜಿಲ್ ಮತ್ತು ದಕ್ಷಿಣ ಕೊರಿಯಾ ದೇಶಗಳ ಜಿಡಿಪಿ ಹೋಲಿಕೆಯನ್ನು ನೀಡಲಾಗಿದೆ.

ಜೀವನ(ಆಯಸ್ಸು) ನಿರೀಕ್ಷೆ

ಇಲ್ಲಿ 1960 ರಿಂದ 2015ರ ವರೆಗಿನ ಭಾರತ, ಚೀನಾ, ಮಲೇಷಿಯಾ, ಬ್ರೆಜಿಲ್ ಮತ್ತು ದಕ್ಷಿಣ ಕೊರಿಯಾ ದೇಶಗಳ ನಡುವಿನ ಜೀವನ ನಿರೀಕ್ಷೆಯ ಹೋಲಿಕೆಯನ್ನು ನೀಡಲಾಗಿದೆ.

ಮಕ್ಕಳ ಮರಣ ದರ

1960 ರಿಂದ 2015ರ ವರೆಗಿನ ಭಾರತ, ಚೀನಾ, ಮಲೇಷಿಯಾ, ಬ್ರೆಜಿಲ್ ಮತ್ತು ದಕ್ಷಿಣ ಕೊರಿಯಾ ದೇಶಗಳ ನಡುವಿನ ಮಕ್ಕಳ ಮರಣ ದರ ಪ್ರಮಾಣದ ಹೋಲಿಕೆಯನ್ನು ಒದಗಿಸಲಾಗಿದೆ.

ಸಾಕ್ಷರತೆ

1980 ರಿಂದ 2005ರ ವರೆಗಿನ ಭಾರತ, ಚೀನಾ, ಮಲೇಷಿಯಾ, ಬ್ರೆಜಿಲ್ ಮತ್ತು ದಕ್ಷಿಣ ಕೊರಿಯಾ ದೇಶಗಳ ನಡುವಿನ ಸಾಕ್ಷರತೆ ಹೋಲಿಕೆಯನ್ನು ಒದಗಿಸಲಾಗಿದೆ.

ಅರಣ್ಯ ಸಂರಕ್ಷಣೆ

1990 ರಿಂದ 2015ರ ವರೆಗಿನ ಭಾರತ, ಚೀನಾ, ಮಲೇಷಿಯಾ, ಬ್ರೆಜಿಲ್ ಮತ್ತು ದಕ್ಷಿಣ ಕೊರಿಯಾ ದೇಶಗಳ ನಡುವಿನ ಅರಣ್ಯ ಸಂರಕ್ಷಣೆ ಹೋಲಿಕೆಯನ್ನು ಒದಗಿಸಲಾಗಿದೆ.

English summary

70th Independence day special, what has changed last 70 years in India

In the 70 years since independence, India has made most progress in improving life expectancy, literacy, but has been slower in improving the level of income, and reducing infant mortality rates when compared to five other nations.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns