ಆಧಾರ್ ನೋಂದಣಿ ಅವಧಿ ವಿಸ್ತರಣೆ, ಆಧಾರ್-ಪ್ಯಾನ್ ಜೋಡಣೆ ದಿನಾಂಕ ಮುಂದೂಡಲಾಗುವುದೆ?

ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಕಡ್ಡಾಯವಾಗಿರುವ ಆಧಾರ್ ಜೋಡಣೆಯ ಅವಧಿಯನ್ನು ವಿಸ್ತರಿಸಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿದೆ.

ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಕಡ್ಡಾಯವಾಗಿರುವ ಆಧಾರ್ ಜೋಡಣೆಯ ಅವಧಿಯನ್ನು ವಿಸ್ತರಿಸಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿದೆ.

ನವೆಂಬರ್ ಮೊದಲ ವಾರದಲ್ಲಿ ಆಧಾರ್ ಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ವಿಚಾರಣೆಗಾಗಿ ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ಆಧಾರ್ ಪ್ಯಾನ್ ಲಿಂಕ್ ಕಡ್ಡಾಯ, ಇಂದು ಕೊನೆ ದಿನ

ಆಧಾರ್ ನೋಂದಣಿಗೆ ಕೊನೆ ದಿನ

ಆಧಾರ್ ನೋಂದಣಿಗೆ ಕೊನೆ ದಿನ

ಈ ಹಿಂದೆ ಆಧಾರ್ ನೋಂದಣಿಗೆ ಸೆಪ್ಟಂಬರ್ 30ರ ಗಡುವನ್ನು ನೀಡಲಾಗಿತ್ತು. ಇದೀಗ ಡಿಸೆಂಬರ್ 31ರ ವರೆಗೆ ವಿಸ್ತರಿಸುವುದಾಗಿ ಸರ್ಕಾರ ಹೇಳಿದೆ. ಹೀಗಾಗಿ ಸಾಮಾಜಿಕ ಸೌಲಭ್ಯಗಳನ್ನು ಪಡೆಯಲು ಡಿ. 31ರ ಒಳಗಾಗಿ ಆಧಾರ್ ನೋಂದಣಿ ಮಾಡಬೇಕಾಗುತ್ತದೆ.

ಆಧಾರ್-ಪ್ಯಾನ್ ಲಿಂಕ್ ಕೊನೆ ದಿನ?

ಆಧಾರ್-ಪ್ಯಾನ್ ಲಿಂಕ್ ಕೊನೆ ದಿನ?

ಆಧಾರ್ ನೊಂದಿಗೆ ಪ್ಯಾನ್ ಕಾರ್ಡ್ ಜೋಡಣೆಗೆ ನೀಡಲಾಗಿದ್ದ ಆಗಸ್ಟ್ 31ರ ಗಡುವನ್ನು ವಿಸ್ತರಿಸುವ ಸಾಧ್ಯತೆ ಇದ್ದು, ತೆರಿಗೆ ರಿಟರ್ನ್ ಸಲ್ಲಿಕೆಗೆ ಆಧಾರ್ ಪ್ಯಾನ್ ಜೋಡಣೆ ಕಡ್ಡಾಯ ಮಾಡಲಾಗಿದೆ. ಆಧಾರ್ ನೊಂದಿಗೆ ಪ್ಯಾನ್‌ ನಂಬರ್ ಲಿಂಕ್ ಮಾಡದೆ ಐಟಿಆರ್ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ ಎಂದು ತೆರಿಗೆ ಇಲಾಖೆ ಹೇಳಿದೆ.

ಖಾಸಗಿತನ ಮೂಲಭೂತ ಹಕ್ಕು

ಖಾಸಗಿತನ ಮೂಲಭೂತ ಹಕ್ಕು

ತೆರಿಗೆ ವಂಚನೆ ಹಾಗೂ ಕಪ್ಪು ಹಣದ ವಿರುದ್ಧ ಹೋರಾಟದ ಭಾಗವಾಗಿ ಆಧಾರ್ ಪ್ಯಾನ್ ಜೋಡಣೆ ಅತ್ಯಗತ್ಯ ಎನ್ನುವುದು ಕೇಂದ್ರದ ವಾದವಾಗಿದೆ. ಆದರೆ ಖಾಸಗಿತನ ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದಾಗಿ ಆಧಾರ್ ಪ್ಯಾನ್ ಜೋಡಣೆ ಮೇಲೆ ಪರಿಣಾಮ ಬೀರಬಹುದೇ ಎನ್ನುವುದು ಗೊಂದಲಕ್ಕೆ ಎಡೆಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+