Englishहिन्दी മലയാളം தமிழ் తెలుగు

ಜಿಯೋ ಧಮಾಕಾ..! ಹೊಸ ಆಫರ್ ಸುರಿಮಳೆ... ಮುಂದಿನ ಪ್ಲಾನ್ ಗಳೇನು..?

Written By: Siddu
Subscribe to GoodReturns Kannada

ಜಿಯೋ ನಿನಗೆ ಸಾಟಿ ಇಲ್ಲ.. ಅರೆ ಹೊಯ್ ! ಅರೆ ಹೊಯ್ ! ಟುರ್ರಾ.... ಇದು ಸ್ನೇಹಿತರೊಬ್ಬರು ಜಿಯೋಗೆ ಹೋಲಿಕೆ ಮಾಡಿ ಹೇಳಿದ ಅಣ್ಣಾವ್ರ ಹಾಡು.

ಸದ್ಯಕ್ಕೆ ದೇಶದ ಟೆಲಿಕಾಂ ಲೋಕದಲ್ಲಿ ರಿಲಯನ್ಸ್ ಜಿಯೋ ಸದ್ದು ಜೋರಾಗಿದ್ದು, ಟೆಲಿಕಾಂ ಕಂಪನಿಗಳು ಇದರ ಮುಂದೆ ಮಂಕಾಗಿವೆ.! ಏಕೆಂದರೆ ಮುಖೇಶ್ ಅಂಬಾನಿ ಒಂದರ ಮೇಲೊಂದು ಹೊಸ ಹೊಸ ಆಫರ್ ಗಳ ಸುರಿಮಳೆ ಮಾಡ್ತಾನೆ ಇದಾರೆ... ಗ್ರಾಹಕರನ್ನು ತನ್ನೆಡೆಗೆ ಸೆಳೆಯುವಲ್ಲಿ ಯಶಸ್ವಿ ಆಗ್ತಾನೆ ಇದಾರೆ...! ಜಿಯೋ ಅಲೆಲೆಲೆ...! ಕೇವಲ 500 ರೂ.ಗೆ 4G ವೋಲ್ಟ್ ಸ್ಮಾರ್ಟ್ ಫೋನ್ !!

ಜುಲೈ 15ಕ್ಕೆ ಮುಕ್ತಾಯ, ಮುಂದೇನು?

ಜಿಯೋ ನೀಡುತ್ತಿರುವ ಸಮ್ಮರ್ ಸರ್ಫ್ರೈಸ್ ಮತ್ತು ಧನ್ ಧನಾ ಧನ್ ಆಫರ್ ಮುಕ್ತಾಯದ ಹಂತದಲ್ಲಿದೆ. ಜುಲೈ 15 ಕ್ಕೆ ಆಫರ್ ಗಳು ಕೊನೆಯಾಗಲಿದ್ದು, ಮುಂದೆ ಏನು? ಎಂಬ ಪ್ರಶ್ನೆ ಗ್ರಾಹಕರಲ್ಲಿತ್ತು. ಅದಕ್ಕೆ ಉತ್ತರವಾಗಿ ಜಿಯೋ ಇದೀಗ ಹೊಸ ಆಫರ್ ಗಳ ಘೋಷಣೆಯನ್ನು ಮಾಡಿದೆ. ಹಾಗಿದ್ದರೆ ಘೋಷಿಸಿರುವ ಆಫರ್ ಗಳೇನು? ಯಾವ ಆಫರ್ ನಲ್ಲಿ ಏನೇನು ಸೌಲಭ್ಯಗಳಿವೆ ಎಂಬುದನ್ನು ನೋಡೋಣ...

ರೂ. 149 ಆಫರ್

ಇನ್ನೂ ಕೆಲವೆ ದಿನಗಳಲ್ಲಿ ಸಮ್ಮರ್ ಸರ್ಫ್ರೈಸ್ ಮತ್ತು ಧನ್ ಧನಾ ಧನ್ ಆಫರ್ ಮುಗಿಯುತ್ತಿದ್ದಂತೆ ಗ್ರಾಹಕರಿಗೆ ಆಫರ್ ಧಮಾಕಾ ನೀಡಿದೆ..!
ರೂ. 149 ರೀಚಾರ್ಜ್ ಮಾಡಿದರೆ ಅನ್ ಲಿಮಿಟೆಡ್ ಕಾಲ್, 2GB ಡೇಟಾ ಮತ್ತು 300 ಎಸ್ಎಂಎಸ್ ಲಭ್ಯವಿದೆ. ಜತೆಗೆ ಒಂದು ತಿಂಗಳ ವ್ಯಾಲಿಡಿಟಿ ಇದೆ. ಪ್ರತಿ ತಿಂಗಳಿಗೆ 2GB ಡೇಟಾದಂತೆ ಹನ್ನೆರಡು ತಿಂಗಳು 24GB ಡೇಟಾ ಲಭ್ಯವಿದೆ.

ರೂ. 309 ಆಫರ್

ಜಿಯೋ ತನ್ನ ಗ್ರಾಹಕರಿಗೆ ಘೋಷಿಸಿರುವ ಪ್ರಮುಖ ಆಫರ್ ಗಳಲ್ಲಿ ರೂ. 309 ರ ಉತ್ತಮ ಆಫರ್ ಪ್ರಕಟಿಸಿದೆ. ಈ ಆಫರ್ ಮೂಲಕ ಗ್ರಾಹಕರು 2 ತಿಂಗಳು 1GB 4G ಡೇಟಾ ಹಾಗೂ ಇನ್ನಿತರ ಅನ್ ಲಿಮಿಟೆಡ್ ಸೇವೆಗಳಿವೆ. ಪ್ರತಿದಿನ 1GBಯಂತೆ 56 ದಿನಗಳವರೆಗೆ 56GB ಡೇಟಾ ಸೌಲಭ್ಯವಿದೆ.

ಜಿಯೋ ಧನ್ ಧನಾ ಧನ್ ಮುಂದುವರೆದ ಆಫರ್ ?

399 ರೂ. ಗಳಿಗೆ ಜಿಯೋ ಧನ್ ಧನಾ ಧನ್ ಆಫರ್ ಮುಂದುವರೆಯಲಿದೆ. ಮೂರು ತಿಂಗಳ ಅವಧಿಗೆ ಪೋಸ್ಟ್ ಪೇಡ್ ಗ್ರಾಹಕರಿಗೆ ಪ್ರತಿದಿನ 1GBಯಂತೆ 90GB ಸಿಗಲಿದೆ. ಇದು ಅನಿಯಮಿತ ಕರೆ, ಎಸ್ಟಿಡಿ, ರೋಮಿಂಗ್, ಎಸ್ಎಂಎಸ್ ಸೌಲಭ್ಯ ಒಳಗೊಂಡಿದೆ.
ಪ್ರಿಪೇಡ್ ಗ್ರಾಹಕರಿಗೆ ಪ್ರತಿದಿನ 1GBಯಂತೆ 84 ದಿನಗಳ ಅವಧಿಗೆ 84GB ಸಿಗಲಿದೆ.

ರೂ. 509 ಆಫರ್

ರೂ. 509 ರೂಪಾಯಿಗಳ ರೀಚಾರ್ಜ್ ನೊಂದಿಗೆ ಪ್ರತಿದಿನ 2GB ಡೇಟಾ, ಅನಿಯಮಿತ ಕರೆ, ಎಸ್ಎಂಎಸ್ ಸೌಲಭ್ಯ ಪಡೆಯಬಹುದು. 56 ದಿನಗಳ ಅವಧಿಗೆ ಪ್ರತಿದಿನದಂತೆ 112GB ಡೇಟಾ ಸಿಗಲಿದೆ.

ರೂ. 96 ಆಫರ್

ರೂ. 96 ರೀಚಾರ್ಜ್‌ ಮಾಡಿದರೆ ಅನಿಯಮಿತ ಕರೆ ಕಾಲ್, ಎಸ್‌ಎಂಎಸ್ ಸೌಲಭ್ಯ ಇದೆ. ಇದರೊಂದಿಗೆ ಪ್ರತಿದಿನ 1GBಯಂತೆ ಒಂದು ವಾರ 7GB ಡೇಟಾ ಸಿಗಲಿದೆ.

ರೂ. 999 ಆಫರ್

ಎರಡು ತಿಂಗಳ ಅವಧಿಗೆ ರೂ. 999 ರೀಚಾರ್ಜ್ ಮೂಲಕ
ಪ್ರತಿದಿನ 1GB ಡೆಟಾ, ಅನಿಯಮಿತ ಕರೆ, ಎಸ್ಎಂಎಸ್ ಸೌಲಭ್ಯವಿದ್ದು, 90 ದಿನಗಳವರೆಗೆ ವ್ಯಾಲಿಡಿಟಿ ಇದೆ.

ಇನ್ನಿತರ ಪ್ರಿಪೇಡ್ ಆಫರ್ ಗಳು

ರೂ. 1999 

155GB ಡೇಟಾದೊಂದಿಗೆ 120 ದಿನಗಳ ಅವಧಿ ಹೊಂದಿದೆ. ಜತೆಗೆ ಅನಿಯಮಿತ ಕರೆ, ಎಸ್ಟಿಡಿ, ರೋಮಿಂಗ್, ಎಸ್ಎಂಎಸ್ ಸೌಲಭ್ಯಗಳಿವೆ.
ರೂ. 4999
210 ದಿನಗಳ ಅವಧಿಯೊಂದಿಗೆ 380GB ಡೇಟಾ ಹಾಗೂ ಅನಿಯಮಿತ ಕರೆ, ಎಸ್ಟಿಡಿ, ರೋಮಿಂಗ್, ಎಸ್ಎಂಎಸ್ ಸೌಲಭ್ಯ ಒಳಗೊಂಡಿದೆ.
ರೂ. 9999
780GB ಡೇಟಾ, 390 ದಿನ ವ್ಯಾಲಿಡಿಟಿಯೊಂದಿಗೆ ಅನಿಯಮಿತ ಕರೆ, ಎಸ್ಟಿಡಿ, ರೋಮಿಂಗ್, ಎಸ್ಎಂಎಸ್ ಸೌಲಭ್ಯಗಳಿವೆ.

English summary

Reliance Jio Launches New Plans, Many news plans Continues

Reliance Jio has launched new plans for prepaid and postpaid users as the Jio Summer Surprise comes to an end.
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC