ಇನ್ಫೋಸಿಸ್ ಉಪಾಧ್ಯಕ್ಷ ಸಂಜಯ್ ರಾಜಗೋಪಾಲನ್ ರಾಜೀನಾಮೆ
ದೇಶದ ಪ್ರಮುಖ ಮಾಹಿತಿ ತಂತ್ರಜ್ಞಾನ (information technology) ದೈತ್ಯ ಸಂಸ್ಥೆ ಇನ್ಫೊಸಿಸ್ ನ ಹಿರಿಯ ಉಪಾಧ್ಯಕ್ಷ ಸಂಜಯ್ ರಾಜಗೋಪಾಲನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ದೇಶದ ಪ್ರಮುಖ ಮಾಹಿತಿ ತಂತ್ರಜ್ಞಾನ (information technology) ದೈತ್ಯ ಸಂಸ್ಥೆ ಇನ್ಫೋಸಿಸ್ ನ ಹಿರಿಯ ಉಪಾಧ್ಯಕ್ಷ ಸಂಜಯ್ ರಾಜಗೋಪಾಲನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ವಿಶಾಲ್ ಸಿಕ್ಕಾ ಅವರು ತಮ್ಮ ಸಿಇಒ ಹಾಗೂ ಎಂಡಿ ಹುದ್ದೆಗೆ ರಾಜೀನಾಮೆ ನೀಡಿದ ಒಂದು ತಿಂಗಳ ನಂತರ ಸಂಜಯ್ ರಾಜಗೋಪಾಲನ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ವಿಶಾಲ್ ಸಿಕ್ಕಾ ಸಂಸ್ಥೆ ತೊರೆದ ತರುವಾಯ ಸಂಜಯ್ ರಾಜಗೋಪಾಲನ್ ಕೂಡ ಹೊರ ನಡೆಯಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು.
ವಿಶಾಲ್ ಸಿಕ್ಕಾ ಅವರು ಜರ್ಮನ್ ಸಾಪ್ಟವೇರ್ ದೈತ್ಯ ಎಸ್ಎಪಿ (SAP) ನಲ್ಲಿದ್ದ ತಮ್ಮ ಅನೇಕ ಸಹೋದ್ಯೋಗಿಗಳನ್ನು ಇನ್ಫೊಸಿಸ್ಗೆ ಕರೆ ತಂದವರಲ್ಲಿ ಸಂಜಯ್ ಒಬ್ಬರಾಗಿದ್ದು, ಅವರನ್ನು 2014ರಲ್ಲಿ ಕರೆತಂದಿದ್ದರು.
ಡಿಸೈನ್ ಥಿಂಕಿಂಗ್ ಮುಖ್ಯಸ್ಥ
ಸಂಜಯ್ ರಾಜಗೋಪಾಲನ್ ಇನ್ಫೊಸಿಸ್ ಸಂಸ್ಥೆಯಲ್ಲಿ ಡಿಸೈನ್ ಥಿಂಕಿಂಗ್ ವಿಭಾಗದ ಮುಖ್ಯಸ್ಥರಾಗಿದ್ದರು. 2014ರ ಆಗಸ್ಟ್ನಿಂದ 2017ರ ಸೆಪ್ಟೆಂಬರ್ವರೆಗೆ ನಾನು ಇನ್ಫೊಸಿಸ್ ಉದ್ಯೋಗಿಯಾಗಿದ್ದೆ. ಈಗ ನಾನು ಸ್ವತಂತ್ರ ವ್ಯಕ್ತಿಯಾಗಿದ್ದೇನೆ ಎಂದು ಸಂಜಯ್ ಹೇಳಿದ್ದಾರೆ.