ಜಿಎಸ್ಟಿ ಎಫೆಕ್ಟ್: ದಿನನಿತ್ಯದ ಮನೆ ಸರಕುಗಳು ದುಬಾರಿ

ಸರಕು ಮತ್ತು ಸೇವಾ ತೆರಿಗೆ ಜಾರಿ ನಂತರ ದಿನನಿತ್ಯದ ಮನೆಯ ಖರ್ಚುವೆಚ್ಚಗಳು ಏರಿಕೆ ಆಗಿವೆ ಎಂಬುದು ಜನಸಾಮಾನ್ಯರ ಆರೋಪವಾಗಿದೆ ಎಂದು ಆನ್ಲೈನ್ ಸಮೀಕ್ಷೆಯೊಂದು ತಿಳಿಸಿದೆ.

ಸರಕು ಮತ್ತು ಸೇವಾ ತೆರಿಗೆ ಜಾರಿ ನಂತರ ದಿನನಿತ್ಯದ ಮನೆಯ ಖರ್ಚುವೆಚ್ಚಗಳು ಏರಿಕೆ ಆಗಿವೆಯೆಂದು ಜನಸಾಮಾನ್ಯರು ಆರೋಪ ಮಾಡಿದ್ದಾರೆಂದು ಆನ್ಲೈನ್ ಸಮೀಕ್ಷೆಯೊಂದು ತಿಳಿಸಿದೆ.

ಜಿಎಸ್ಟಿ ಎಫೆಕ್ಟ್: ದಿನನಿತ್ಯದ ಮನೆ ಸರಕುಗಳು ದುಬಾರಿ

ಜಿಎಸ್ಟಿ ಜಾರಿಯಿಂದ ಆಗಿರುವ ಪರಿಣಾಮ ಮತ್ತು ಜನರ ಅಭಿಪ್ರಾಯ ಪಡೆಯಲು ಈ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಯಲ್ಲಿ ಭಾಗಿಯಾದ ಶೇ. 54 ರಷ್ಟು ಜನರು ಜಿಎಸ್ಟಿಯಿಂದ ನಿತ್ಯದ ಖರ್ಚು ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸರಕು ಮತ್ತು ಸೇವಾ ತೆರಿಗೆ ಜಾರಿಗೆಯಾಗಿ ಎರಡು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ 40,000 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.

ಜಿಎಸ್ಟಿ ಜಾರಿ ಬಳಿಕ ದಿನಬಳಕೆ ಸರಕುಗಳ ಖರ್ಚು ಶೇ. 30 ರಷ್ಟು ಹೆಚ್ಚಳವಾಗಿದೆಯೆಂದು ಶೇ. 54 ರಷ್ಟು ಜನರು ಹೇಳಿದ್ದಾರೆ. ಆದರೆ ಶೇ. 6 ರಷ್ಟು ಜನರು ದಿನಬಳಕೆ ಖರ್ಚು ಕಡಿಮೆಯಾಗಿರುವುದಾಗಿ ತಿಳಿಸಿದ್ದಾರೆ ಎಂದು ಲೋಕಲ್ ಸರ್ಕಲ್ಸ್ ಸಮೀಕ್ಷೆ ವರದಿ ಮಾಡಿದೆ.
ಜಿಎಸ್ಟಿ ಜಾರಿ ಬಳಿಕ ಔಷಧವೂ ದುಬಾರಿಯಾಗಿದ್ದು, ಅಂಗಡಿಗಳಲ್ಲಿ MRP ಜೊತೆಗೆ ಜಿಎಸ್ಟಿ ಹೆಸರಲ್ಲಿ ಕೇಂದ್ರ ಜಿಎಸ್ಟಿ, ರಾಜ್ಯ ಜಿಎಸ್ಟಿ ಅಡಿ ಹೆಚ್ಚುವರಿ ಹಣ ಪಡೆಯಲಾಗುತ್ತಿದೆ ಎಂದು ಜನ ಹೇಳಿದ್ದಾರೆ.

ನೋಟು ನಿಷೇಧ ಮತ್ತು ಜಿಎಸ್ಟಿ ಜಾರಿ ದೇಶದ ಆರ್ಥಿಕ ಅಭಿವೃದ್ಧಿಗೆ ದೊಡ್ಡ ತಲೆನೋವಾಗಿದ್ದು, ಜಿಡಿಪಿ ಕುಸಿತ ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+