For Quick Alerts
ALLOW NOTIFICATIONS  
For Daily Alerts

ಎಸ್ಬಿಐ ಖಾತೆಗಳಲ್ಲಿ ಕನಿಷ್ಠ ಮೊತ್ತ, ದಂಡ, ವಿನಾಯಿತಿ ಪರಾಮರ್ಶೆ, ನಿಮಗೆಷ್ಟು ಗೊತ್ತು?

ದೇಶದ ದೊಡ್ಡ ಬ್ಯಾಂಕು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಸರಾಸರಿ ಮೊತ್ತ ಕಾಯ್ದುಕೊಳ್ಳಲು ವಿಫಲವಾಗುವ ಗ್ರಾಹಕರಿಂದ ವಸೂಲಿ ಮಾಡುತ್ತಿರುವ ಶುಲ್ಕದ ಬಗ್ಗೆ ಪರಾಮರ್ಶೆ ನಡೆಸುತ್ತಿರುವುದಾಗಿ ಹೇಳಿದೆ.

By Siddu
|

ದೇಶದ ದೊಡ್ಡ ಬ್ಯಾಂಕು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಸರಾಸರಿ ಮೊತ್ತ ಕಾಯ್ದುಕೊಳ್ಳಲು ವಿಫಲವಾಗುವ ಗ್ರಾಹಕರಿಂದ ವಸೂಲಿ ಮಾಡುತ್ತಿರುವ ಶುಲ್ಕದ ಬಗ್ಗೆ ಪರಾಮರ್ಶೆ ನಡೆಸುತ್ತಿರುವುದಾಗಿ ಹೇಳಿದೆ.

ಎಸ್ಬಿಐ ಕನಿಷ್ಠ ಮೊತ್ತ ಕಾಪಾಡಿಕೊಳ್ಳದಿದ್ದ ಗ್ರಾಹಕರ ಉಳಿತಾಯ ಖಾತೆಗಳಿಗೆ ದಂಡವನ್ನು ವಿಧಿಸಲಾಗುತಿತ್ತು. ಪ್ರತಿದಿನ 100 ಹೂಡಿಕೆ ಮಾಡಿ ಕೋಟ್ಯಾಧಿಪತಿ ಆಗೋದು ಹೇಗೆ? ತಪ್ಪದೆ ಓದಿ.

ಗ್ರಾಹಕರ ವ್ಯಾಪಕ ವಿರೋಧ

ಗ್ರಾಹಕರ ವ್ಯಾಪಕ ವಿರೋಧ

ಎಸ್ಬಿಐ ವಿಧಿಸುತ್ತಿದ್ದ ಶುಲ್ಕದ ಬಗ್ಗೆ ಗ್ರಾಹಕರಿಂದ ಆಕ್ಷೇಪ, ದೂರುಗಳು ಕೇಳಿ ಬಂದಿದ್ದರಿಂದ ಶುಲ್ಕ ವಸೂಲಿ ಪ್ರಕ್ರಿಯೆ ಮರು ಪರಿಶೀಲನೆ ಮಾಡಲಾಗುತ್ತಿದೆ. ಮೆಟ್ರೋ ನಗರಗಳಲ್ಲಿ ಕನಿಷ್ಠ ಮೊತ್ತ ರೂ. 5000 ನಿಗದಿಪಡಿಸಲಾಗಿದ್ದು, ಕನಿಷ್ಠ ಮೊತ್ತ ಕಾಪಾಡಿಕೊಳ್ಳದ ಖಾತೆಗಳಿಗೆ ಎಸ್ಬಿಐ ದಂಡ ವಿಧಿಸುತ್ತಿತ್ತು.

ಶುಲ್ಕ ವಿನಾಯಿತಿ

ಶುಲ್ಕ ವಿನಾಯಿತಿ

ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಈ ಶುಲ್ಕದಿಂದ ವಿನಾಯಿತಿ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಎಸ್ಬಿಐ ನಿರ್ದೇಶಕ (ರಾಷ್ಟ್ರೀಯ ಬ್ಯಾಂಕಿಂಗ್‌ ಗ್ರೂಪ್‌) ರಜನೀಶ್ ಕುಮಾರ್‌ ತಿಳಿಸಿದ್ದಾರೆ. ಎಸ್ಬಿಐ ನಲ್ಲಿ 40 ಕೋಟಿ ಉಳಿತಾಯ ಖಾತೆಗಳಿದ್ದು, 13 ಕೋಟಿ ಮೂಲ ಠೇವಣಿ ಉಳಿತಾಯ ಖಾತೆಗಳಾಗಿವೆ. ಇವುಗಳಿಗೆ ಮಿನಿಮಮ್ ಬ್ಯಾಲೆನ್ಸ್ ನಿಯಮ ಅನ್ವಯವಾಗುವುದಿಲ್ಲ. ಬೇಸಿಕ್ ಉಳಿತಾಯ ಬ್ಯಾಂಕ್‌ ಠೇವಣಿ (ಬಿಎಸ್ಬಿಡಿ) ಮತ್ತು ಪ್ರಧಾನ ಮಂತ್ರಿ ಜನ ಧನ ಖಾತೆಗಳನ್ನು (ಪಿಎಂಜೆಡಿವೈ) ಕನಿಷ್ಠ ಮೊತ್ತ ನಿಬಂಧನೆಯಿಂದ ವಿನಾಯಿತಿ ನೀಡಲಾಗಿದೆ.

ಸಂಘಟನೆಗಳ ಒತ್ತಾಯ
 

ಸಂಘಟನೆಗಳ ಒತ್ತಾಯ

ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಹಕರ ಮೇಲೆ ಹೇರುತ್ತಿರುವ ದುಬಾರಿ ಶುಲ್ಕ ರದ್ದುಪಡಿಸಬೇಕು ಎಂದು ಬ್ಯಾಂಕ್‌ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ(ಯುಎಫ್ಬಿಯು) ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರನ್ನು ಒತ್ತಾಯಿಸಿದೆ.

ದಂಡದ ಮೊತ್ತ

ದಂಡದ ಮೊತ್ತ

ಎಸ್ಬಿಐ ಬ್ಯಾಂಕು ಪರಿಷ್ಕರಿಸಿರುವ ಸೇವಾ ಶುಲ್ಕಗಳಿಗೆ ಅನುಗುಣವಾಗಿ ಉಳಿತಾಯ ಖಾತೆಯಲ್ಲಿ ಕನಿಷ್ಠ ಸರಾಸರಿ ಮೊತ್ತ ಕಾಯ್ದುಕೊಳ್ಳದ ಗ್ರಾಹಕರಿಂದ ರೂ. 100 ಹಾಗೂ ಜಿಎಸ್ಟಿ ಮೊತ್ತ ದಂಡದ ರೂಪದಲ್ಲಿ ವಸೂಲಿ ಮಾಡಲಾಗುತ್ತಿದೆ.

ಕಾಯ್ದುಕೊಳ್ಳಬೇಕಾದ ಕನಿಷ್ಟ ಮೊತ್ತ

ಕಾಯ್ದುಕೊಳ್ಳಬೇಕಾದ ಕನಿಷ್ಟ ಮೊತ್ತ

ಮಹಾನಗರಗಳ ಎಸ್ಬಿಐ ಖಾತೆಗಳಲ್ಲಿ ಕಾಯ್ದಿರಿಸಿಕೊಳ್ಳಬೇಕಾದ ತಿಂಗಳ ಸರಾಸರಿ ಮೊತ್ತ (ಎಂಎಬಿ) ರೂ. 5,000ಕ್ಕೆ ನಿಗದಿಪಡಿಸಲಾಗಿದೆ. ಖಾತೆಯಲ್ಲಿ ಮೊತ್ತ ತಿಂಗಳ ಸರಾಸರಿ ಮೊತ್ತಕ್ಕಿಂತ ಕಡಿಮೆಯಾದರೆ ರೂ. 100 ಹಾಗು ಜಿಎಸ್ಟಿ ಶೇ. 50ರಂತೆ ರೂ. 50 ವಸೂಲಿ ಮಾಡಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ತಿಂಗಳ ಸರಾಸರಿ ಮೊತ್ತ ರೂ. 1000ಕ್ಕೆ ನಿಗದಿಪಡಿಸಲಾಗಿದ್ದು, ಕಡಿಮೆ ಮೊತ್ತ ಉಳಿಸಿಕೊಂಡರೆ ರೂ. 20-50 ಹಾಗು ಜಿಎಸ್ಟಿ ಮೊತ್ತ ದಂಡದ ರೂಪದಲ್ಲಿ ಪಾವತಿಸಬೇಕಾಗುತ್ತದೆ.

Read more about: sbi finance news money bank savings taxes
English summary

SBI Reviewing Minimum Balance Charges For Savings Bank Accounts

SBI said it is reviewing charges for certain categories of accounts for non-maintenance of monthly average balance (MAB) after receiving feedback from customers.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X