ಜಿಯೋ ಫೋನ್ ಗಾಗಿ ಎದುರು ನೋಡುತ್ತಿರುವ ಗ್ರಾಹಕರಿಗೆ ನಿರಾಶೆ ಎದುರಾಗಿದ್ದು, ಜಿಯೋ ಫೋನ್ ಸಿಗುವುದು ಇನ್ನೂ ತಡವಾಗಲಿದೆ. ರೂ. 1,500 ಬೆಲೆಯ ಸ್ಮಾರ್ಟ್ಫೋನ್ ಜಿಯೋ ಫೋನ್ ಮುಂಗಡ ಬುಕಿಂಗ್ ಪ್ರಕ್ರಿಯೆ ಆಗಸ್ಟ್ 24ರಿಂದ ಆರಂಭವಾಗಿದೆ.
ರಿಲಯನ್ಸ್ ಜಿಯೋ ಪರಿಚಯಿಸುತ್ತಿರುವ ರೂ. 1,500 ಬೆಲೆಯ ಸ್ಮಾರ್ಟ್ಫೋನ್ ಜಿಯೋ ಫೋನ್ ಮುಂಗಡ ಬುಕಿಂಗ್ ಪ್ರಕ್ರಿಯೆ ಆಗಸ್ಟ್ 24ರಿಂದ ಆರಂಭವಾಗಿದೆ. ಸೆಪ್ಟಂಬರ್ ತಿಂಗಳ ಅಂತ್ಯದೊಳಗಾಗಿ ಜಿಯೋ ಫೋನ್ ಗ್ರಾಹಕರ ಕೈ ಸೇರಲಿದೆ ಎಂದು ರಿಲಯನ್ಸ್ ಸಂಸ್ಥೆ ಹೇಳಿತ್ತು.
ಆದರೆ ಜಿಯೋ ಫೋನ್ ಗಾಗಿ ಎದುರು ನೋಡುತ್ತಿರುವ ಗ್ರಾಹಕರಿಗೆ ನಿರಾಶೆ ಎದುರಾಗಿದ್ದು, ಜಿಯೋ ಫೋನ್ ಸಿಗುವುದು ಇನ್ನೂ ತಡವಾಗಲಿದೆ. ಜಿಯೋ ಫೋನ್ ಆನ್ಲೈನ್ ಮೂಲಕ ಬುಕಿಂಗ್ ಮಾಡಿ ಪಡೆಯೋದು ಹೇಗೆ?
ಮುಖೇಶ್ ಅಂಬಾನಿ ಹೇಳಿದ್ದೇನು?
ತಡವಾಗಲು ಕಾರಣ
ಜಿಯೋ ಫೋನ್ ಗಳಿಗೆ ಭಾರೀ ಬೇಡಿಕೆ ಇರುವ ಕಾರಣ ತಡವಾಗುತ್ತಿದೆ. ಮುಂಗಡ ಬುಕಿಂಗ್ ಪ್ರಕ್ರಿಯೆಯಿಂದಾಗಿ ಫೋನ್ ಬಿಡುಗಡೆಗೆ ತಡವಾಗುತ್ತಿದೆ. ಈಗಾಗಲೇ ಮಿಲಿಯನ್ ಗ್ರಾಹಕರು ಜಿಯೋ ಫೋನ್ ಮುಂಗಡ ಬುಕಿಂಗ್ ಮಾಡಿದ್ದು, ಎಷ್ಟು ಜಿಯೋ ಫೋನ್ ಗಳನ್ನು ಬುಕಿಂಗ್ ಮಾಡಲಾಗಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ 3-4 ಮಿಲಿಯನ್ ಜಿಯೋ ಫೋನ್ ಬುಕಿಂಗ್ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಜಿಯೋ ಫೋನ್ ಯಾವಾಗ ಸಿಗಬಹುದು?
ಜಿಯೋ 4G ಸ್ಮಾರ್ಟ್ಫೋನ್ ಸೆಪ್ಟಂಬರ್ 21ರಿಂದ ಗ್ರಾಹಕರಿಗೆ ಡೆಲಿವರಿ ಮಾಡಲಾಗುವುದು ಎಂದು ರಿಲಯನ್ಸ್ ಜಿಯೋ ಹೇಳಿತ್ತು. ರಿಟೇಲ್ ಮಳಿಗೆ, ರಿಲಯನ್ಸ್ ಡಿಜಿಟಲ್ ಎಕ್ಸಪ್ರೆಸ್ ಮಳಿಗೆಗಳು ಇನ್ನೂ ಜಿಯೋ ಫೋನ್ ಗಳನ್ನು ಪಡೆದಿಲ್ಲ. ಹೀಗಾಗಿ ಅಕ್ಟೋಬರ್ ಮೊದಲ ವಾರದಲ್ಲಿ ಜಿಯೋ ಫೋನ್ ಗ್ರಾಹಕರ ಕೈ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಬುಕಿಂಗ್ ಸ್ಟೇಟಸ್ ತಿಳಿಯಬಹುದು
ನೀವು ಜಿಯೋ ಫೋನ್ ಮುಂಗಡ ಬುಕಿಂಗ್ ಮಾಡಿದ್ದಲ್ಲಿ ಅದರ ಸ್ಥಿತಿಗತಿ ತಿಳಿಯಲು 18008908900 ಕರೆ ಮಾಡಬಹುದಾಗಿದೆ. ಈ ನಂಬರ್ ಗೆ ಕರೆ ಮಾಡಲು ನೀವು ಜಿಯೋ ಫೋನ್ ಬುಕಿಂಗ್ ಮಾಡುವಾಗ ನೀಡಿದ ಜಿಯೋ ನಂಬರ್ ಬಳಕೆ ಮಾಡಬೇಕಾಗುತ್ತದೆ.
ಮುಂಗಡ ಪಾವತಿ ವಿಧಾನ
ಮುಂಗಡವಾಗಿ ಕಾದಿರಿಸುವಾಗ ರೂ. 500 ಗಳನ್ನು ಜಿಯೋಮನಿ ವಾಲೆಟ್, ಪೇಟಿಎಂ, ಯುಪಿಐ, ಕ್ರೆಇಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಇಲ್ಲವೆ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು. ಪಾವತಿಯಾದ ನಂತರ ನಿಮ್ಮ ನಂಬರ್ ಸಂದೇಶ ಬರುತ್ತದೆ. ಸೆಪ್ಟೆಂಬರ್‌ನಲ್ಲಿ ಜಿಯೋ ಮೊಬೈಲ್ ವಿತರಣೆ ಮಾಡುವಾಗ ಉಳಿದ ರೂ. 1,000 ಪಾವತಿಸಬೇಕು.
0 ಬೆಲೆಯಲ್ಲಿ ಫೋನ್!
ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಸಂಸ್ಥೆಯ 40ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಯೋ ಫೋನ್ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿ, ರೂ. 1,500 ಬೆಲೆಯ 4G ಸ್ಮಾರ್ಟ್ಫೋನ್ ಉಚಿತವಾಗಿ ಇರಲಿದೆ ಎಂದು ಹೇಳಿದ್ದರು. ಜಿಯೋಫೋನ್ ಖರೀದಿಸಿದ ಮೂರು ವರ್ಷಗಳ ನಂತರ ಗ್ರಾಹಕರು ಫೋನ್ ಹಿಂದಿರುಗಿಸಿದರೆ ರೂ. 1,500 ಮರಳಿಸಲಾಗುವುದು ಎಂದು ಸಂಸ್ಥೆ ಹೇಳಿದೆ.
ಜಿಯೋ ಫೋನ್ ವೈಶಿಷ್ಟ್ಯಗಳು
ಸ್ಕ್ರೀನ್ ಡಿಸ್ಪ್ಲೇ: 2.40 ಇಂಚುಗಳು
ರೆಸಲ್ಯೂಷನ್: 240 × 320 ಪಿಕ್ಸೆಲ್
ವಿಸ್ತರಿಸಬಹುದಾದ ಸ್ಟೋರೆಜ್: ಲಭ್ಯವಿದೆ
ಬ್ಲೂಟೂತ್: V4.10 FM: ಲಭ್ಯ
ಹೆಡ್ಫೋನ್: ಲಭ್ಯವಿದೆ ಸ್ಪೀಕರ್ ಗಳು: ಲಭ್ಯವಿದೆ
4 ಜಿ / ಎಲ್ ಟಿಇ: ಲಭ್ಯವಿದೆ
ಸಿಮ್ ಸ್ಲಾಟ್: ಸಿಂಗಲ್
* ಜಿಯೋಮ್ಯೂಸಿಕ್, ಜಿಯೋಟಿವಿ, ಜಿಯೋಸಿನಿಮಾ
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications