ಅಮೆರಿಕ ಎಚ್-1ಬಿ ವೀಸಾ ನೀಡುವ ಪ್ರಕ್ರಿಯೆಯನ್ನು ಪುನರ್ ಆರಂಭಿಸಿದ್ದು, ವೀಸಾ ಪ್ರಯೋಜನ ಪಡೆಯುವ ಭಾರತೀಯ ಐಟಿ ಕಂಪನಿಗಳಿಗೆ ವಹಿವಾಟು ನಡೆಸಲು ಸಹಾಯಕವಾಗಲಿದೆ.
ಅಮೆರಿಕ ಎಚ್-1ಬಿ ವೀಸಾ ನೀಡುವ ಪ್ರಕ್ರಿಯೆಯನ್ನು ಪುನರ್ ಆರಂಭಿಸಿದ್ದು, ವೀಸಾ ಪ್ರಯೋಜನ ಪಡೆಯುವ ಭಾರತೀಯ ಐಟಿ ಕಂಪನಿಗಳಿಗೆ ವಹಿವಾಟು ನಡೆಸಲು ಸಹಾಯಕವಾಗಲಿದೆ.
ಉತ್ತಮ ಯೋಜನೆಗಳನ್ನು ರೂಪಿಸಲು ಮತ್ತು ಅವಶ್ಯಕತೆಗಳನ್ನು ಪೂರೈಸಲು ಇದು ನೆರವಾಗುತ್ತದೆ. ಅಮೆರಿಕ ನಾಗರಿಕ ಮತ್ತು ವಲಸೆ ಸೇವಾ (USCIS) ವಿಭಾಗ ಈ ಅರ್ಜಿಯನ್ನು 15 ದಿನಗಳ ಒಳಗಾಗಿ ಪ್ರಕ್ರಿಯೆಗೊಳಿಸುವುದಾಗಿ ಭರವಸೆ ನೀಡಿದೆ. ಎಚ್-1 ಬಿ ವೀಸಾ ನೀತಿ ಬದಲಾವಣೆ ಭಾರತೀಯ ಉದ್ಯೋಗಿಗಳಿಗೆ ಲಾಭ
ತ್ವರಿತ ಕಾರ್ಯಾಚರಣೆ
ಎಚ್-1 ಬಿ ವೀಸಾ ಮಿತಿ
2018ನೇ ಹಣಕಾಸು ವರ್ಷದಲ್ಲಿ 65 ಸಾವಿರ ಇಂತಹ ವೀಸಾ ನೀಡಲು ಅಮೆರಿಕ ನಾಗರಿಕ ಮತ್ತು ವಲಸೆ ಸೇವಾ (USCIS) ವಿಭಾಗ ಮಿತಿಯನ್ನು ನಿಗದಿಪಡಿಸಿದೆ. ದೇಶಿ ಐ.ಟಿ ಸಂಸ್ಥೆಗಳು ಇತ್ತೀಚೆಗೆ ಈ ವೀಸಾ ಮೇಲಿನ ಅವಲಂಬನೆ ಕಡಿಮೆ ಮಾಡಲು ಮುಂದಾಗಿದ್ದವು. ಎಚ್-1 ಬಿ ವೀಸಾ ನವೀಕರಣಗಳ ಪ್ರಕ್ರಿಯೆ ಅಥವಾ ತಿದ್ದುಪಡಿಗಳು (ಅದೇ ಉದ್ಯೋಗದಾತರೊಂದಿಗೆ ಕೆಲಸ ಮಾಡುವ ಸ್ಥಳಗಳಲ್ಲಿನ ಬದಲಾವಣೆಗಳ ಆಧಾರದ ಮೇಲೆ) ಇನ್ನೂ ಪೂರ್ಣಗೊಂಡಿಲ್ಲ ಎನ್ನಲಾಗಿದೆ. ಟ್ರಂಪ್ ಹೊಸ ನೀತಿ ಭಾರತೀಯ ಐಟಿ ರಂಗಕ್ಕೆ ಭೀತಿ!
ಎಚ್-1 ಬಿ ವೀಸಾ ಏನು?
H1-B ವೀಸಾ ಅಮೆರಿಕಾದ ಕಂಪನಿಗಳಲ್ಲಿ ಕೆಲಸ ಮಾಡಲು ವಿದೇಶದಿಂದ ತಜ್ಞ ನೌಕರರನ್ನು ನೇಮಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಅಂದರೆ H-1B ವೀಸಾ ಎನ್ನುವುದು ವಿದೇಶಿ ನೌಕರರನ್ನು ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ನೇಮಿಸಿಕೊಳ್ಳಲು ಅನುಮತಿಸುವ ವಲಸೆ ರಹಿತ ವೀಸಾ. ತಂತ್ರಜ್ಞಾನ ಕಂಪನಿಗಳು ಪ್ರತಿ ವರ್ಷ ಸಾವಿರಾರು ಉದ್ಯೋಗಿಗಳನ್ನು ನೇಮಿಸಿಕೊಳ್ಳಲು h-1b ವೀಸಾ ಅವಲಂಬಿಸಿವೆ.
ನಾಸ್ಕಾಂ ಪ್ರತಿಕ್ರಿಯೆ
ಕಳೆದ ಏಪ್ರಿಲ್ ನಿಂದ ಸ್ಥಗಿತಗೊಳಿಸಲಾಗಿದ್ದ ವೀಸಾ ನೀಡುವ ಪ್ರಕ್ರಿಯೆಯನ್ನು ಪುನರ್ ಆರಂಭಿಸಿರುವುದು ಸ್ವಾಗತಾರ್ಹ ನಡೆಯಾಗಿದೆ. ನಾವು ಇದನ್ನು ನಿರೀಕ್ಷೆ ಮಾಡಿದ್ದೇವು ಎಂದು ನಾಸ್ಕಾಂ ಅಧ್ಯಕ್ಷ ಆರ್. ಚಂದ್ರಶೇಖರ್ ಪ್ರತಿಕ್ರಿಯಿಸಿದ್ದಾರೆ.


Click it and Unblock the Notifications