ಜಿಯೋಗೆ ಸವಾಲು! ಏರ್ಟೆಲ್ ಅನಿಯಮಿತ ಕರೆ, ಡೇಟಾ ಆಫರ್!!

ಜಿಯೋ ದೇಶದ ಟೆಲಿಕಾಂ ರಂಗದಲ್ಲಿ ಸಂಚಲನವನ್ನುಂಟು ಮಾಡಿದ್ದು, ಜಿಯೋ ಆಫರ್ ಗಳ ಮುಂದೆ ಟೆಲಿಕಾಂ ಕಂಪನಿಗಳು ಪೈಪೋಟಿ ನೀಡುವುದು ಕಷ್ಟಕರ ಎನ್ನುವಂತಾಗಿದೆ. ಆದರೂ ಮಾರುಕಟ್ಟೆಯಲ್ಲಿ ಸ್ಥಾನವನ್ನು ಹಾಗೂ ಗ್ರಾಹಕರನ್ನು ಉಳಿಸಿಕೊಳ್ಳಬೇಕಾದ ಸವಾಲು!

ಜಿಯೋ ದೇಶದ ಟೆಲಿಕಾಂ ರಂಗದಲ್ಲಿ ಹೊಸ ಸಂಚಲನವನ್ನುಂಟುಮಾಡಿದ್ದು, ಜಿಯೋ ಆಫರ್ ಗಳ ಮುಂದೆ ಟೆಲಿಕಾಂ ಕಂಪನಿಗಳು ಪೈಪೋಟಿ ನೀಡುವುದು ಕಷ್ಟಕರ ಎನ್ನುವಂತಾಗಿದೆ. ಆದರೂ ಮಾರುಕಟ್ಟೆಯಲ್ಲಿ ತಮ್ಮ ಸ್ಥಾನವನ್ನು ಹಾಗೂ ಗ್ರಾಹಕರನ್ನು ಉಳಿಸಿಕೊಳ್ಳಬೇಕಾದ ಸವಾಲು ಟೆಲಿಕಾಂ ಕಂಪನಿಗಳ ಮುಂದಿದೆ. ಆ ನಿಟ್ಟಿನಲ್ಲಿ ದೂರಸಂಪರ್ಕ ಸಂಸ್ಥೆಗಳು ಹೊಸ ಯೋಜನೆಗಳೊಂದಿಗೆ ತಮ್ಮ ಉಳಿವಿಗಾಗಿ ಭದ್ರ ಅಡಿಪಾಯಕ್ಕಾಗಿ ಸಜ್ಜಾಗಿವೆ!

ದೇಶದ ಪ್ರಮುಖ ಟೆಲಿಕಾಂ ಕಂಪನಿ ಏರ್ಟೆಲ್ ಜಿಯೋಗೆ ತಿರುಗೇಟು ನೀಡಲು ಮುಂದಾಗಿದ್ದು, ಏರ್ಟೆಲ್ ಅನಿಯಮಿತ ಕರೆ ಹಾಗು 4G ಡೇಟಾ ಸೌಲಭ್ಯ ಘೋಷಿಸಿದೆ.

ರೂ. 399 ಪ್ಲಾನ್

ರೂ. 399 ಪ್ಲಾನ್

ಏರ್ಟೆಲ್ ತನ್ನ ಪ್ರಿಪೇಡ್ ಗ್ರಾಹಕರಿಗೆ ರೂ. 399ಕ್ಕೆ ಹೊಸ ಪ್ಲಾನ್ ಘೋಷಣೆ ಮಾಡಿದೆ. ಈ ಮೂಲಕ ಅನ್ ಲಿಮಿಟೆಡ್ ಕರೆ ಹಾಗು ಪ್ರತಿದಿನ 1GB ಯಂತೆ 84 ದಿನ 4G ವೇಗದ ಡೇಟಾ ನೀಡಲಿದೆ. ಜಿಯೋ ಕೂಡ ರೂ. 399 ಇದೇ ಆಫರ್ ನ್ನು ಹಿಂದೆಯೇ ಪರಿಚಯಿಸಿತ್ತು.

ಏರ್ಟೆಲ್ to ಏರ್ಟೆಲ್ ಅನಿಯಮಿತ ಆಫರ್

ಏರ್ಟೆಲ್ to ಏರ್ಟೆಲ್ ಅನಿಯಮಿತ ಆಫರ್

ಜಿಯೋಗೆ ತಿರುಗೇಟು ನೀಡಲು ಏರ್ಟೆಲ್ ಇನ್ನೊಂದು ರೀಚಾರ್ಜ್ ಪ್ಯಾಕ್ ಆಫರ್ ಘೋಷಿಸಿದೆ. ರೂ. 149 ನಲ್ಲಿ ಏರ್ಟೆಲ್ ನಿಂದ ಏರ್ಟೆಲ್ ಅನ್ ಲಿಮಿಟೆಡ್ ಕರೆಗಳನ್ನು ಮಾಡಬಹುದು. ಇದರ ಜತೆಗೆ 4g ವೇಗದ 2gb ಡೇಟಾ 28 ದಿನಗಳವರೆಗೆ ಸಿಗಲಿದೆ.

ಬೇರೆ ಆಫರ್ ಗಳೇನು?

ಬೇರೆ ಆಫರ್ ಗಳೇನು?

ಈ ಮೇಲಿನ ಆಫರ್ ಗಳ ಜತೆಗೆ ರೂ. 8 ರಿಂದ ರೂ. 399 ವರೆಗೆ ಹಲವು ಆಫರ್ ಗಳನ್ನು ಘೋಷಿಸಿದೆ.
ರೂ. 8 ಯೋಜನೆ: ಸ್ಥಳೀಯ + ಎಸ್ಟಿಡಿ ಮೊಬೈಲ್ ಕರೆಗಳು(ನಿಮಿಷಕ್ಕೆ 30 ಪೈಸೆ), 56 ದಿನಗಳ ಅವಧಿ
ರೂ. 40 ಯೋಜನೆ: ರೂ. 35 ಟಾಕ್ ಟೈಮ್, ಅನಿಯಮಿತ ಅವಧಿ
ರೂ. 60 ಯೋಜನೆ: ರೂ. 58 ಟಾಕ್ ಟೈಮ್, ಅನಿಯಮಿತ ಅವಧಿ
ರೂ. 199 ಯೋಜನೆ: 28 ದಿನಗಳವರೆಗೆ ಅನಿಯಮಿತ ಸ್ಥಳೀಯ ಮೊಬೈಲ್ ಕರೆಗಳು ಮತ್ತು 1gb 2g/3g/4g ಡೇಟಾ ಸೌಲಭ್ಯ 

ರೂ. 349 ಪ್ಲಾನ್

ರೂ. 349 ಪ್ಲಾನ್

 ಈ ಯೋಜನೆ ಅಡಿಯಲ್ಲಿ ಅನಿಯಮಿತ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳು ಇರಲಿವೆ. ಪ್ರತಿದಿನ 1GB ಯಂತೆ 28 ದಿನಗಳವರೆಗೆ 28GB ಡೇಟಾ ಸಿಗಲಿದೆ. ಇದು ಎಲ್ಲಾ ಹ್ಯಾಂಡ್ ಸೆಟ್ ಗಳಿಗೂ ಅನ್ವಯವಾಗಲಿದೆ.

10% ಕ್ಯಾಶ್ ಬ್ಯಾಕ್ ಆಫರ್

10% ಕ್ಯಾಶ್ ಬ್ಯಾಕ್ ಆಫರ್

ಗ್ರಾಹಕರು ರೂ. 349 ಯೋಜನೆಯನ್ನು ಏರ್ಟೆಲ್ ಪೇಮೆಂಟ್ ಬ್ಯಾಂಕ್ ಖಾತೆ ತೆರೆಯುವುದರ ಮೂಲಕ ರೀಚಾರ್ಜ್ ಮಾಡಿದರೆ 10% ಕ್ಯಾಶ್ ಬ್ಯಾಕ್ ಸಿಗಲಿದೆ.

ಏರ್ಟೆಲ್ VS ಜಿಯೋ

ಏರ್ಟೆಲ್ VS ಜಿಯೋ

ಜಿಯೋ ಜುಲೈ ನಲ್ಲಿ ತನ್ನ ಧನ್ ಧನಾ ಧನ್ ಆಫರ್ 399 ರೂ. ಗಳಿಗೆ ಮುಂದುವರೆಸಿದೆ. ಮೂರು ತಿಂಗಳ ಅವಧಿಗೆ ಪೋಸ್ಟ್ ಪೇಡ್ ಗ್ರಾಹಕರಿಗೆ ಪ್ರತಿದಿನ 1GBಯಂತೆ 90GB ಸಿಗಲಿದೆ. ಇದು ಅನಿಯಮಿತ ಕರೆ, ಎಸ್ಟಿಡಿ, ರೋಮಿಂಗ್, ಎಸ್ಎಂಎಸ್ ಸೌಲಭ್ಯ ಒಳಗೊಂಡಿದೆ. ಜತೆಗೆ ರೂ. 349 ಪ್ಲಾನ್ ಕೂಡ ಘೋಷಿಸಿದೆ. ಜಿಯೋಗೆ ವಿರುದ್ಧವಾಗಿ ಏರ್ಟೆಲ್ ಇದೇ ರೀತಿಯ ಆಫರ್ ಘೋಷಿಸಿದೆ. ಜಿಯೋ ಆಫರ್ ಸುರಿಮಳೆ... ಮುಂದಿನ ಪ್ಲಾನ್ ಗಳೇನು..?

ಏರ್ಟೆಲ್ ಸ್ಮಾರ್ಟ್ಫೋನ್

ಏರ್ಟೆಲ್ ಸ್ಮಾರ್ಟ್ಫೋನ್

ಏರ್ಟೆಲ್ ಸ್ಮಾರ್ಟ್ಫೋನ್ ಬೆಲೆ ದೇಶದ ಅತಿದೊಡ್ಡ ಟೆಲಿಕಾಂ ಭಾರತೀ ಏರ್ಟೆಲ್ ಸಂಸ್ಥೆ ರೂ. 2,500ಕ್ಕೆ ಹೊಸ 4G ಸ್ಮಾರ್ಟ್ಫೋನ್ ಬಿಡುಗಡೆ ಮಾಡುತ್ತಿದೆ. ಅದು ಕೂಡ ಜಿಯೋ ಮತ್ತು ಐಡಿಯಾ ಕಂಪನಿಗಳ ಸ್ಪರ್ಧಾತ್ಮಕ ಬೆಲೆಯೊಂದಿಗೆ!! ರ್ಟೆಲ್ ಸ್ಮಾರ್ಟ್ಫೋನ್ ಅತಿ ಕಡಿಮೆ ಬೆಲೆ ರೂ. 2,500ಕ್ಕೆ ಸಿಗಲಿದ್ದು, ದೊಡ್ಡ ಸ್ಕ್ರೀನ್ ಮತ್ತು ಉತ್ತಮ ಗುಣಮಟ್ಟದ ಕ್ಯಾಮೆರಾ ಮತ್ತು ಉತ್ತಮ ಕಾರ್ಯಕ್ಷಮತೆಯ ಬ್ಯಾಟರಿ ಹೊಂದಿರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+