ಜಿಯೋ ಪ್ರವೇಶಾತಿ ನಂತರ ಟೆಲಿಕಾಂ ರಂಗದಲ್ಲಿ ಹೊಸ ಸಂಚಲನವೇ ಸೃಷ್ಟಿಯಾಗಿದೆ. ದೇಶದ ಪ್ರಮುಖ ಕಂಪನಿಗಳು ತಮ್ಮ ಅಸ್ತಿತ್ವಕ್ಕಾಗಿ ತಿಣುಕಾಡುತ್ತಿವೆ. 'Survival of the fittest' ಅನ್ನುವ ಹಾಗೇ ತಮ್ಮ ಗ್ರಾಹಕರನ್ನು ಉಳಿಸಲು ಹರಸಾಹಸ ಮಾಡುತ್ತಿವೆ.
ಜಿಯೋ ಪ್ರವೇಶಾತಿ ನಂತರ ಟೆಲಿಕಾಂ ರಂಗದಲ್ಲಿ ಹೊಸ ಸಂಚಲನವೇ ಸೃಷ್ಟಿಯಾಗಿದೆ. ದೇಶದ ಪ್ರಮುಖ ಕಂಪನಿಗಳು ತಮ್ಮ ಅಸ್ತಿತ್ವಕ್ಕಾಗಿ ತಿಣುಕಾಡುತ್ತಿವೆ. 'Survival of the fittest' ಅನ್ನುವ ಹಾಗೇ ದರ ಸಮರದಲ್ಲಿ ತೊಡಗಿ ತಮ್ಮ ಗ್ರಾಹಕರನ್ನು ಉಳಿಸಲು ಹರಸಾಹಸ ಮಾಡುತ್ತಿವೆ.
ಜಿಯೋಫೋನ್ ಬಿಡುಗಡೆಗೆ ದಿನಗಣನೆ ಆಗುತ್ತಿರುವ ಸಂದರ್ಭದಲ್ಲಿ ಏರ್ಟೆಲ್ ಕೂಡ ಸ್ಮಾರ್ಟ್ಫೋನ್ ಬಿಡುಗಡೆಗೆ ವೇದಿಕೆ ಸಜ್ಜು ಮಾಡುತ್ತಿದೆ.! ಹಾಗಿದ್ದರೆ ಏರ್ಟೆಲ್ ಸ್ಮಾರ್ಟ್ ಫೋನ್ ಬಗ್ಗೆ ತಿಳಿಯೋಣ ಬನ್ನಿ..
ಏರ್ಟೆಲ್ ಸ್ಮಾರ್ಟ್ಫೋನ್ ಬೆಲೆ
ದೇಶದ ಅತಿದೊಡ್ಡ ಟೆಲಿಕಾಂ ಭಾರತೀ ಏರ್ಟೆಲ್ ಸಂಸ್ಥೆ ರೂ. 2,500ಕ್ಕೆ ಹೊಸ 4G ಸ್ಮಾರ್ಟ್ಫೋನ್ ಬಿಡುಗಡೆ ಮಾಡುತ್ತಿದೆ. ಅದು ಕೂಡ ಜಿಯೋ ಮತ್ತು ಐಡಿಯಾ ಕಂಪನಿಗಳ ಸ್ಪರ್ಧಾತ್ಮಕ ಬೆಲೆಯೊಂದಿಗೆ!! (Read more: Airtel)
50 ಕೋಟಿ ಗ್ರಾಹಕರ ಗುರಿ!
ಜಿಯೋಫೋನ್ ಈಗಾಗಲೇ 50 ಕೋಟಿ ಗ್ರಾಹಕರನ್ನು ಪಡೆಯುವ ಗುರಿ ಹೊಂದಿದೆ. ಏರ್ಟೆಲ್ ಕೂಡ 50 ಕೋಟಿ ಗ್ರಾಹಕರ ಗುರಿ ಹೊಂದಿದೆ! ಜಿಯೋ ಸ್ಮಾರ್ಟ್ಫೋನ್ ಬಿಡುಗಡೆ ನಂತರ ಏರ್ಟೆಲ್ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಲಿರುವುದರಿಂದ ತನ್ನ ಗ್ರಾಹಕರನ್ನು ಉಳಿಸಲು ಅಗ್ಗ ಬೆಲೆಯಲ್ಲಿ ಸ್ಮಾರ್ಟ್ಫೋನ್ ಬಿಡುಗಡೆ ಮಾಡುವ ಅಗತ್ಯವಿದೆ!
ಏರ್ಟೆಲ್ ಫೋನ್ ತಯಾರಕರು
ಸ್ಮಾರ್ಟ್ ಫೋನ್ ವೈಶಿಷ್ಟತೆ
* ಅತಿ ಕಡಿಮೆ ಬೆಲೆ ರೂ. 2,500
* ದೊಡ್ಡ ಸ್ಕ್ರೀನ್ ಮತ್ತು ಉತ್ತಮ ಗುಣಮಟ್ಟದ ಕ್ಯಾಮೆರಾ
* ಉತ್ತಮ ಕಾರ್ಯಕ್ಷಮತೆಯ ಬ್ಯಾಟರಿ
ಬಿಡುಗಡೆ ಯಾವಾಗ?
ಏರ್ಟೆಲ್ ತನ್ನ 4G ಸ್ಮಾರ್ಟ್ ಫೋನ್ ದೀಪಾವಳಿ ಹಬ್ಬದ ಪೂರ್ವದಲ್ಲಿ ಬಿಡುಗಡೆ ಮಾಡಲು ಸಿದ್ದತೆ ನಡೆಸಿಕೊಂಡಿದೆ. ಹೆಚ್ಚುಕಡಿಮೆ ಅಕ್ಟೋಬರ್ ಪ್ರಾರಂಭದಲ್ಲಿ ಗ್ರಾಹಕರ ಕೈ ಸೇರುವ ಸಾಧ್ಯತೆ ಇದೆ. ಜಿಯೋ ಫೋನ್ ಸೆಪ್ಟಂಬರ್ 24ರಿಂದ ಬುಕಿಂಗ್ ಪ್ರಕ್ರಿಯೆ ಪ್ರಾರಂಭವಾಗಲಿದೆ.
ಗ್ರಾಹಕರಿಂದ ಲೂಟಿ!
ಸೋಷಿಯಲ್ ಮಿಡೀಯಾದಲ್ಲಿ ನಡೆಯುತ್ತಿರುವ ಚರ್ಚೆಗಳ ಪ್ರಕಾರ ಜಿಯೋ ಪ್ರವೇಶಾತಿಯ ಮುನ್ನ ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಲೂಟಿ ಮಾಡುತ್ತಿದ್ದವು. ಡೇಟಾ ಪ್ಯಾಕ್, ಧ್ವನಿ ಕರೆ, ಇನ್ನಿತರ ಸೇವೆಗಳ ಮೇಲೆ ಸಾವಿರಾರು ರೂ.ಗಳನ್ನು ದೋಚುತ್ತಿದ್ದವು. ಆದರೆ ಈಗ ತಮ್ಮ ಗ್ರಾಹಕರನ್ನು ಸೆಳೆಯಲು ಹಾಗೂ ಉಳಿಸಲು ಹರಸಾಹಸ ಮಾಡುತ್ತಿವೆ. ಅಂದು ಸಾವಿರಾರು ರೂಪಾಯಿಗಳನ್ನು ಲೂಟಿ ಮಾಡುತ್ತಿದ್ದ ಕಂಪನಿಗಳು ಇಂದು ಉಚಿತ, ಅನಿಯಮಿತ ಹಾಗೂ ಅತಿ ಕಡಿಮೆ ದರದಲ್ಲಿ ಸೇವೆಗಳನ್ನು ಒದಗಿಸುತ್ತಿವೆ!
ಜಿಯೋಫೋನ್ ಬುಕಿಂಗ್ ಯಾವಾಗ?
ಜಿಯೋ ಫೋನ್ ಮುಂಗಡ ಬುಕಿಂಗ್ ಪ್ರಕ್ರಿಯೆ ಆಗಸ್ಟ್ 24ರಿಂದ ಆರಂಭವಾಗಲಿದ್ದು, ಸೆಪ್ಟಂಬರ್ ತಿಂಗಳಲ್ಲಿ ಜಿಯೋಫೋನ್ ಗ್ರಾಹಕರ ಕೈಸೇರಲಿದೆ. ಜಿಯೋ ಫೋನ್ ಬುಕ್ಕಿಂಗ್ ಗಾಗಿ ಅನುಸರಿಬೇಕಾದ ವಿಧಾನಗಳನ್ನು ಜಿಯೋ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದ್ದು, ಸಾಮಾನ್ಯ ಗ್ರಾಹಕರು ಹಾಗೂ ಉದ್ಯಮಿಗಳಿಗೆ ಬೇರೆ-ಬೇರೆ ರಿಜಿಸ್ಟ್ರೇಶನ್ ಪ್ರಕ್ರಿಯೆ ಇರುತ್ತದೆ. ಐಡಿಯಾ 4G ಸ್ಮಾರ್ಟ್ ಫೋನ್ ಲಾಂಚ್!!
ಐಡಿಯ ಸ್ಮಾರ್ಟ್ ಫೋನ್
ಜಿಯೋಫೋನ್ ನಂತರದಲ್ಲಿ ದೇಶದ ಪ್ರಮುಖ ಟೆಲಿಕಾಂ ಕಂಪನಿ ಐಡಿಯ ಈ ಬೃಹತ್ ಕಾರ್ಯಕ್ಕೆ ಕೈಹಾಕಿದೆ. ಈಗಾಗಲೇ 4G ಸ್ಮಾರ್ಟ್ ಫೋನ್ ತಯಾರಿಕಾ ಕಾರ್ಯಪ್ರಗತಿಯಲ್ಲಿದ್ದು, ಶೀಘ್ರದಲ್ಲಿಯೇ ಗ್ರಾಹಕರ ಕೈ ಸೇರಲಿದೆ ಎಂದು ಕಂಪನಿ ಹೇಳಿದೆ. ಜಿಯೋಫೋನ್ ಬೆಲೆ ರೂ. 1500 ಆಗಿದ್ದರೆ ಐಡಿಯ 4G ಸ್ಮಾರ್ಟ್ ಫೋನ್ ಬೆಲೆ ರೂ. 2500 ಆಗಿರಲಿದೆ.


Click it and Unblock the Notifications