Englishहिन्दी മലയാളം தமிழ் తెలుగు

ಪ್ರತಿದಿನ 100 ಹೂಡಿಕೆ ಮಾಡಿ ಕೋಟ್ಯಾಧಿಪತಿ ಆಗೋದು ಹೇಗೆ? ತಪ್ಪದೆ ಓದಿ..

Written By: Siddu
Subscribe to GoodReturns Kannada

ಕೋಟ್ಯಾಧಿಪತಿ ಆಗುವುದು ಯಾರಿಗೆ ತಾನೇ ಇಷ್ಟವಿಲ್ಲ. ಒಂದಿಲ್ಲ ಒಂದು ದಿನ ನಾನು ಕೋಟ್ಯಾಧಿಪತಿ ಆಗಿಯೇ ಆಗುತ್ತೇನೆ ಅನ್ನೋರು ನಮ್ಮಲ್ಲಿ ತುಂಬಾ ಜನರಿದ್ದಾರೆ. ಹಾಗಿದ್ದರೆ ಕೇವಲ 100 ರೂಪಾಯಿ ಹೂಡಿಕೆ ಮಾಡುವ ಮೂಲಕ ಕೋಟ್ಯಾಧಿಪತಿ ಆಗೋದು ಹೇಗೆ ಸಾಧ್ಯ?

ವಸ್ತುಗಳ ಬೆಲೆ ಗಗನಕ್ಕೆರಿರುವ ಈ ದಿನಗಳಲ್ಲಿ ನೂರು ರೂಪಾಯಿಗೆ ಏನು ಖರೀದಿಸಬಹುದು? ಕಾಫಿ ಅಂಗಡಿಯಲ್ಲಿ ಒಂದು ಕಪ್ ಕಾಫಿ ಕುಡಿಬಹುದು ಅನ್ನಬಹುದು! ಇದು ನಂಬಲರ್ಹವಾದದ್ದು? ಆದರೆ ನಿಮ್ಮ ಉತ್ತರವೂ ಕೂಡ ಹೌದು ಅಂತಾದರೆ ನಿಮ್ಮ ಕಲ್ಪನೆ ತಪ್ಪು.
ಆದರೆ ಇಲ್ಲಿ ನಮ್ಮ ವಿಚಾರ ದೀರ್ಘಾವಧಿ ಹೂಡಿಕೆ ಮಾಡುವುದರ ಮೂಲಕ ಸಂಪತ್ತು ಅಥವಾ ಹಣವನ್ನು ಹೆಚ್ಚಿಸುವುದು ಹೇಗೆ. ಅದು ಕೂಡ ಉತ್ತಮ ವಾರ್ಷಿಕ ರಿಟರ್ನ್ ನೊಂದಿಗೆ! ಕೋಟ್ಯಾಧಿಪತಿ ಆಗುವುದು ಹೇಗೆ ಗೊತ್ತೆ?

ಪ್ರತಿದಿನ 100 ರೂಪಾಯಿ ಉಳಿತಾಯ ಮಾಡಿ ಕೋಟ್ಯಾಧಿಪತಿ (Crorepati) ಆಗುವುದು ಹೇಗೆ ಅನ್ನುವ ಕುತೂಹಲಕಾರಿ ಮಾಹಿತಿ ಇಲ್ಲಿ ವಿವರಿಸಲಾಗಿದೆ. ಮುಂದೆ ಓದಿ..

ಕೋಷ್ಟಕ ಗಮನಿಸಿ

ನೀವು ಈ ಕೋಷ್ಟಕವನ್ನು ಸರಳೀಕೃತ ಎಂದು ಕರೆಯಬಹುದು. ಆದರೆ ಕೆಳಗೆ ನೀಡಲಾದ ಎರಡು ಪ್ರಶ್ನೆಗಳಿಗೆ ನೀವು ಧನಾತ್ಮಕವಾಗಿ ಉತ್ತರಿಸಿದರೆ ಮಾತ್ರ ಕೋಷ್ಟಕದಲ್ಲಿನ ಲೆಕ್ಕಾಚಾರಗಳು ಸಂಭವನೀಯವಾಗಿರುತ್ತವೆ.

 

ತಿಂಗಳಿಗೆ ಎಷ್ಟು ಉಳಿತಾಯ?

1. ಮೇಲಿನ ಕೋಷ್ಟಕದಲ್ಲಿ ತಿಳಿಸಿರುವಂತೆ ಒಂದು ತಿಂಗಳಿಗೆ ರೂ. 3,000ಗಳನ್ನು ಉಳಿತಾಯ ನನ್ನಿಂದ ಸಾಧ್ಯವೇ?
2. ಪ್ರತಿ ತಿಂಗಳಿಗೆ ರೂ. 3,000ದಂತೆ 30 ವರ್ಷ ಹೂಡಿಕೆ ಮಾಡಬಹುದೇ? ಈ ಎರಡು ಪ್ರಶ್ನೆಗಳಿಗೆ ನಮ್ಮ ಬಳಿ ಸಕಾರಾತ್ಮಕ ಉತ್ತರ ಇರಬೇಕಾಗುತ್ತದೆ. ಶೂನ್ಯ ಬಂಡವಾಳದಲ್ಲಿ ನಡೆಸಬಹುದಾದ 11 ಉದ್ಯಮಗಳು

ವಾರ್ಷಿಕವಾಗಿ 12% ರಿಟರ್ನ್

30 ವರ್ಷಗಳ ಅವಧಿಗೆ ವಾರ್ಷಿಕವಾಗಿ ಒಟ್ಟು ಶೇ. 12ರಷ್ಟು ಆದಾಯವನ್ನು ನೀವು ಗಳಿಸಬಹುದಾಗಿದೆ. ಒಂದು ವೇಳೆ ನೀವು ಇದನ್ನು ನಿರಾಕರಿಸಿದರೆ/ಅಲ್ಲಗಳೆದರೆ ನಾವು ನಿಮ್ಮನ್ನು ದೂಷಿಸುವುದಿಲ್ಲ. ಆದರೆ ನಿಮ್ಮ ಉಳಿತಾಯದ ಮೇಲೆ ಶೇ. 12ರಷ್ಟು ರಿಟರ್ನ್ ಪಡೆಯಬಹುದಾಗಿದೆ.

ಮಾಸಿಕ ರೂ. 3,000 ಉಳಿಸಬಹುದೇ?

ನಿಮ್ಮನ್ನು ನೀವೇ ಪ್ರಶ್ನೆ ಹಾಕಿಕೊಳ್ಳಿ. ನನ್ನಿಂದ ಪ್ರತಿ ತಿಂಗಳಿಗೆ 3,000 ರೂಪಾಯಿಗಳನ್ನು ಉಳಿಸಲು ಆಗಬಹುದೇ?
ಈ ಲೇಖನ ಓದುತ್ತಿರುವ ಹೆಚ್ಚಿನ ಓದುಗರ ಕನಿಷ್ಠ ಮಾಸಿಕ ಸಂಬಳ ರೂ. 20,000 ಎಂದು ನಾನು ಊಹಿಸಿದ್ದೇನೆ.
ಇದು ನಿಜವಾಗಿದ್ದರೆ ರೂ. 3000 ನಿಮ್ಮ ಸಂಬಳದ ಸರಾಸರಿ ಕೇವಲ ಶೇ. 12.5ರಷ್ಟು ಭಾಗವಾಗುತ್ತದೆ. ಹೀಗಾಗಿ ಉಳಿತಾಯ ಮಾಡುವುದು ಕಷ್ಟವಲ್ಲ.

30 ವರ್ಷ ಹೂಡಿಕೆ ಮಾಡಲು ಸಾಧ್ಯವೆ?

ಇನ್ನೊಂದು ಪ್ರಶ್ನೆ ನಿಮ್ಮನ್ನು ಕೇಳಿಕೊಳ್ಳಿ. ನಾನು ಮುಂದಿನ 30 ವರ್ಷಗಳ ಕಾಲ ಹೂಡಿಕೆ ಮಾಡಬಹುದೇ? ಹೆಚ್ಚಿನ ವರ್ಷಗಳು ನೀವು ಹೂಡಿಕೆ ಮಾಡಿದರೆ ಆದಾಯ ಉತ್ತಮಗೊಳಿಸಬಹುದು. ಹೂಡಿಕೆ ಮಾಡುವಾಗ ಸಮಯವೇ ನಿಮ್ಮ ಉತ್ತಮ ಸ್ನೇಹಿತ. ಹೆಚ್ಚಿನ ಸಮಯ ಹೂಡಿಕೆ ಮಾಡಿದರೆ ಹೆಚ್ಚು ಲಾಭ.

ಕೋಷ್ಟಕದ ಬಗ್ಗೆ ಚರ್ಚಿಸೋಣ

ಮೇಲೇ ಕೋಷ್ಟಕದ ಉದಾಹರಣೆಯ ಬಗ್ಗೆ ಮಾತನಾಡೋಣ. ನಿಮ್ಮ ಹೂಡಿಕೆಯು ತಿಂಗಳಿಗೆ ರೂ. 3,000 ಅಂತಾದರೆ ಒಂದು ವರ್ಷಕ್ಕೆ ರೂ. 36,000 ಆಗುತ್ತದೆ. 30 ವರ್ಷಗಳವರೆಗೆ ನೀವು ರೂ 36,000x30 = ರೂ. 10.80 ಲಕ್ಷವನ್ನು ಹೂಡಿದ್ದೀರಿ ಅಂತಾಯಿತು. ರೂ. 10.80 ಲಕ್ಷ ಮೊತ್ತ ಮೂವತ್ತು ವರ್ಷಗಳಲ್ಲಿ ರೂ. 1.05 ಕೋಟಿ ಗೆ ಏರಿದೆ. ನಿಮ್ಮ ಮೂಲ ಹೂಡಿಕೆಯ 10 ಪಟ್ಟು ಹೆಚ್ಚಾಗುತ್ತದೆ. ಇದು ಸಂಯೋಜನೆಯ(compounding) ಶಕ್ತಿಯಾಗಿದೆ!

 

12% ವಾರ್ಷಿಕ ಲಾಭ ಪಡೆಯೋದು ಹೇಗೆ?

ಹಾಗಿದ್ದರೆ ಶೇ.12ರಷ್ಟು ವಾರ್ಷಿಕ ಲಾಭವನ್ನು ನಾನು ಎಲ್ಲಿ ಪಡೆಯುತ್ತೇನೆ?
ಬ್ಯಾಂಕ್ ಎಫ್ಡಿ (FD)ಗಳಲ್ಲಿ ಖಂಡಿತವಾಗಿಯೂ ಇಲ್ಲ. ಅಂತಹ ಆದಾಯವು ಈಕ್ವಿಟಿ ಮ್ಯೂಚುಯಲ್ ಫಂಡ್ ಅಥವಾ ರಿಯಲ್ ಎಸ್ಟೇಟ್ ಗಳಿಂದ ಮಾತ್ರ ಬರಬಹುದು.
ರಿಯಲ್ ಎಸ್ಟೇಟ್ ಮೂಲಕ ನೀವು ಪ್ರತಿ ತಿಂಗಳು ಹೂಡಿಕೆ ಮಾಡುವ ರೂ. 3,000 ಗೆ ಒಂದು ಚದರ ಅಡಿ ಕೂಡ ಪಡೆಯಲು ಸಾಧ್ಯವಿಲ್ಲ. ಇದನ್ನು ಬಿಟ್ಟುಬಿಡೋಣ.
ನಿಮಗೆ ಈಗ ಉಳಿದಿರುವ ಏಕೈಕ ಆಯ್ಕೆ ಈಕ್ವಿಟಿ ಮ್ಯೂಚುಯಲ್ ಫಂಡ್ ಗಳು. ಸ್ಟಾಕ್ ಮಾರುಕಟ್ಟೆ, ಸರ್ಕಾರಿ ಬಾಂಡ್ ಗಳು ಮತ್ತು ಇತರ ಉತ್ತಮ ರಿಟರ್ನ್ ನೀಡುವ ಸುರಕ್ಷಿತ ವಿಧಾನಗಳಲ್ಲಿ ಹೂಡಿಕೆ ಮಾಡಬೇಕು. ನಿಮ್ಮ ಹೂಡಿಕೆಯ ಅಪಾಯಗಳನ್ನು ಕಡಿಮೆಗೊಳಿಸಿ, ಸುರಕ್ಷತೆ ಜೊತೆಗೆ ಉತ್ತಮ ಆದಾಯ ಕೊಡುವಂತಾಗಬೇಕು.

ಕೋಷ್ಟಕ ಗಮನಿಸಿ

ಈ ಮೇಲಿನ ಕೋಷ್ಟಕದಲ್ಲಿ ಈಕ್ವಿಟಿ ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿದರೆ ಆದಾಯ ಹೇಗೆ ಮತ್ತು ಎಷ್ಟು ಶೇ. ರಿಟರ್ನ್ ಬರುತ್ತದೆ ಎಂಬುದನ್ನು ವಿವರಿಸಲಾಗಿದೆ.

ಉಳಿತಾಕ್ಕೆ ಪ್ರಯತ್ನ,ರಿಸ್ಕ್, ಕೇರ್, ದೃಢನಿರ್ಧಾರ ಬೇಕು

ಹೌದು. ನಾನು ಉಳಿತಾಯ ಮಾಡುತ್ತೇನೆ ಅಂತಾ ಹೇಳಿ ಸಮ್ಮನೆ ಕುಳಿತುಕೊಳ್ಳುವುದರಿಂದ ಏನು ಸಾಧ್ಯವಿಲ್ಲ. ಈ ಸಾಧನೆ ಮುಟ್ಟಲು ದೃಢ ನಿರ್ಧಾರ ತೆಗೆದುಕೊಳ್ಳಬೇಕು. ರಿಸ್ಕ್ ಜತೆ ಕೇರ್ ತೆಗೆದುಕೊಳ್ಳಲು ಮುಂದಾಗಬೇಕು. ಅಂದರೆ ಪ್ರತಿ ತಿಂಗಳು ರೂ. 3 ಸಾವಿರ 30 ವರ್ಷಗಳವರೆಗೆ ಹೂಡಿಕೆ ಮಾಡಬೇಕು. ಆಗ ಮಾತ್ರ ಶೇ. 12 ರಷ್ಟು ವಾರ್ಷಿಕ ದರದ (compounded annual rate) ಮೂಲಕ ರೂ. 1 ಕೋಟಿ ತಲುಪಲು ಸಾಧ್ಯವಾಗುತ್ತದೆ.(ಮೇಲಿನ ಕೋಷ್ಟಕದಲ್ಲಿ ತೋರಿಸಿರುವಂತೆ.

ನೆನಪಿಡಿ ಎಲ್ಲವೂ ಸಾಧ್ಯ!

ನೆನಪಿಡಿ, ನಾವು ಪ್ರಯತ್ನ ಮಾಡುವವರೆಗೆ, ಕಾರ್ಯರೂಪಕ್ಕೆ ತರುವವರೆಗೆ ಇದು ಅಸಾಧ್ಯವೆನಿಸುತ್ತದೆ. ಈ ತಂತ್ರ ಖಂಡಿತವಾಗಿ ನಿಮನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ಸಹಾಯ ಮಾಡುತ್ತದೆ. ನಿವೃತ್ತಿ ಜೀವನ ಮತ್ತು ಉನ್ನತ ಹಣಕಾಸು ಗುರಿಗಳಿಗಾಗಿ ಪ್ರಯತ್ನ ನಿಮ್ಮದಾಗಿರಲಿ. ಜತೆಗೆ ಎಲ್ಲರೂ ಕೋಟ್ಯಾಧಿಪತಿಗಳಾಗಲು ಪ್ರಯತ್ನಿಸಿ.

English summary

Invest Rs 100 every day and become a Crorepati

Investment of Rs 3,000 per month would mean Rs 36,000 per year and for 30 years you would have invested Rs 36,000 * 30 = Rs 10.80 lakh. This would have grown to Rs 1.05 crore.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns