ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್: 90% ಡಿಸ್ಕೌಂಟ್! ಮತ್ತೇನಿದೆ ಆಫರ್?

ಫ್ಲಿಪ್ಕಾರ್ಟ್ ನಲ್ಲಿ ಮತ್ತೆ ಆಫರ್ ಗಳ ಸುರಿಮಳೆ! ಶೇ. 90ರವರೆಗೆ ರಿಯಾಯಿತಿ ಆಫರ್!!ಸೆಪ್ಟಂಬರ್ 20 ರಿಂದ 24 ವರೆಗೆ ಫ್ಲಿಪ್ಕಾರ್ಟ್ 'ಬಿಗ್ ಬಿಲಿಯನ್ ಡೇ ಸೇಲ್' ಆರಂಭವಾಗುತ್ತಿದೆ...

ಫ್ಲಿಪ್ಕಾರ್ಟ್ ನಲ್ಲಿ ಮತ್ತೆ ಆಫರ್ ಗಳ ಸುರಿಮಳೆ..! ಶೇ. 90ರವರೆಗೆ ರಿಯಾಯಿತಿ ಆಫರ್!!

ಸೆಪ್ಟಂಬರ್ 20 ರಿಂದ 24 ವರೆಗೆ ಫ್ಲಿಪ್ಕಾರ್ಟ್ 'ಬಿಗ್ ಬಿಲಿಯನ್ ಡೇ ಸೇಲ್' ಆರಂಭವಾಗುತ್ತಿದೆ... ಈ ಬಾರಿ ಗ್ರಾಹಕರಿಗೆ ಬಿಲ್ ಪಾವತಿ ಮಾಡಲು ಹಲವಾರು ಆಯ್ಕೆಗಳು ಲಭ್ಯವಿವೆ ಎಂದು ಕಂಪನಿ ಹೇಳಿದೆ.

90% ರಿಯಾಯಿತಿ!

90% ರಿಯಾಯಿತಿ!

ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ಸ್ಮಾರ್ಟ್ಫೋನ್, ಟಿವಿ ಮತ್ತು ರೆಫ್ರಿಜರೇಟರ್ ಮೇಲೆ ಶೇ. 90 ರವರೆಗೆ ರಿಯಾಯಿತಿ ಆಫರ್ ಸಿಗಲಿದೆ. ಫ್ಯಾಷನ್, ಆಕ್ಸೆಸರಿಸ್ ಮತ್ತು ಪೀಠೋಪಕರಣಗಳ ಮೇಲೂ ರಿಯಾಯಿತಿ ನೀಡುವುದಾಗಿ ಫ್ಲಿಪ್ಕಾರ್ಟ್ ಪ್ರಕಟಿಸಿದೆ.

ಇಎಂಐ ವೆಚ್ಚ ಇಲ್ಲ

ಇಎಂಐ ವೆಚ್ಚ ಇಲ್ಲ

ಇಎಂಐ ಪಾವತಿ ವಿಧಾನ ಒಂದು ರೀತಿಯಲ್ಲಿ ಬಡ್ಡಿ ರಹಿತ ಸಾಲವಾಗಿದ್ದು, ವೆಚ್ಚ ರಹಿತವಾದುದ್ದಾಗಿದೆ. ಮೊದಲನೆದಾಗಿ ಗ್ರಾಹಕರು ಆನ್ಲೈನ್ ಶಾಪಿಂಗ್ ಗಾಗಿ ಪ್ರೀ ಅಪ್ರೂವ್ಡ್ ಲೋನ್ ಕಾರ್ಡ್ ಪಡೆಯಬೇಕು. ಇದಕ್ಕಾಗಿ ಬಜಾಜ್ ಫೈನ್ ಸರ್ವ್ ಜೊತೆಗೆ ಫ್ಲಿಪ್ಕಾರ್ಟ್ ಪಾಲುದಾರಿಕೆ ಮಾಡಿಕೊಂಡಿದೆ. ರೂ. 349 ಕೊಟ್ಟು ಕಾರ್ಡ್ ಖರೀದಿಸಬೇಕು. ವಾರ್ಷಿಕ ನವೀಕರಣ ಶುಲ್ಕ ರೂ. 99 ಇರುತ್ತದೆ.

ಕಾರ್ಡ್ ಪಡೆಯೋದು ಹೇಗೆ?

ಕಾರ್ಡ್ ಪಡೆಯೋದು ಹೇಗೆ?

ಕಾರ್ಡ್ ಪಡೆಯಲು ನಿಮ್ಮ ಗುರುತಿನ ಚೀಟಿ, ಫೋಟೋ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ನೀಡಬೇಕಾಗುತ್ತದೆ. ಕಾರ್ಡ್ ಸಿಕ್ಕ ತಕ್ಷಣ ಶಾಪಿಂಗ್ ಆರಂಭಿಸಬಹುದು. ಇಎಂಐ ವಿಧಾನ ಬಳಸಬಹುದು. ಒಂದು ವರ್ಷದವರೆಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಫ್ಲಿಪ್ಕಾರ್ಟ್ ಮೊಬೈಲ್ ಆಪ್ ಮೂಲಕ ಖರೀದಿಗೆ ಮಾತ್ರ ಇದು ಅನ್ವಯವಾಗಲಿದ್ದು, ಮೊಬೈಲ್ ವೆಬ್ಸೈಟ್ ಅಥವಾ ಡೆಸ್ಕ್ ಟಾಪ್ ಮೂಲಕ ಮಾಡಿದ ಖರೀದಿಗೆ ಅನ್ವಯಿಸುವುದಿಲ್ಲ.

ಎಸ್ಬಿಐ ಕಾರ್ಡ್ ಮೇಲೆ ಡಿಸ್ಕೌಂಟ್

ಎಸ್ಬಿಐ ಕಾರ್ಡ್ ಮೇಲೆ ಡಿಸ್ಕೌಂಟ್

ಎಸ್ಬಿಐ ಬ್ಯಾಂಕಿನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳ ಮೇಲೆ ಫ್ಲಿಪ್ಕಾರ್ಟ್ ಹೆಚ್ಚುವರಿ ರಿಯಾಯಿತಿ ನೀಡುತ್ತಿದೆ. ಕನಿಷ್ಠ ರೂ. 5999 ಬೆಲೆಯ ವಸ್ತುಗಳ ಖರೀದಿಗೆ ಮಾತ್ರ ಇದು ಅನ್ವಯವಾಗುತ್ತದೆ. ಒಬ್ಬರು ಗರಿಷ್ಠ ರಿಯಾಯಿತಿ ರೂ. 1500ವರೆಗೆ ಪಡೆಯಬಹುದು. ಗಿಪ್ಟ್ ವೋಚರ್ ಗಳಿಗೆ ಇದು ಅನ್ವಯಿಸುವುದಿಲ್ಲ.

ಈಗ ಖರೀದಿಸಿ, ನಂತರ ಪಾವತಿಸಿ

ಈಗ ಖರೀದಿಸಿ, ನಂತರ ಪಾವತಿಸಿ

ಫ್ಲಿಪ್ಕಾರ್ಟ್ ಆಪ್ ಮೂಲಕ ಖರೀದಿ ಮಾಡುವ ಗ್ರಾಹಕರಿಗೆ ಈ ಸೌಲಭ್ಯ ನೀಡುತ್ತಿದೆ. ಆಪ್ ನ 'ಮೈ ಅಕೌಂಟ್ ಸೆಕ್ಷನ್' ನಲ್ಲಿ ನಿಮಗೆ ಈ ಆಪ್ಷನ್ ಸಿಗುತ್ತದೆ. ಗ್ರಾಹಕರು ಬುಕ್ ಮಾಡುವ ಉತ್ಪನ್ನ ಹಣ ಪಾವತಿಗೂ ಮುನ್ನವೇ ಡೆಲಿವರಿ ಮಾಡಲಾಗುತ್ತದೆ. ಆ ಮೊತ್ತದ ಬಿಲ್ ಪ್ರತಿ ತಿಂಗಳು 1ನೇ ತಾರೀಖಿಗೆ ಕಳಿಸಲಾಗುತ್ತದೆ. ದಿನಾಂಕ 10ರ ಒಳಗಾಗಿ ಹಣ ಪಾವತಿಸಬೇಕು. ಇಲ್ಲದೇ ಇದ್ದಲ್ಲಿ ಔಟ್ ಸ್ಟ್ಯಾಂಡಿಂಗ್ ಮೊತ್ತಕ್ಕೆ ಅನುಗುಣವಾಗಿ ದಂಡ ವಿಧಿಸಲಾಗುತ್ತದೆ.

ಬೈ ಬ್ಯಾಕ್ ಗ್ಯಾರಂಟಿ (Buy-back guarantee)

ಬೈ ಬ್ಯಾಕ್ ಗ್ಯಾರಂಟಿ (Buy-back guarantee)

ಬೈ ಬ್ಯಾಕ್ ಗ್ಯಾರಂಟಿ ಇದು ಬಿಗ್ ಸೇಲ್ ಮೇಳದ ಇನ್ನೊಂದು ಆಫರ್ ಆಗಿದ್ದು, ವಿವಿಧ ಫೋನ್ ಗಳ ಮೇಲೆ ನೀಡಲಾಗಿದೆ. ಗ್ರಾಹಕರು ತಮ್ಮ ಹಳೆಯ ಡಿವೈಸ್ ಗಳನ್ನು ನಿರ್ದಿಷ್ಟ ಬೆಲೆಗೆ ಮಾರಾಟ ಮಾಡಬಹುದು. ಹೊಸ ಫೋನ್ ಖರೀದಿಸುವ ಮೊತ್ತದಲ್ಲಿ ಅದನ್ನು ಕಡಿತ ಮಾಡಲಾಗುತ್ತದೆ. ಆದರೆ ಗ್ಯಾರಂಟಿ ಮಾತ್ರ ಸಿಮೀತ ಅವಧಿಯವರೆಗೆ ಇರುತ್ತದೆ. 6-8 ತಿಂಗಳು ಅಥವಾ 9-12 ತಿಂಗಳು ಇರಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+